ಟೋಕಿಯೋ ಒಲಂಪಿಕ್ಸ್ : ಕಂಚಿನ ಹೋರಾಟದಲ್ಲಿ ಮಹಿಳಾ ಹಾಕಿ ತಂಡಕ್ಕೆ ಸೋಲು women’s hockey team saaksha tv
ಟೋಕಿಯೋ : ಒಲಂಪಿಕ್ಸ್ ನ ಮಹಿಳಾ ಹಾಕಿ ವಿಭಾಗದ ಕಂಚಿನ ಹೋರಾಟದಲ್ಲಿ ಭಾರತದ ಮಹಿಳಾ ತಂಡ ಸೋಲು ಕಂಡಿದೆ.
ಆ ಮೂಲಕ ಭಾರತದ ಪುರುಷರ ತಂಡದಂತೆ ಮಹಿಳಾ ತಂಡವೂ ಒಲಿಂಪಿಕ್ಸ್ ನಲ್ಲಿ ಕಂಚು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಬಹುದು ಎಂಬ ನಿರೀಕ್ಷೆ ಸುಳ್ಳಾಗಿದೆ.
ಇಂದು ಕಂಚಿನದ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಬ್ರಿಟನ್ ಎದುರು 3-4 ಗೋಲುಗಳ ಅಂತರದಿಂದ ಭಾರತ ತಂಡ ಸೋಲುಂಡಿದೆ.
ಪಂದ್ಯ ಆರಂಭದಲೇ ಬ್ರಿಟನ್ ಎರಡು ಗೋಲುಗಳನ್ನು ಬಾರಿಸಿ ಎದುರಾಳಿಗಳ ಮೇಲೆ ಹಿಡಿತ ಸಾಧಿಸಿತು.
ಇದಾದ ಬಳಿಕ ಕಂಬ್ಯಾಕ್ ಮಾಡಿದ ಭಾರತ ತಂಡ ಮೂರು ಗೋಲುಗಳನ್ನು ಹೊಡೆದು ಮೊದಲಾರ್ಧದಲ್ಲೇ ಮುನ್ನಡೆ ಹೊಂದಿದ್ದರು.
ಆದರೆ ದ್ವಿತೀಯಾರ್ಧದಲ್ಲಿ ಕಮ್ ಬ್ಯಾಕ್ ಮಾಡಿದ ಬ್ರಿಟನ್ ಮುನ್ನಡೆ ಕಾಯ್ದುಕೊಂಡಿತು.
ಅಂತಿಮವಾಗಿ ಭಾರತ ತಂಡ 3-4 ಗೋಲುಗಳ ಅಂತರದಿಂದ ಬ್ರಿಟನ್ ವಿರುದ್ಧ ಸೋಲು ಕಂಡಿದೆ.









