Tuesday, October 3, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ರಾಜ್ಯ, ದೇಶ-ವಿದೇಶ, ಸಿನಿಮಾ-ಕ್ರೀಡೆ : ಓದಿ ಇಂದಿನ ಟಾಪ್ 10 ಸುದ್ದಿ

Mahesh M Dhandu by Mahesh M Dhandu
January 23, 2022
in Newsbeat, Saaksha Special, ದೇಶ - ವಿದೇಶ
Share on FacebookShare on TwitterShare on WhatsappShare on Telegram

01. ರಾಜ್ಯದಲ್ಲಿಂದು 165 ಹೊಸ ಓಮಿಕ್ರಾನ್ ಕೇಸ್‍ಗಳು ವರದಿಯಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಸುಧಾಕರ್ ಅವರು, ಬೆಂಗಳೂರಿನಲ್ಲಿ ಇಂದು 165 ಹೊಸ ಓಮಿಕ್ರಾನ್ ಪ್ರಕರಣಗಳು ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 931 ಕ್ಕೆ ತಲುಪಿದೆ ಎಂದು ತಿಳಿಸಿದ್ದಾರೆ. ಇನ್ನು ರಾಜ್ಯದಲ್ಲಿ ಪತ್ತೆಯಾಗಿರುವ ಒಟ್ಟು 931 ಕೇಸ್ ಓಮಿಕ್ರಾನ್ ಕೇಸ್‍ಗಳ ಪೈಕಿ, ಬೆಂಗಳೂರು ನಗರ ಒಂದರಲ್ಲೆ 880 ಕೇಸ್‍ಗಳು ದಾಖಲಾಗಿವೆ.

02 ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 3,33,533 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ನಿನ್ನೆಗಿಂತ 4,171 ಕಡಿಮೆ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಸಕ್ರೀಯ ಪ್ರಕರಣಗಳ ಸಂಖ್ಯೆ 21,87,205 ಇದ್ದು, ಇದರ ಪ್ರತಿಶತವು ಶೇ 5.57 ರಷ್ಟಿದೆ. ಕಳೆದ 24 ಗಂಟೆಯಲ್ಲಿ 2,59,168 ಜನರು ಗುಣಮುಖರಾಗಿದ್ದಾರೆ.

Related posts

ಕಾಲೇಜು ಆವರಣದಲ್ಲಿ ಕೋಳಿ, ಮೇಕೆ ಬಲಿ!?

ಕಾಲೇಜು ಆವರಣದಲ್ಲಿ ಕೋಳಿ, ಮೇಕೆ ಬಲಿ!?

October 2, 2023
ಕಾಂಗ್ರೆಸ್ ಉಗ್ರರಿಗೆ ಮುಕ್ತ ಅವಕಾಶ ನೀಡಿತ್ತು- ಪ್ರಧಾನಿ ಮೋದಿ ಆರೋಪ

ಕಾಂಗ್ರೆಸ್ ಉಗ್ರರಿಗೆ ಮುಕ್ತ ಅವಕಾಶ ನೀಡಿತ್ತು- ಪ್ರಧಾನಿ ಮೋದಿ ಆರೋಪ

October 2, 2023

03. ಗೋವಾ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲವಾಗುತ್ತಿದೆ. ಮೊನ್ನೆಯಷ್ಟೆ ಟಿಕೆಟ್‌ ನಿರಾಕರಿಸಿದ್ದಕ್ಕೆ ಗೋವಾ ಮಾಜಿ ಸಿಎಂ ಮನೋಹರ್‌ ಪರಿಕ್ಕರ್‌ ಪುತ್ರ ಉತ್ಪಾಲ್‌ ಪರಿಕ್ಕರ್‌ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಅವರ ಹಾದಿಯಲ್ಲಿಯೇ ಗೋವಾ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿಯ ಹಿರಿಯ ನಾಯಕ ಲಕ್ಷ್ಮೀಕಾಂತ್ ಪರ್ಸೇಕರ್ ಅವರು ಬಿಜೆಪಿ ಸದಸ್ಯತ್ವಕ್ಕೆ ಶನಿವಾರ ರಾಜೀನಾಮೆ ನೀಡಿದ್ದಾರೆ.

today top 10 news in kannada saaksha tv

04 . ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಈ ಬಾರಿ ಸಮಾಜವಾದಿ ಪಾರ್ಟಿ ತುಸು ಜೋರಾಗಿಯೇ ಚುನಾವಣೆಗೆ ತಯಾರಿಗೆ ಆರಂಭಿಸಿದೆ. ಭಾರತದ ಅತಿ ಎತ್ತರದ ಮನುಷ್ಯ ಧರ್ಮೇಂದ್ರ ಪ್ರತಾಪ್‌ ಸಿಂಗ್‌ ಗೆ ಮಣೆ ಹಾಕಿದೆ. ಧರ್ಮೇಂದ್ರ ಪ್ರತಾಪ್‌ ಸಿಂಗ್‌ ಅವರು ಶನಿವಾರ ಅಧಿಕೃತವಾಗಿ ಸಮಾಜವಾದಿ ಪಾರ್ಟಿ ಸೇರಿದ್ದಾರೆ.

05. ನಾನು ಇವತ್ತು ಬೆಳೆಯುವುದಕ್ಕೆ ಕಾರಣ ಒಂದು ಸಂಘ, ಮತ್ತೊಂದು ಕಾರಣ ಯಡಿಯೂರಪ್ಪ ಅವರು. ನಾನು ಏನಾದರೂ ಯಡಿಯೂರಪ್ಪ ವಿರುದ್ಧ ಗುಂಪು ಕಟ್ಟಿದರೆ, ಅದು ನಮ್ಮ ತಂದೆ ತಾಯಿಗೆ ಮಾಡಿದ ದ್ರೋಹದಂತೆ ಎಂದು ಬಿ.ಎಸ್.‌ ಯಡಿಯೂರಪ್ಪ ಕುರಿತು ಕೆ.ಎಸ್.‌ ಈಶ್ವರಪ್ಪ ಭಾವುಕರಾಗಿದ್ದಾರೆ.

06. ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಕೋವಿಡ್ -19 ಪಾಸಿಟಿವ್ ತಗುಲಿದೆ. ಅವರು ಒಂದು ವಾರ ಐಸೋಲೇಟ್ ಆಗಿರುತ್ತಾರೆ. “ತಮ್ಮೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲರಿಗೂ ಐಸೋಲೇಟ್ ಆಗುವಂತೆ ಮತ್ತು ಪರೀಕ್ಷೆ ಮಾಡಿಸಿಕೊಳ್ಳುವಂತೆ ವೆಂಕಯ್ಯ ನಾಯ್ಡು ಅವರು ಮನವಿ ಮಾಡಿಕೊಂಡಿದ್ದಾರೆ.

today top 10 news in kannada saaksha tv

07. ಕೋವಿಡ್ -19 ಓಮಿಕ್ರಾನ್ ರೂಪಾಂತರ ಸಮುದಾಯಕ್ಕೆ ಹರಡುವುದನನ್ನ ತಡೆಯಲು ನ್ಯೂಜಿಲ್ಯಾಂಡ್ ಹಲವು ನಿರ್ಬಂಧಗಳನ್ನು ವಿಧಿಸಿದೆ, ಇದನ್ನ ಫಾಲೋ ಮಾಡಲು ಸ್ವತಃ ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆನ್ ತಮ್ಮ ವಿವಾಹವನ್ನು ರದ್ದುಗೊಳಿಸಿದ್ದಾರೆ.

08. ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷೆಯ ವಿಕ್ರಾಂತ್ ರೋಣ ಸಿನಿಮಾ RRR , ರಾಧೆ ಶ್ಯಾಮ್ ಮಾದರಿಯಲ್ಲೇ ಪೋಸ್ಟ್ ಪೋನ್ ಆಗುತ್ತದೆ ಎನ್ನಲಾಗಿತ್ತು. ಆದ್ರೀಗ ನಿಗದಿತ ದಿನಾಂಕ ಫೆಬ್ರವರಿ 24 ಕ್ಕೆ ವಿಕ್ರಾಂತ್ ರೋಣ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುವುದು ಕನ್ ಫರ್ಮ್ ಎಂದು ನಿರ್ಮಾಪಕ ಜಾಕ್ ಮಂಜು ಅವರೇ ಬಹಿರಂಗ ಪಡಿಸಿದ್ದಾರೆ.

09. ‘ಟರ್ಮಿನೇಟರ್’ ಸಿನಿಮಾ ಖ್ಯಾತಿಯ ನಟ ಅರ್ನಾಲ್ಡ್ ಅವರ ಕಾರು ಸರಣಿ ಅಫಘಾತಕ್ಕೆ ಒಳಗಾಗಿದೆ. ಈ ಅಪಘಾತದಲ್ಲಿ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅರ್ನಾಲ್ಡ್ ಯಾವುದೇ ಗಾಯಗಳಿಲ್ಲದೆ ಬಚಾವ್ ಆಗಿದ್ದಾರೆ. ಅಪಘಾತದ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್.

10. ಸೈಯದ್ ಮೋದಿ ಓಪನ್ ಸೂಪರ್-300 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಅಗ್ರ ಶ್ರೇಯಾಂಕದ ಪಿವಿ ಸಿಂಧು ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಜಯ ಸಾಧಿಸಿದ್ದಾರೆ. ಭಾನುವಾರ ನಡೆದ ಫೈನಲ್‌ನಲ್ಲಿ ಸಿಂಧು 21-13, 21-16ರಲ್ಲಿ ಮಾಳವಿಕಾ ಭನ್ಸೋಡ್ ಅವರನ್ನು ಮಣಿಸಿದ್ದಾರೆ.

Tags: #Saaksha TVBJPCorona VirusOmicron
ShareTweetSendShare
Join us on:

Related Posts

ಕಾಲೇಜು ಆವರಣದಲ್ಲಿ ಕೋಳಿ, ಮೇಕೆ ಬಲಿ!?

ಕಾಲೇಜು ಆವರಣದಲ್ಲಿ ಕೋಳಿ, ಮೇಕೆ ಬಲಿ!?

by Honnappa Lakkammanavar
October 2, 2023
0

ಪ್ರತಿಷ್ಠಿತ ವಿವಿಯ ಆವರಣದಲ್ಲಿ ಅಮವಾಸ್ಯೆಯ ದಿನ ಕೋಳಿ, ಮೇಕೆ ಬಲಿ ಕೊಡಲಾಗುತ್ತಿದೆ ಎನ್ನಲಾಗುತ್ತಿದೆ. ತೆಲಂಗಾಣದ ಉಸ್ಮಾನಿಯಾ ನಂತರ ಕಾಕತೀಯ ವಿಶ್ವವಿದ್ಯಾಲಯ (Kakatiya University) ಹೆಚ್ಚು ಹೆಸರು ಮಾಡಿದೆ....

ಕಾಂಗ್ರೆಸ್ ಉಗ್ರರಿಗೆ ಮುಕ್ತ ಅವಕಾಶ ನೀಡಿತ್ತು- ಪ್ರಧಾನಿ ಮೋದಿ ಆರೋಪ

ಕಾಂಗ್ರೆಸ್ ಉಗ್ರರಿಗೆ ಮುಕ್ತ ಅವಕಾಶ ನೀಡಿತ್ತು- ಪ್ರಧಾನಿ ಮೋದಿ ಆರೋಪ

by Honnappa Lakkammanavar
October 2, 2023
0

ಜೈಪುರ : ಕಾಂಗ್ರೆಸ್ ದೇಶದಲ್ಲಿ ಉಗ್ರರಿಗೆ ಮುಕ್ತ ಅವಕಾಶ ನೀಡಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ರಾಜಸ್ಥಾನದಲ್ಲಿ ಬಿಜೆಪಿ ರ್ಯಾಲಿ ಉದ್ಧೇಶಿಸಿ ಮಾತನಾಡಿದ ಅವರು, ಭಯೋತ್ಪಾದಕ...

