ಮೀರಾಬಾಯಿ ಚಾನುಗೆ ಬಂಗಾರದ ಪದಕ ಸಿಗುವ ಅವಕಾಶ?

1 min read
Tokyo 2020 Mirabai Chanu

ಮೀರಾಬಾಯಿ ಚಾನುಗೆ ಬಂಗಾರದ ಪದಕ ಸಿಗುವ ಅವಕಾಶ?

ಅಚ್ಚರಿಯ ಬೆಳವಣಿಗೆಯಲ್ಲಿ ಭಾರತದ ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಮೀರಾಬಾಯಿ ಚಾನು ಅವರಿಗೆ ಬಂಗಾರದ ಪದಕ ಸಿಗುವ ಅವಕಾಶವೊಂದು ಲಭಿಸಿದೆ. ಮೊನ್ನೆ ನಡೆದ ವೆಯಿಟ್ ಲಿಫ್ಟಿಂಗ್ ನ 49 ಕೆ ಜಿ ವಿಭಾಗದಲ್ಲಿ ಚಿನ್ನದ ಪದಕ ವಿಜೇತ ಚೀನಾದ ಜ್ಹಿಹೂಇ ಅವರನ್ನು ಡೋಪಿಂಗ್ ವಿರೋಧಿ ಅಧಿಕಾರಿಗಳು ಪರೀಕ್ಷಿಸುತ್ತಿದ್ದಾರೆ ಎಂಬ ವರದಿಗಳ ಪ್ರಸಾರವಾಗಿದ್ದು ಒಂದು ವೇಳೆ ಜ್ಹಿಹೂಇ ಪರೀಕ್ಷೆಯಲ್ಲಿ ವಿಫಲವಾದರೆ, ಭಾರತದ ಪರವಾಗಿ ಮೀರಾಬಾಯಿಗೆ ವೇಟ್‌ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಮಹಿಳೆಯಾಗುವ ಐತಿಹಾಸಿಕ ಕ್ಷಣವಾಗಲಿದೆ.
Tokyo 2020 Mirabai Chanu
ವೈರ್ ಏಜೆನ್ಸಿ ಎಎನ್‌ಐ ಇತ್ತೀಚಿನ ಬೆಳವಣಿಗೆಯ ಬಗ್ಗೆ ವರದಿ ಮಾಡಿದ್ದು, ಜ್ಹಿಹೂಇ ಅವರನ್ನು ಟೋಕಿಯೊದಲ್ಲಿ ಉಳಿಯಲು ಹೇಳಲಾಗಿದ್ದು ಪರೀಕ್ಷೆಯನ್ನು ಮಾಡಲಾಗುವುದು ಎಂದು ಮೂಲವು ತಿಳಿಸಿದೆ. ಜ್ಹಿಹೂಇ ಒಟ್ಟು 210 ಕೆ.ಜಿ ಭಾರ ಎತ್ತುವ ಮೂಲಕ ಚಿನ್ನದ ಪದಕ ಗಳಿಸಿದ್ದಾರೆ. ಮೀರಾಬಾಯಿ ಒಟ್ಟು 202 ಕೆ.ಜಿ ಭಾರ ಎತ್ತುವ ಮೂಲಕ ಬೆಳ್ಳಿಗೆ ತೃಪ್ತಿ ಪಡೆದರು. ನಿಯಮಗಳ ಪ್ರಕಾರ, ಪದಕ ವಿಜೇತರು ಡೋಪಿಂಗ್ ಪರೀಕ್ಷೆಯಲ್ಲಿ ವಿಫಲವಾದರೆ, ಅವರ ಕೆಳಗೆ ಸ್ಥಾನ ಪಡೆದ ಕ್ರೀಡಾಪಟು ಅವರನ್ನು ಪದಕ ಸ್ಥಾನದಲ್ಲಿ ಬದಲಾಯಿಸುತ್ತಾರೆ.

ಒಟ್ಟಾರೆ ಡೋಪಿಂಗ್ ಪೆಡಂಬೂತಕ್ಕೆ ಚೀನಾದ ಕನಸು ಭಗ್ನವಾದರೆ ಇತ್ತ ಬೆಳ್ಳಿಯಿಂದ ಚಿನ್ನದ ಪದಕಕ್ಕೆ ಮುತ್ತಿಡಲು ಭಾರತದ ಮಣ್ಣಿನ ಮಗಳು ತುದಿಗಾಲಲ್ಲಿ ಕಾಯುತ್ತಿದ್ದಾಳೆ.

#Tokyo2020 #MirabaiChanu #Goldmedal

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd