Tokyo Olympics : ಮಹಿಳಾ ಗಾಲ್ಫ್ ಪಂದ್ಯ ಸ್ಥಗಿತ
ಟೋಕಿಯೋ : ಹಮಾವಾನ ವೈಪರಿತ್ಯದಿಂದಾಗಿ ಒಲಿಂಪಿಕ್ಸ್ ಮಹಿಳಾ ಗಾಲ್ಫ್ ಸ್ಪರ್ಧೆಯ ನಾಲ್ಕನೇ ಮತ್ತು ಕೊನೆಯ ಸುತ್ತಿನ ಪಂದ್ಯ ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ.
ಈ ಪಂದ್ಯ ಮಧ್ಯಾಹ್ನ 1.15 ಕ್ಕೆ ಪುನಾರಂಭವಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಕರ್ನಾಟಕದ ಬೆಂಗಳೂರು ಮೂಲದ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಮೂರನೇ ಸುತ್ತಿನಲ್ಲಿ ಎರಡನೇ ಸ್ಥಾನ ಪಡೆದಿದ್ದು, ನಾಲ್ಕನೇ ಸುತ್ತಿನಲ್ಲಿ ನ್ಯೂಜಿಲ್ಯಾಂಡ್‍ನ ಲಿಡಿಯಾ ಕೋ ವಿರುದ್ಧ ಆಡುತ್ತಿದ್ದಾರೆ.
ಈ ಪಂದ್ಯದಲ್ಲಿ ಅದಿತಿ ಸೋತರೂ ಕಂಚಿನ ಪದಕ ಪಡೆಯುವುದು ಖಚಿತವಾಗಿದೆ.
ಇನ್ನು ಅದಿತಿ ಅಶೋಕ್ ಅವರು ನಿನ್ನೆ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದರು.