ಮೇಘಾಲಯದಲ್ಲಿ ಪ್ರಭಲ ಭೂಕಂಪ

ಮೇಘಾಲಯದಲ್ಲಿ ಪ್ರಭಲ ಭೂಕಂಪ

by Honnappa Lakkammanavar
October 2, 2023
0

ಶಿಲ್ಲಾಂಗ್ : ಮೇಘಾಲಯಲ್ಲಿ (Meghalaya) ಪ್ರಭಲ ಭೂಕಂಪ ಸಂಭವಿಸಿದೆ. ಇಂದು ಸಂಜೆ 6:15ರ ವೇಳೆಗೆ 5.2 ತೀವ್ರತೆ ಪ್ರಬಲ ಭೂಕಂಪನ (Earthquake) ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ...

ಒಂದೇ ಭಾರತ್ ರೈಲು ಸಂಚಾರಕ್ಕೆ ಅಡ್ಡಿ ಮಾಡಿದ ದುಷ್ಕರ್ಮಿಗಳು

ಒಂದೇ ಭಾರತ್ ರೈಲು ಸಂಚಾರಕ್ಕೆ ಅಡ್ಡಿ ಮಾಡಿದ ದುಷ್ಕರ್ಮಿಗಳು

by Honnappa Lakkammanavar
October 2, 2023
0

ಜೈಪುರ: ರೈಲ್ವೆ ಹಳಿಯ (Railway Track) ಮೇಲೆ ಕಲ್ಲು, ರಾಡ್ ಗಳನ್ನು ಇಟ್ಟು ದುಷ್ಕರ್ಮಿಗಳು ಸಂಚಾರಕ್ಕೆ ಅಡ್ಡಿ ಮಾಡಿರುವ ಘಟನೆ ನಡೆದಿದೆ. ಕೂಡಲೇ ಎಚ್ಚೆತ್ತುಕೊಂಡ ವಂದೇ ಭಾರತ್...

ಟ್ರಕ್ ಅಪಘಾತಕ್ಕೆ 10 ಜನ ವಲಸಿಗರು

ಟ್ರಕ್ ಅಪಘಾತಕ್ಕೆ 10 ಜನ ವಲಸಿಗರು

by Honnappa Lakkammanavar
October 2, 2023
0

ಮೆಕ್ಸಿಕೋ ಸಿಟಿ : ದಕ್ಷಿಣ ಮೆಕ್ಸಿಕನ್ (Mexico) ನ ಚಿಯಾಪಾಸ್‌ನಲ್ಲಿ ಸರಕು ಸಾಗಣೆ ವೇಳೆ ಟ್ರಕ್ ವೊಂದು ಅಪಘಾತವಾಗಿದ್ದು, 10 ಜನ ವಲಸಿಗರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಅಲ್ಲದೇ,...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

1.5 ಲಕ್ಷ ರೂ. ಮೌಲ್ಯದ ಮಂಗಳ ಸೂತ್ರ ನುಂಗಿದ ಎಮ್ಮೆ

1.5 ಲಕ್ಷ ರೂ. ಮೌಲ್ಯದ ಮಂಗಳ ಸೂತ್ರ ನುಂಗಿದ ಎಮ್ಮೆ

October 2, 2023
ಬ್ಯಾರಿಕೇಡ್ ಎಳೆದ ಪೊಲೀಸರು; ಮಹಿಳೆಯ ಮೇಲೆ ಹರಿದ ಟಿಪ್ಪರ್

ಬ್ಯಾರಿಕೇಡ್ ಎಳೆದ ಪೊಲೀಸರು; ಮಹಿಳೆಯ ಮೇಲೆ ಹರಿದ ಟಿಪ್ಪರ್

October 2, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram