ADVERTISEMENT
Sunday, March 29, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ರಾಜ್ಯ, ದೇಶ-ವಿದೇಶ, ಸಿನಿಮಾ-ಕ್ರೀಡೆ : ಓದಿ ಇಂದಿನ ಟಾಪ್ 10 ಸುದ್ದಿ

Mahesh M Dhandu by Mahesh M Dhandu
January 23, 2022
in Newsbeat, Saaksha Special, ದೇಶ - ವಿದೇಶ
Share on FacebookShare on TwitterShare on WhatsappShare on Telegram

01. ರಾಜ್ಯದಲ್ಲಿಂದು 165 ಹೊಸ ಓಮಿಕ್ರಾನ್ ಕೇಸ್‍ಗಳು ವರದಿಯಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಸುಧಾಕರ್ ಅವರು, ಬೆಂಗಳೂರಿನಲ್ಲಿ ಇಂದು 165 ಹೊಸ ಓಮಿಕ್ರಾನ್ ಪ್ರಕರಣಗಳು ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 931 ಕ್ಕೆ ತಲುಪಿದೆ ಎಂದು ತಿಳಿಸಿದ್ದಾರೆ. ಇನ್ನು ರಾಜ್ಯದಲ್ಲಿ ಪತ್ತೆಯಾಗಿರುವ ಒಟ್ಟು 931 ಕೇಸ್ ಓಮಿಕ್ರಾನ್ ಕೇಸ್‍ಗಳ ಪೈಕಿ, ಬೆಂಗಳೂರು ನಗರ ಒಂದರಲ್ಲೆ 880 ಕೇಸ್‍ಗಳು ದಾಖಲಾಗಿವೆ.

02 ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 3,33,533 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ನಿನ್ನೆಗಿಂತ 4,171 ಕಡಿಮೆ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಸಕ್ರೀಯ ಪ್ರಕರಣಗಳ ಸಂಖ್ಯೆ 21,87,205 ಇದ್ದು, ಇದರ ಪ್ರತಿಶತವು ಶೇ 5.57 ರಷ್ಟಿದೆ. ಕಳೆದ 24 ಗಂಟೆಯಲ್ಲಿ 2,59,168 ಜನರು ಗುಣಮುಖರಾಗಿದ್ದಾರೆ.

Related posts

ದಿನ ಭವಿಷ್ಯ (09-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (29-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

March 29, 2026
ಗಗನಕ್ಕೇರಿದ ಇಂಧನ ದರ: ಪೆಟ್ರೋಲ್ ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸಲು ರಾಜ್ಯ ಸರ್ಕಾರದ ಮೇಲೆ ಹೆಚ್ಚಿದ ಜನಾಕ್ರೋಶ

ಗಗನಕ್ಕೇರಿದ ಇಂಧನ ದರ: ಪೆಟ್ರೋಲ್ ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸಲು ರಾಜ್ಯ ಸರ್ಕಾರದ ಮೇಲೆ ಹೆಚ್ಚಿದ ಜನಾಕ್ರೋಶ

March 28, 2026

03. ಗೋವಾ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲವಾಗುತ್ತಿದೆ. ಮೊನ್ನೆಯಷ್ಟೆ ಟಿಕೆಟ್‌ ನಿರಾಕರಿಸಿದ್ದಕ್ಕೆ ಗೋವಾ ಮಾಜಿ ಸಿಎಂ ಮನೋಹರ್‌ ಪರಿಕ್ಕರ್‌ ಪುತ್ರ ಉತ್ಪಾಲ್‌ ಪರಿಕ್ಕರ್‌ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಅವರ ಹಾದಿಯಲ್ಲಿಯೇ ಗೋವಾ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿಯ ಹಿರಿಯ ನಾಯಕ ಲಕ್ಷ್ಮೀಕಾಂತ್ ಪರ್ಸೇಕರ್ ಅವರು ಬಿಜೆಪಿ ಸದಸ್ಯತ್ವಕ್ಕೆ ಶನಿವಾರ ರಾಜೀನಾಮೆ ನೀಡಿದ್ದಾರೆ.

today top 10 news in kannada saaksha tv

04 . ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಈ ಬಾರಿ ಸಮಾಜವಾದಿ ಪಾರ್ಟಿ ತುಸು ಜೋರಾಗಿಯೇ ಚುನಾವಣೆಗೆ ತಯಾರಿಗೆ ಆರಂಭಿಸಿದೆ. ಭಾರತದ ಅತಿ ಎತ್ತರದ ಮನುಷ್ಯ ಧರ್ಮೇಂದ್ರ ಪ್ರತಾಪ್‌ ಸಿಂಗ್‌ ಗೆ ಮಣೆ ಹಾಕಿದೆ. ಧರ್ಮೇಂದ್ರ ಪ್ರತಾಪ್‌ ಸಿಂಗ್‌ ಅವರು ಶನಿವಾರ ಅಧಿಕೃತವಾಗಿ ಸಮಾಜವಾದಿ ಪಾರ್ಟಿ ಸೇರಿದ್ದಾರೆ.

