ಟೋಕಿಯೋ ಒಲಂಪಿಕ್ಸ್ : ಸೆಮೀಸ್ ನಲ್ಲಿ ಪಿ.ವಿ.ಸಿಂಧುಗೆ ಸೋಲು
ಟೋಕಿಯೋ : ಮಹಿಳೆಯರ ಸಿಂಗಲ್ಸ್ ನ ಸೆಮಿಫೈನಲ್ಸ್ ನಲ್ಲಿ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಸೋಲು ಕಂಡಿದ್ದಾರೆ. ವಿಶ್ವದ ನಂಬರ್ ಒನ್ ಮಹಿಳಾ ಬ್ಯಾಡ್ಮಿಂಟನ್ ತಾರೆ ತೈ ತ್ಸು ವಿರುದ್ಧ ಪಿ.ವಿ.ಸಿಂಧು ಸೋಲುಂಡಿದ್ದು, ನಾಳೆ ಕಂಚಿನ ಪದಕಕ್ಕಾಗಿ ಹೋರಾಟ ನಡೆಸಲಿದ್ದಾರೆ.
ಇಂದಿನ ಪಂದ್ಯದಲ್ಲಿ ಆರಂಭದಿಂದಲೂ ಒತ್ತಡದಲ್ಲಿ ಆಡಿದ ಪಿ.ವಿ.ಸಿಂಧು ಮೊದಲಾರ್ಧದಲ್ಲಿ 18-21 ಗಳೊಂದಿಗೆ ಹಿನ್ನೆಡೆ ಅನುಭವಿಸಿದರು. ಇದರ ಲಾಭ ಪಡೆದ ತೈ ತ್ಸು ದ್ವಿತೀಯಾರ್ಧದಲ್ಲಿ ಅಬ್ಬರಿಸಿದರು. ಪರಿಣಾಮ 12-21 ಸೆಟ್?ಗಳ ಅಂತರದಿಂದ ಸಿಂಧು ವಿರುದ್ಧ ಗೆಲುವು ಸಾಧಿಸಿದರು.
ಈ ಹಿಂದೆ ಪಿ.ವಿ. ಸಿಂಧು ಹಾಗೂ ತೈ ತ್ಸು 18 ಬಾರಿ ಮುಖಾಮುಖಿಯಾಗಿದ್ದು,, ಇದರಲ್ಲಿ ತೈ ತ್ಸು 13 ಪಂದ್ಯಗಳನ್ನು ಗೆದ್ದಿದ್ದರೆ, ಸಿಂಧು ಕೇವಲ 5 ಗೆಲುವು ದಾಖಲಿಸಿದ್ದಾರೆ.