ಟೋಕಿಯೋ ಒಲಿಂಪಿಕ್ಸ್ : ಕರ್ನಾಟಕದ ಅದಿತಿಗೆ ಸೋಲು
ಟೋಕಿಯೋ : ಒಲಿಂಪಿಕ್ಸ್ ಮಹಿಳಾ ಗಾಲ್ಫ್ ಸ್ಪರ್ಧೆಯಲ್ಲಿ ಕರ್ನಾಟಕದ ಆಟಗಾರ್ತಿ ಅದಿತಿ ಅಶೋಕ್ ಅವರಿಗೆ ಸೋಲಾಗಿದೆ.
ಪದಕ ಗೆಲ್ಲುವ ಭರವಸೆ ಮೂಡಿಸಿದ್ದ ಅದಿತಿ ಅಶೋಕ್ ಅವರಿಗೆ ಅಂತಿಮ ಸುತ್ತಿನಲ್ಲಿ ಕೂದಳೆಲೆ ಅಂತರದಲ್ಲಿ ಪದಕ ಕೈ ತಪ್ಪಿದೆ.
ಮೂರನೇ ಸುತ್ತಿನ ಅಂತ್ಯಕ್ಕೆ 2 ನೇ ಸ್ಥಾನಕ್ಕೇರಿದ್ದ ಅದಿತಿ, ನಾಲ್ಕನೇ ಸುತ್ತಿನ ಆರಂಭದಲ್ಲಿ ಜಂಟಿ ಅಗ್ರಸ್ಥಾನಕ್ಕೆರಿದ್ದು, ಪದಕ ಗೆಲ್ಲುವ ಭರವಸೆಯನ್ನು ಮೂಡಿಸಿದ್ದರು.
ಆದರೆ, ಪಂದ್ಯದ ಕೊನೆಯಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಡೆದುಕೊಳ್ಳಬೇಕಾಯಿತು. ಇದರೊಂದಿಗೆ ಪದಕದ ಕನಸು ಕೂಡ ಕಮರಿಹೋಗಿದೆ.
ಇನ್ನು ಮಹಿಳೆಯರ ಗಾಲ್ಫ್ ಸ್ಪರ್ಧೆಯಲ್ಲಿ ಅಮೆರಿಕದ ಆಟಗಾರ್ತಿ ನೆಲ್ಲೇ ಕೊರಡಾ ಅವರು ಚಿನ್ನದ ಪದಕ ಪಡೆಯುವಲ್ಲಿ ಯಶಸ್ವಿಯಾದರು.









