ಟೋಕಿಯೋ ಪ್ಯಾರಾಲಿಂಪಿಕ್ : ಬೆಳ್ಳಿ ಗೆದ್ದ ಕನ್ನಡಿಗ ಸುಹಾಸ್

1 min read
Suhas Yathiraj saaksha tv

ಟೋಕಿಯೋ ಪ್ಯಾರಾಲಿಂಪಿಕ್ : ಬೆಳ್ಳಿ ಗೆದ್ದ ಕನ್ನಡಿಗ ಸುಹಾಸ್

ಜಪಾನ್ : ಟೋಕಿಯೋ ಪ್ಯಾರಾಲಿಂಪಿಕ್ ನಲ್ಲಿ ಭಾರತೀಯರ ಪದಕಗಳ ಬೇಟೆ ಮುಂದುವರೆದಿದೆ.

ಪ್ಯಾರಾಲಿಂಪಿಕ್ಸ್ ನ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಕನ್ನಡಿಗ ಸುಹಾಸ್ ಯಥಿರಾಜ್ ಬೆಳ್ಳಿ ಪದಕ ಗೆದ್ದಿದ್ದಾರೆ.

ಇಂದಿನ ಪಂದ್ಯದ ಮೊದಲ ಸೆಟ್ ನಲ್ಲಿ 21-15ರಿಂದ ಸುಹಾಸ್ ಗೆದ್ದರೇ 2ನೇ ಸೆಟ್‍ನಲ್ಲಿ 17-21ರಿಂದ ಸೋಲು ಕಂಡರು.

Suhas Yathiraj saaksha tv

ಈ ಮೂಲಕ 1-1 ಸೆಟ್ ಗಳ ಸಮಬಲ ಸಾಧಿಸಿ ಮೂರನೇ ಹಾಗೂ ಕೊನೆಯ ಸೆಟ್ ನಲ್ಲಿ 15-21ರಿಂದ ಸೋಲೊಪ್ಪಿಕೊಂಡರು.

ಈ ಮೂಲಕ ಭಾರತ ಪ್ಯಾರಾಲಿಂಪಿಕ್ಸ್ ನಲ್ಲಿ ಈವರೆಗೆ ಒಟ್ಟು 18 ಪದಕಗಳನ್ನು ಗೆದ್ದುಕೊಂಡಿದೆ.

ಪ್ಯಾರಾಲಿಂಪಿಕ್ ನ ಕೊನೆಯ ದಿನವಾದ ಇಂದು ಹಲವು ಫೈನಲ್ ಪಂದ್ಯಗಳು ನಡೆಯಲಿದ್ದು, ಭಾರತ ಇನ್ನಷ್ಟು ಪದಕದ ನಿರೀಕ್ಷೆಯಲ್ಲಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd