ಟೋಕಿಯೋ ಒಲಿಂಪಿಕ್ಸ್ – ಪಿ.ವಿ.ಸಿಂಧು, ಸಾಯ್ ಪ್ರಣೀತ್, ಚಿರಾಗ್ ಶೆಟ್ಟಿ, ಸಾತ್ವಿಕ್ ರಾಜ್ ಸ್ಪರ್ಧೆ
2021ರ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಬಾಡ್ಮಿಟಂಟನ್ ಸ್ಪರ್ಧಿಗಳ ಹೆಸರುಗಳನ್ನು ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಪ್ರಕಟಿಸಿದೆ.
ಹಾಲಿ ಒಲಿಂಪಿಕ್ ಚಾಂಪಿಯನ್ ಚೀನಾದ ಚೆನ್ ಲುಂಗ್, 2017ರ ವಿಶ್ವ ಚಾಂಪಿಯನ್ ಡೆನ್ಮಾರ್ಕ್ ನ ವಿಕ್ಟರ್ ಅಕ್ಸಸ್ಲೆನ್ ಒಕುಹಾರ ನೊಝೋಮಿ ಸೇರಿದಂತೆ ಭಾರತದ ಪಿ.ವಿ. ಸಿಂಧು ಕೂಡ ಪಟ್ಟಿಯಲ್ಲಿದ್ದಾರೆ.
ಪಿ.ವಿ. ಸಿಂಧು ಅವರು 2016ರ ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿಯ ಪದಕವನ್ನು ಗೆದ್ದಿದ್ದರು. ಆದ್ರೆ ರಿಯೋ ಒಲಿಂಪಿಕ್ಸ್ ನಲ್ಲಿ ಬಂಗಾರ ಗೆದ್ದ ಕಾರೊಲಿನಾ ಮರಿನ್ ಅವರು ಗಾಯದಿಂದಾಗಿ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸುತ್ತಿಲ್ಲ.
ಟೋಕಿಯೋ ಒಲಿಂಪಿಕ್ಸ್ ನಲ್ಲಿ 87 ಪುರುಷರ ಆಟಗಾರರು ಮತ್ತು 86 ಮಹಿಳಾ ಆಟಗಾರ್ತಿಯರು ಸ್ಪರ್ಧಿಸುತ್ತಿದ್ದಾರೆ. ಒಟ್ಟು ಐದು ವಿಭಾಗದಲ್ಲಿ ನಡೆಯಲಿರುವ ಸ್ಪರ್ಧೆಯು ಜುಲೈ 24ರಿಂದ ಆರಂಭವಾಗಲಿದೆ.
ಪಿ.ವಿ. ಸಿಂಧು ಸೇರಿದಂತೆ ಭಾರತದ ಒಟ್ಟು ನಾಲ್ಕು ಸ್ಪರ್ಧಿಗಳು ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಪಿ.ವಿ. ಸಿಂಧು, ಸಾಯ್ ಪ್ರಣೀತ್ ಸಿಂಗಲ್ಸ್ ವಿಭಾಗದಲ್ಲಿ ಭಾಗವಹಿಸಿದ್ರೆ, ಸಾತ್ವಿಕ್ ರಾಜ್ ರಾಂಕಿ ರೆಡ್ಡಿ, ಚಿರಾಗ್ ಶೆಟ್ಟಿಯವರು ಡಬಲ್ಸ್ ನಲ್ಲಿ ಆಡುತ್ತಿದ್ದಾರೆ. ಸೈನಾ ನೆಹ್ವಾಲ್ ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಆಡುತ್ತಿಲ್ಲ.