ಹಲ್ಲು ಹುಳುಕಾಗಲು ಕಾರಣಗಳೇನು ಗೊತ್ತಾ? ತಪ್ಪಿಸಲು ಏನು ಮಾಡಬೇಕು ?
ಹಲ್ಲುಹುಳುಕಾಗುವುದಕ್ಕೆ ದಂತಕ್ಷಯ ಅಥವಾ ಹಲ್ಲುಕುಳಿ ಎಂದು ಕರೆಯುತ್ತೇವೆ. ಬಾಯಿಯಲ್ಲಿರಿವ ಬ್ಯಾಕ್ಟೀರಿಯಾಗಳು ದಂತ ಕವಚ ಮತ್ತು ಮತ್ತು ಹಲ್ಲುಗಳಿಗೆ ಹಾನಿ ಮಾಡುವ ಆಮ್ಲವನ್ನ ಸ್ರವಿಸಿದಾಗ ಈ ರೀತಿ ಸಂಭವಿಸುತ್ತೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಸೋಂಕು ತೀವ್ರವಾಗಿ ಹಲ್ಲುನೋವು ಹೆಚ್ಚಾಗುತ್ತದೆ. ಇದು ಅಂತಿಮವಾಗಿ ಸಂಪೂರ್ಣವಾಗಿ ಹಲ್ಲು ಕಳೆದುಕೊಳ್ಳುವುದಕ್ಕೆ ಕಾರಣವಾಗುತ್ತದೆ.
ಹಲ್ಲು ಹುಳುಕಾಗಲು ಕಾರಣ ಮತ್ತು ಪರಿಹಾರಗಳು..
ಹಲ್ಲು ಶುದ್ಧಗೊಳಿಸುವ ಹವ್ಯಾಸ : ಪ್ರತಿದಿನ ಹಲ್ಲುಜ್ಜದಿರುವುದು ಮೌತ್ ವಾಶ ಬಳಸದಿರುವುದು ಹಲ್ಲಿನ ಆರೋಗ್ಯ ಹದಗೆಡಲು ಪ್ರಮುಖ ಕಾರಣವಾಗುತ್ತದೆ.
ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ದಿನಕ್ಕೆ ಕನಿಷ್ಠ ಎರಡು ಬಾರಿ ಹಲ್ಲುಜ್ಜುವುದು ಮತ್ತು ಪ್ರತಿದಿನ ಬಾಯಿ ಮುಕ್ಕಳಿಸುವುದು ಅವಶ್ಯಕ.
ಹಲ್ಲಿನ ಎನಾಮಿಲ್ ಮತ್ತು ಮುರಿತದ ಸಮಸ್ಯೆಗಳು; ಹಲ್ಲಿನಲ್ಲಿ ಯಾವುದೋ ಕಾರಣಕ್ಕೆ ಬಿರುಕು ಬಿಟ್ಟುಕೊಂಡಿದ್ದರೆ ಮತ್ತು ದಂತದ ಅನಾಮಿಲ್ ( ದಂತ ಕವಚ )ದ ಸಮಸ್ಯೆಗಳಿಂದ ಬಳುತ್ತಿದ್ದರೆ ಹಲ್ಲು ಹುಳುಕು ಬೀಳುವುದಕ್ಕೆ ಕಾರಣವಾಗುತ್ತದೆ.
ಆಳವಾದ ಬಿರುಕು ಮತ್ತು ದಂತದ ಎನಾಮಿಲ್ ಸಮಸ್ಯೆಯಿಂದ ಬಳಲುತ್ತಿರುವವರು ಡೆಂಟಲ್ ಸೀಲಾಂಟ್ ಬಳಸಬಹುದು.
ಸಕ್ಕರೆ ಆಹಾರಗಳು : ಬಾಯಿಯೊಳಗಿನ ಬ್ಯಾಕ್ಟೀರಿಯಾಗಳು ಸಕ್ಕರೆಯಂತಹ ಸಿಹಿಯನ್ನ ಸೇವಿಸುತ್ತೆವೆ. ನಂತರ ಹಲ್ಲುಗಳಿಗೆ ಹಾನಿಯುಂಟು ಮಾಡುತ್ತದೆ.
ಆದ್ದರಿಂದ, ಪ್ರತಿ ಊಟದ ನಂತರ ನಿಮ್ಮ ಹಲ್ಲುಗಳನ್ನ ಬ್ರಷ್ ಮಾಡಲು ಸಲಹೆ ನೀಡಲಾಗುತ್ತದೆ. ಹಲ್ಲುಗಳಿಗೆ ಮತ್ತಷ್ಟು ಹಾನಿಯಾಗದಂತೆ ಸಕ್ಕರೆ ಆಹಾರಗಳನ್ನು ಸೇವಿಸುವಾಗ ಜಾಗರೂಕರಾಗಿರಿ.
ಆಮ್ಲೀಯ ಆಹಾರಗಳು ಮತ್ತು ಪಾನೀಯಗಳು; ನಿಯಮಿತವಾಗಿ ಸೇವಿಸುವ ಸಾಮಾನ್ಯ ಆಹಾರಗಳು ಆಮ್ಲವನ್ನು ಹೊಂದಿರುತ್ತವೆ. ಬ್ರೆಡ್ ಮತ್ತು ಮೀನುಗಳು ಸಹ ಆಮ್ಲವನ್ನು ಹೊಂದಿರುತ್ತವೆ, ಜೊತೆಗೆ ಹಣ್ಣಿನ ರಸ ಮತ್ತು ಸೋಡಾದಂತಹ ಕಾರ್ಬೊನೇಟೆಡ್ ಪಾನೀಯಗಳು ದಂತಕ್ಷಯಕ್ಕೆ ಕಾರಣವಾಗಬಹುದು. ದಂತಕವಚವನ್ನು ಹಾಳುಮಾಡುವ ಮತ್ತು ದಂತಕ್ಷಯವನ್ನು ಉಂಟುಮಾಡುವ ಆಮ್ಲೀಯ ಆಹಾರಗಳು ಮತ್ತು ಪಾನೀಯಗಳನ್ನು ತಪ್ಪಿಸುವುದು ಉತ್ತಮ.
ಒಣಗಿದ ಬಾಯಿ
ಲಾಲಾರಸ ಪ್ಲೇಕ್‌ನ ಬೆಳವಣಿಗೆಯನ್ನ ತಡೆಯುತ್ತದೆ. ಬಾಯಿ ಒಳಗಡೆ ತೇವಾಂಶವಿರದಿದ್ದರೆ ಹಲ್ಲಿನ ಸಮಸ್ಯೆಗಳು ಉಂಟಾಗುತ್ತವೆ.
Tooth Decay: Do you know the causes of tooth decay? What to avoid?








