Todd Murphy : ಏಳು ವಿಕೆಟ್ ಪಡೆದು ದಾಖಲೆ ಬರೆದ ಟಾಡ್ ಮರ್ಫಿ
ಆಸ್ಟ್ರೇಲಿಯಾದ ಯುವ ಸ್ಪಿನ್ನರ್ ಟಾಡ್ ಮರ್ಫಿ ಪದಾರ್ಪಣೆ ಪಂದ್ಯದಲ್ಲೆ ಇತಿಹಾಸ ನಿರ್ಮಿಸಿದ್ದಾರೆ.
ಭಾರತ ವಿರುದ್ಧದ ನಾಗ್ಪುರ ಟೆಸ್ಟ್ ಪಂದ್ಯದಲ್ಲಿ ಯುವ ಸ್ಪಿನ್ನರ್ ಟಾಡ್ ಮರ್ಪಿ ಬರೋಬ್ಬರಿ 7 ವಿಕೆಟ್ ಪಡೆದು ಮಿಂಚಿದ್ದಾರೆ.
ಮೊದಲೆರಡು ದಿನದಾಟದ ಪಂದ್ಯದಲ್ಲಿ ಕೆ.ಎಲ್.ರಾಹುಲ್, ಆರ್,ಅಶ್ವಿನ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೀಕ ಭರತ್ ಅವರುಗಳನ್ನು ಬಲಿತೆಗೆದುಕೊಂಡಿದ್ದರು.
ಮೂರನೆ ದಿನದಾಟದ ಪಂದ್ಯದಲ್ಲಿ ರವೀಂದ್ರ ಜಡೇಜಾ, ಮೊಹ್ಮದ್ ಶಮಿ ಅವರನ್ನು ಪೆವಲಿಯನ್ಗೆ ಅಟ್ಟಿದರು.ಇದರೊಂದಿಗೆ ಮರ್ಫಿ 47 ಓವರ್ಗಳಿಂದ 12 ಮೇಡನ್ ಮಾಡಿ 124 ರನ್ ನೀಡಿ 7 ವಿಕೆಟ್ ಪಡೆದು ಮಿಂಚಿದರು.
ಪದಾರ್ಪಣೆ ಪಂದ್ಯದಲ್ಲೆ 7 ವಿಕೆಟ್ ಪಡೆದ ಆಸ್ಟ್ರೇಲಿಯಾದ ಅತಿ ಕಿರಿಯ ಆಟಗಾರ ಎನಿಸಿದ್ದಾರೆ. ಜೊತೆಗೆ ಟೆಸ್ಟ್ನಲ್ಲಿ 5 ವಿಕೆಟ್ ಪಡೆದ ಆಸ್ಟ್ರೇಲಿಯಾದ 35 ಬೌಲರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
Todd Murphy took 7 wickets and made new record








