Tollywood : Rashmika Mandanna : Samantha
ಟಾಲಿವುಡ್ ನಲ್ಲಿ ಇಬ್ಬರು ನಾಯಕಿಯರಿಗೆ ಅವರದ್ದೇ ಆದ ದೊಡ್ಡ ಅಭಿಮಾನಿಗಳ ಬಳಗವಿದೆ.. ಇಬ್ಬರೂ ಬಹುಬೇಡಿಕೆಯ ನಟಿಯರೇ… ಇಬ್ಬರೂ ಹೆಚ್ಚು ಟ್ರೋಲ್ ಆಗ್ತಿರುವ ಟಾಪಿಪ್ ಗಳೇ ಆಗಿದ್ದಾರೆ… ಮೊದಲನೇಯದ್ದು ರಶ್ಮಿಕಾ… ಕನ್ನಡ ಸಿನಿಮಾದಿಂದ ಅದೃಷ್ಟ ಖುಲಾಯಿಸಿದ್ದೇ ತಡ ಟಾಲಿವುಡ್ ಗೆ ಜಂಪ್ ಆಗಿ ಅಲ್ಲೇ ಫೇಮಸ್ ಆಗಿ ಅಲ್ಲಿಯವರೇ ಆಗಿಬಿಟ್ಟಿರೋ ರಶ್ಮಿಕಾ ಸಿನಿಮಾಗಳಿಗಿಂತ ಹೆಚ್ಚು ಬರೀ ರೂಮರ್ ಗಳು , ಟ್ರೋಲ್ ಗಳಿಂದಲೇ ಸುದ್ದಿಯಲ್ಲಿರುತ್ತಾರೆ.. ಅಲ್ಲದೇ ರಶ್ಮಿಕಾ ಟಾಲಿವುಡ್ ನ ಸೆನ್ಷೇಷನಲ್ ಸ್ಟಾರ್ ವಿಜಯ್ ದೇವರಕೊಂಡ ನಡುವಿನ ಸಂಬಂಧದ ಬಗ್ಗೆ ಆಗಾಗ ಗಾಸಿಪ್ ಗಳು ಹರಿದಾಡುತ್ತಲೇ ಇರುಯತ್ವೆ..
ಮತ್ತೊಂದೆಡೆ ಸಮಂತಾ… ನಾಗಚೈತನ್ಯ ಜೊತೆಗೆ ಡಿವೋರ್ಸ್ ನಂತರ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸುದ್ದಿಯಲ್ಲಿರೋ ನಟಿ… ಹಾಗಂತ ಸಮಂತಾಗೆ ಈಗಲೂ ಡಿಮ್ಯಾಂಡ್ ಕಡಿಮೆಯಾಗಿಲ್ಲ.. ಸಮಂತಾಗೆ ಈಗಲೂ ಸಿನಿಮಾಗಳ ಆಫರ್ ಗಳು ಕಡಿಮೆಯಾಗಿಲ್ಲ.. ಬಾಲಿವುಡ್ ಗೆ ಹಾಲಿವುಡ್ ಗೂ ಸಮಂತಾ ಪಾದಾರ್ಪಣೆ ಮಾಡ್ತಿರುವ ವಿಚಾರ ಗೊತ್ತೇ ಇದೆ.. ಈ ಇಬ್ಬರೂ ನಟಿಯರೂ ಕೂಡ ಸಖತ್ ಬ್ಯುಸಿಯಾಗಿದ್ದಾರೆ.. ಆದ್ರೆ ಇತ್ತೀಚೆಗೆ ವಿಜಯ್ ದೇವರಕೊಂಡ ಅವರ ಮುಂದಿನ ಸಿನಿಮಾ ಬಗ್ಗೆ ಸಂಚನ ಸೃಷ್ಟಿಸಿದ್ದ ಒಂದು ಗಾಸಿಪ್ ಏನಂದ್ರೆ , ಮುಂದಿನ ಸಿನಿಮಾದಲ್ಲಿ ದೇವರಕೊಂಡ ಜೊತೆಗೆ ರಶ್ಮಿಕಾ ರೋಮ್ಯಾನ್ಸ್ ಮಾಡ್ತಾರೆ ಅನ್ನೋದು.. ಇದಕ್ಕೆ ದೇವರಕೊಂಡ ಅವರ ಲೈಗರ್ ಗೆ ಬಂಡವಾಳ ಹೂಡ್ತಿರುವ ಕರಣ್ ಜೋಹರ್ ನಿರ್ಮಾಪರು ಎಂದು ಹೇಳಲಾಗ್ತಿತ್ತು.. ಆದ್ರೀಗ ರಶ್ಮಿಕಾ ಅಲ್ಲ ಸಮಂತಾ ದೇವರಕೊಂಡ ಜೊತೆಗೆ ರೋಮ್ಯಾನ್ಸ್ ಮಾಡಲಿದ್ದಾರೆ ಎನ್ನಲಾಗ್ತಿದೆ.. ಅಲ್ಲದೇ ಈ ಸಿನಿಮಾವನ್ನು ಶಿವ ನಿರ್ಮಾಣ , ನಿರ್ದೇಶನ ಮಾಡುತ್ತಿದ್ದಾರೆ. ಇದು ಮಿಲಿಟರಿ ಆಧಾರಿತ ಕಥೆಯಾಗಿರಲಿದೆ ಎನ್ನಲಾಗ್ತಿದೆ. ಅಂದ್ಹಾಗೆ ಪುಷ್ಪ ಸಿನಿಮಾವನ್ನ ನಿರ್ಮಾಣ ಮಾಡಿದ್ದ ಮೈತ್ರಿ ಸ್ಟುಡಿಯೋಸ್ ಈ ಸಿನಿಮಾಗೆ ಬಂಡವಾಳ ಹೂಡುತ್ತಿದೆ ಎನ್ನಲಾಗಿದೆ..