05. ನಾನು ಇವತ್ತು ಬೆಳೆಯುವುದಕ್ಕೆ ಕಾರಣ ಒಂದು ಸಂಘ, ಮತ್ತೊಂದು ಕಾರಣ ಯಡಿಯೂರಪ್ಪ ಅವರು. ನಾನು ಏನಾದರೂ ಯಡಿಯೂರಪ್ಪ ವಿರುದ್ಧ ಗುಂಪು ಕಟ್ಟಿದರೆ, ಅದು ನಮ್ಮ ತಂದೆ ತಾಯಿಗೆ ಮಾಡಿದ ದ್ರೋಹದಂತೆ ಎಂದು ಬಿ.ಎಸ್.‌ ಯಡಿಯೂರಪ್ಪ ಕುರಿತು ಕೆ.ಎಸ್.‌ ಈಶ್ವರಪ್ಪ ಭಾವುಕರಾಗಿದ್ದಾರೆ.

06. ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಕೋವಿಡ್ -19 ಪಾಸಿಟಿವ್ ತಗುಲಿದೆ. ಅವರು ಒಂದು ವಾರ ಐಸೋಲೇಟ್ ಆಗಿರುತ್ತಾರೆ. “ತಮ್ಮೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲರಿಗೂ ಐಸೋಲೇಟ್ ಆಗುವಂತೆ ಮತ್ತು ಪರೀಕ್ಷೆ ಮಾಡಿಸಿಕೊಳ್ಳುವಂತೆ ವೆಂಕಯ್ಯ ನಾಯ್ಡು ಅವರು ಮನವಿ ಮಾಡಿಕೊಂಡಿದ್ದಾರೆ.

today top 10 news in kannada saaksha tv

07. ಕೋವಿಡ್ -19 ಓಮಿಕ್ರಾನ್ ರೂಪಾಂತರ ಸಮುದಾಯಕ್ಕೆ ಹರಡುವುದನನ್ನ ತಡೆಯಲು ನ್ಯೂಜಿಲ್ಯಾಂಡ್ ಹಲವು ನಿರ್ಬಂಧಗಳನ್ನು ವಿಧಿಸಿದೆ, ಇದನ್ನ ಫಾಲೋ ಮಾಡಲು ಸ್ವತಃ ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆನ್ ತಮ್ಮ ವಿವಾಹವನ್ನು ರದ್ದುಗೊಳಿಸಿದ್ದಾರೆ.

08. ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷೆಯ ವಿಕ್ರಾಂತ್ ರೋಣ ಸಿನಿಮಾ RRR , ರಾಧೆ ಶ್ಯಾಮ್ ಮಾದರಿಯಲ್ಲೇ ಪೋಸ್ಟ್ ಪೋನ್ ಆಗುತ್ತದೆ ಎನ್ನಲಾಗಿತ್ತು. ಆದ್ರೀಗ ನಿಗದಿತ ದಿನಾಂಕ ಫೆಬ್ರವರಿ 24 ಕ್ಕೆ ವಿಕ್ರಾಂತ್ ರೋಣ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುವುದು ಕನ್ ಫರ್ಮ್ ಎಂದು ನಿರ್ಮಾಪಕ ಜಾಕ್ ಮಂಜು ಅವರೇ ಬಹಿರಂಗ ಪಡಿಸಿದ್ದಾರೆ.

09. ‘ಟರ್ಮಿನೇಟರ್’ ಸಿನಿಮಾ ಖ್ಯಾತಿಯ ನಟ ಅರ್ನಾಲ್ಡ್ ಅವರ ಕಾರು ಸರಣಿ ಅಫಘಾತಕ್ಕೆ ಒಳಗಾಗಿದೆ. ಈ ಅಪಘಾತದಲ್ಲಿ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅರ್ನಾಲ್ಡ್ ಯಾವುದೇ ಗಾಯಗಳಿಲ್ಲದೆ ಬಚಾವ್ ಆಗಿದ್ದಾರೆ. ಅಪಘಾತದ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್.

10. ಸೈಯದ್ ಮೋದಿ ಓಪನ್ ಸೂಪರ್-300 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಅಗ್ರ ಶ್ರೇಯಾಂಕದ ಪಿವಿ ಸಿಂಧು ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಜಯ ಸಾಧಿಸಿದ್ದಾರೆ. ಭಾನುವಾರ ನಡೆದ ಫೈನಲ್‌ನಲ್ಲಿ ಸಿಂಧು 21-13, 21-16ರಲ್ಲಿ ಮಾಳವಿಕಾ ಭನ್ಸೋಡ್ ಅವರನ್ನು ಮಣಿಸಿದ್ದಾರೆ.

Tags: #Saaksha TVBJPCorona VirusOmicron
ShareTweetSendShare
Join us on:

Related Posts

ದಿನ ಭವಿಷ್ಯ (09-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (29-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
March 29, 2026
0

ದಿನ ಭವಿಷ್ಯ: 29-03-2026 1 ಮೇಷ ರಾಶಿ ವೃತ್ತಿ ರಂಗದಲ್ಲಿ ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವ ದಿನವಿದು. ಕಚೇರಿಯಲ್ಲಿ ನಿಮ್ಮ ನಾಯಕತ್ವ ಗುಣಗಳಿಗೆ ಮೇಲಧಿಕಾರಿಗಳಿಂದ ಮೆಚ್ಚುಗೆ...

ಗಗನಕ್ಕೇರಿದ ಇಂಧನ ದರ: ಪೆಟ್ರೋಲ್ ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸಲು ರಾಜ್ಯ ಸರ್ಕಾರದ ಮೇಲೆ ಹೆಚ್ಚಿದ ಜನಾಕ್ರೋಶ

ಗಗನಕ್ಕೇರಿದ ಇಂಧನ ದರ: ಪೆಟ್ರೋಲ್ ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸಲು ರಾಜ್ಯ ಸರ್ಕಾರದ ಮೇಲೆ ಹೆಚ್ಚಿದ ಜನಾಕ್ರೋಶ

by Shwetha
March 28, 2026
0

ಬೆಂಗಳೂರು: ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡುವ ಮೂಲಕ ದೇಶದ ಜನತೆಗೆ ತುಸು ನೆಮ್ಮದಿ ನೀಡಿದೆ. ಕೇಂದ್ರದ ಈ ನಡೆ...

115 ರೂಪಾಯಿ ಪೊಂಗಲ್ ತರಿಸಲು 273 ರೂಪಾಯಿ ಪಾವತಿ: ಸ್ವಿಗ್ಗಿ ದರದ ವಿರುದ್ಧ ಸುಮಲತಾ ಅಂಬರೀಶ್ ಕೆಂಡಾಮಂಡಲ

115 ರೂಪಾಯಿ ಪೊಂಗಲ್ ತರಿಸಲು 273 ರೂಪಾಯಿ ಪಾವತಿ: ಸ್ವಿಗ್ಗಿ ದರದ ವಿರುದ್ಧ ಸುಮಲತಾ ಅಂಬರೀಶ್ ಕೆಂಡಾಮಂಡಲ

by Shwetha
March 28, 2026
0

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಫುಡ್ ಡೆಲಿವರಿ ಆ್ಯಪ್‌ಗಳು ಜನರ ಜೀವನದ ಅವಿಭಾಜ್ಯ ಅಂಗವಾಗಿವೆ. ಆದರೆ ಈ ಆ್ಯಪ್‌ಗಳು ವಿಧಿಸುವ ಅತಿಯಾದ ಸೇವಾ ಶುಲ್ಕ ಮತ್ತು ಡೆಲಿವರಿ...

ದೇಶದಲ್ಲಿ ಲಾಕ್‌ಡೌನ್ ಇಲ್ಲ.. ಕೇಂದ್ರದ ಸ್ಪಷ್ಟನೆ

ದೇಶದಲ್ಲಿ ಲಾಕ್‌ಡೌನ್ ಇಲ್ಲ.. ಕೇಂದ್ರದ ಸ್ಪಷ್ಟನೆ

by Shwetha
March 28, 2026
0

ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ದೇಶದಲ್ಲಿ ಬಿಕ್ಕಟ್ಟು ಉಂಟಾಗಿರುವ ಹಿನ್ನೆಲೆ, ಲಾಕ್‌ಡೌನ್ ಅನಿವಾರ್ಯ ಎಂಬ ವದಂತಿಗಳು ಹರಿದಾಡುತ್ತಿವೆ. ಆದರೆ ಈ ಸುದ್ದಿಗಳನ್ನು ಸಚಿವ ಹರ್ದೀಪ್ ಸಿಂಗ್ ಪುರಿ ತಳ್ಳಿ...

1ನೇ ತರಗತಿ ಪ್ರವೇಶಕ್ಕೆ ವಯೋಮಿತಿ ಸಡಿಲಿಕೆ; ಎಲ್ಲ ಶಾಲೆಗಳಿಗೆ ಅನ್ವಯ

1ನೇ ತರಗತಿ ಪ್ರವೇಶಕ್ಕೆ ವಯೋಮಿತಿ ಸಡಿಲಿಕೆ; ಎಲ್ಲ ಶಾಲೆಗಳಿಗೆ ಅನ್ವಯ

by Shwetha
March 28, 2026
0

ರಾಜ್ಯ ಸರ್ಕಾರ 2026-27ನೇ ಶೈಕ್ಷಣಿಕ ವರ್ಷಕ್ಕೆ 1ನೇ ತರಗತಿ ಪ್ರವೇಶದ ವಯೋಮಿತಿಯನ್ನು 60 ದಿನಗಳವರೆಗೆ ಸಡಿಲಗೊಳಿಸಿದೆ. ಇದುವರೆಗೆ ಜೂನ್ 1ರೊಳಗೆ ಮಗುವಿಗೆ 6 ವರ್ಷ ವಯಸ್ಸು ಪೂರ್ಣವಾಗಿರಬೇಕು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram