ಟೋಕಿಯೋ ಒಲಿಂಪಿಕ್ಸ್ : ಸೆಮಿಫೈನಲ್ ಗೆ ಭಜರಂಗ್ ಪೂನಿಯಾ
ಟೋಕಿಯೋ : ಒಲಂಪಿಕ್ಸ್ ನ ಪುರುಷರ 57 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಭಾರತದ ಕುಸ್ತಿಪಟು ಭಜರಂಗ್ ಪುನಿಯಾ ಸೆಮೀಸ್ ಗೆ ಎಂಟ್ರಿಕೊಟ್ಟಿದ್ದಾರೆ.
ಇಂದು ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇರಾನಿನ ಮೊರ್ಟೆಜಾ ಗೈಸಿಯನ್ನು ಸೋಲಿಸುವ ಮೂಲಕ ಭಜರಂಗ್ ಪುನಿಯಾ ಟೋಕಿಯೋ ಒಲಿಂಪಿಕ್ಸ್ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಭಜರಂಗ್ ಪೂನಿಯಾಗೆ ಇದು ಮೊದಲ ಒಲಿಂಪಿಕ್ಸ್ ಸೆಮಿಫೈನಲ್ ಆಗಿದ್ದು, ಇಂದು ನಡೆಯುವ ಸೆಮಿ ಫೈನಲ್ ಕಾದಾಟದಲ್ಲಿ ಅರ್ಜೆಬೈಜನ್ನ ಹಾಜಿ ಅಲಿಯಾವ್ರನ್ನು ಎದುರಿಸಲಿದ್ದಾರೆ.
ಹಾಜಿ ಅಲಿಯಾವ್ ಮೂರು ಬಾರಿ ವಿಶ್ವ ಚಾಂಪಿಯನ್ ಆಗಿದ್ದು, 2016 ರಿಯೋ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದಿದ್ದರು