Tommy Weds Jaily: ನಾಯಿಗಳಿಗೆ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿದ ಕುಟುಂಬ…
ನಾಯಿ ಮತ್ತು ಮಾನವನ ನಡುವಿನ ಸ್ನೇಹವನ್ನ ಎಷ್ಟು ವರ್ಣಿಸಿದರೂ ಸಾಲದು , ಅನಾದಿ ಕಾಲದಿಂದಲೂ ಇದು ಮುಂದುವರೆದುಕೊಂಡು ಬಂದಿದೆ. ಭಾರತದಲ್ಲಿ ನಾಯಿಗಳು ಕುಟುಂಬದ ಸದಸ್ಯರೇ ಆಗಿ ಹೋಗಿರುತ್ತವೆ. ಉತ್ತರ ಪ್ರದೇಶದ ನಿವಾಸಿಯೊಬ್ಬರು ತಮ್ಮ ಸಾಕು ನಾಯಿಯನ್ನು ನೆರೆಹೊರೆಯ ನಾಯಿಯೊಂದಿಗೆ ಸಾಂಪ್ರದಾಯಿಕ ಭಾರತೀಯ ವಿವಾಹದ ರೀತಿಯಲ್ಲಿ ವಿವಾಹ ಮಾಡಿಕೊಟ್ಟಿದ್ದಾರೆ.
ಉತ್ತರ ಪ್ರದೇಶದ ಆಲಿಘಡದ ಸುಖ್ರಾವಲಿ ಗ್ರಾಮದ ಮುಖ್ಯಸ್ಥ ದಿನೇಶ್ ಚೌಧರಿ ಅವರ ಮುದ್ದಿನ ನಾಯಿ ಟಾಮಿಯನ್ನ ಅಟ್ರೌಲಿಯ ಟಿಕ್ರಿ ರಾಯ್‌ಪುರದ ನಿವಾಸಿ ಡಾ ರಾಮ್‌ಪ್ರಕಾಶ್ ಸಿಂಗ್ ಅವರ ಏಳು ತಿಂಗಳ ಹೆಣ್ಣು ನಾಯಿ ಜೆಲ್ಲಿಯೊಂದಿಗೆ ಕೊಟ್ಟು ಮದುವೆ ಮಾಡಿಕೊಡಲಾಗಿದೆ.
#WATCH | A male dog, Tommy and a female dog, Jaily were married off to each other in UP’s Aligarh yesterday; attendees danced to the beats of dhol pic.twitter.com/9NXFkzrgpY
— ANI UP/Uttarakhand (@ANINewsUP) January 15, 2023
ಟಾಮಿ ಮತ್ತು ಜೆಲ್ಲಿಯ ವಿವಾಹವನ್ನ ಶಾಸ್ರೋಕ್ತವಾಗಿ ಮಕರ ಸಂಕ್ರಾಂತಿಯ ದಿನವಾದ ಜನವರಿ 14, ನಡೆಸಲಾಯಿತು. ಮದುವೆಯ ದಿನದಂದು, ವಧುವಿನ ಕುಟುಂಬ ಮತ್ತು ಇತರ ಸಂಬಂಧಿಕರು ಟಿಕ್ರಿ ರಾಯ್‌ಪುರದಿಂದ ಸುಖವಲಿ ಗ್ರಾಮವನ್ನು ತಲುಪಿ ಮದುವೆ ಮಾಡಿಕೊಟ್ಟಿದ್ದಾರೆ. ಮದುವೆಗಾಗಿ ಸುಮಾರು 40,000-45,000 ರೂಪಾಯಿ ಖರ್ಚು ಮಾಡಿದ್ದೇವೆ ಎಂದು ಟಾಮಿ ಮಾಲೀಕ ದಿನೇಶ್ ತಿಳಿಸಿದ್ದಾರೆ.
ಮದುವೆಯ ಮೆರವಣಿಗೆಯಲ್ಲಿ ಎರಡು ನಾಯಿಗಳಿ ದೇಸಿ ತುಪ್ಪದಿಂದ ತಯಾರಿಸಿದ ಖಾದ್ಯಗಳನ್ನ ಬಡಿಸಿದ್ದಾರೆ. ಸುದ್ದಿ ಸಂಸ್ಥೆ ANI ಟ್ವೀಟ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿವೈರಲ್ ಆಗಿದೆ.
Tommy Weds Jaily: Family married dogs as per Hindu tradition…