ಅಹಮದಾಬಾದ್: ನಾಳೆ ನಾವು ಏನು ಎಂಬುವುದು ತೋರಿಸುತ್ತೇವೆ ಎಂದು ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ನಾಳೆಯ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲ ಮಾತನಾಡಿದ ಅವರು, ನಾನು ನಾಯಕನಾಗಿದ್ದ ದಿನದಿಂದಲೂ ಈ ದಿನಕ್ಕಾಗಿ ಕಾಯುತ್ತಿದ್ದೇನೆ. ಆಸೀಸ್ ತಂಡದ ಫಾರ್ಮ್ ಬಗ್ಗೆ ಚಿಂತೆಯಿಲ್ಲ. ನಮ್ಮ ಶಕ್ತಿ ಏನೆಂಬುವುದು ಎಲ್ಲರಿಗೂ ನಾಳೆ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.
ನಾವು ಮನಸ್ಥಿತಿ ಮತ್ತು ಪಾತ್ರಗಳನ್ನು ಸ್ಪಷ್ಟವಾಗಿ ಇರಿಸಿಕೊಳ್ಳಲು ನಮ್ಮಿಂದಾದ ಎಲ್ಲಾ ರೀತಿಯ ಪ್ರಯತ್ನಗಳನ್ನ ಮಾಡಿದ್ದೇವೆ. ಇಲ್ಲಿಯವರೆಗೆ ಎಲ್ಲವೂ ಸುಸೂತ್ರವಾಗಿ ನಡೆದಿದೆ. ನಾಳೆಯೂ ಇದೇ ರೀತಿ ಇರುತ್ತದೆ ಎಂಬ ಭರವಸೆ ಇದೆ. ನನಗೆ ಹಿಂದಿನ ಗೆಲುವುಗಳಿಂದ ಪಂದ್ಯ ಗೆಲ್ಲುತ್ತೇವೆ ಎಂಬ ನಂಬಿಕೆಯಿಲ್ಲ, ಆ ದಿನ ಏನು ಮಾಡುತ್ತೇವೆ ಅನ್ನೋದು ಮುಖ್ಯ. ಆ ಕುರಿತು ನನಗೆ ವಿಶ್ವಾಸವಿದೆ ಎದು ಹೇಳಿದ್ದಾರೆ.