ರಾಜ್ಯ ಬಜೆಟ್…..
ಬೆಂಗಳೂರು : 2023ರ ರಾಜ್ಯ ಬಜೆಟ್ ಮಂಡನೆಗೆ ತಯಾರಿ ಆರಂಭವಾಗಿದೆ.. ಸಿಎಂ ಬೊಮ್ಮಾಯಿ ಚೊಚ್ಚಲ ಬಜೆಟ್ ಮಂಡನೆ ಮಾಡಲಿದ್ದು , 2023ರ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜನಪ್ರಿಯ ಘೋಷಣೆಯೊಂದಿಗೆ ಬಜೆಟ್ ಮಂಡಿಸುವ ಅನಿವಾರ್ಯತೆ ಸಿಎಂ ಅವರದ್ದು. ಆದಾಯ ಸಂಗ್ರಹ ಸೊರಗಿರುವ ಕಾರಣ ಬಜೆಟ್ಗೆ ಹಣ ಹೊಂದಿಸುವುದು ಕಷ್ಟಕರವಾಗಿದೆ. ಆರ್ಥಿಕ ಸಂಕಷ್ಟದ ಮಧ್ಯೆ ಜನರಿಗೆ ಹೊರೆಯಾಗದ ಬಜೆಟ್ ಮಂಡಿಸುವುದು ಸಿಎಂ ಬೊಮ್ಮಾಯಿಗೆ ಅನಿವಾರ್ಯವಾಗಿದೆ.
ನೀರು ಹಂಚಿಕೆ ಒಪ್ಪುವುದಿಲ್ಲ….
ನದಿ ಜೋಡಣೆ ವಿಚಾರದಲ್ಲಿ ನಮಗೆ ಅನ್ಯಾಯವಾದರೆ ನಾವು ಒಪ್ಪುವುದಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ನಿನ್ನೆ ಕೇಂದ್ರ ಬಜೆಟ್ ಮಂಡನೆಯಾಗಿದ್ದು, ಬಜೆಟ್ ನಲ್ಲಿ ಕಾವೇರಿ ಮತ್ತು ಪೆನ್ನಾ ನದಿ ಜೋಡಣೆ ಮಾಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಆದರೆ ಇದಕ್ಕೆ ರಾಜ್ಯ ಸರ್ಕಾರದ ಅನುಮತಿ ಬೇಕೆಂದು ಹೇಳಿದ್ದಾರೆ. ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಆರ್ ಅಶೋಕ ನೀರು ಹಂಚಿಕೆ ವಿಚಾರದಲ್ಲಿ ಸಮಸ್ಯೆಯಾದರೆ ನಾವು ಅನುಮತಿ ಕೊಡುವುದಿಲ್ಲ. ನಮ್ಮ ರಾಜ್ಯದ ನೀರಿಗೆ ತೊಂದರೆ ಆಗಬಾರದು. ನಮಗೆ ಅನ್ಯಾಯ ಆಗುವ ರೀತಿ ನಾವು ಒಪ್ಪಲ್ಲ ಎಂದು ಸ್ಪಷ್ಟನೆ ನೀಡಿದರು.
ದೇಶದಲ್ಲಿ ಕೊರೊನಾ…
ದೇಶದಲ್ಲಿ ಕಳೆದ 24 ಗಂಟೆಯಲ್ಲಿ 1,61,386 ಲಕ್ಷ ಹೊಸ ಪ್ರಕರಣಗಳು ಪತ್ತೆಯಾಗಿದೆ.. 16,21,603 ಸಕ್ರಿಯ ಪ್ರಕರಣಗಳಿವೆ. ದೇಶದಲ್ಲಿ ಒಂದೇ ದಿನ 1,733 ಜನರು ಸಾವನ್ನಪ್ಪಿದ್ದಾರೆ. ಒಟ್ಟಾರೆ 2,81,109 ಮಂದಿ ಚೇತರಸಿಕೊಂಡಿದ್ದಾರೆ.
ಟ್ರಾಫಿಕ್ ಪೊಲೀಸ್ ಗೊಂದು ಸಲಾಮ್…
ಬೆಂಗಳೂರು : ಟ್ರಾಪಿಕ್ ಪೊಲೀಸ್ ಅವರ ಸಮಯ ಪ್ರಜ್ಞೆಯಿಂದ ವ್ಯಕ್ತಿಯ ಪ್ರಾಣ ಉಳಿದರವ ಘಟನೆ ಬೆಂಗಳೂರು ವಿಧಾನಸೌಧದ ಸಿಐಡಿ ಕಚೇರಿ ಬಳಿ ನಡೆದಿದೆ. ವ್ಯಕ್ತಿಯೊಬ್ಬರನ್ನು ಆಂಬುಲೆನ್ಸ್ ಮೂಲಕ ಗ್ಲೋಬಲ್ ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ವಿಧಾನಸೌಧದ ಸಿಐಡಿ ಕಚೇರಿ ಬಳಿ ಟಯರ್ ಪಂಕ್ಚರ್ ಆಗಿತ್ತು. ರೋಗಿಯ ಪತ್ನಿ ಹಾಗೂ ಮಗಳು ಸಹಾಯಕ್ಕಾಗಿ ಅಂಗಲಾಚಿದರೂ ಯಾರೂ ನೆರವಿಗೆ ಧಾವಿಸಲಿಲ್ಲ. ಬೇರೆ ಆಂಬುಲೆನ್ಸ್ ಗಳಿಗೆ ಕರೆಮಾಡಿದರೂ ಪ್ರಯೋಜನಾವಗಲಿಲ್ಲ. ಆಗ ಕಬ್ಬನ್ ಪಾರ್ಕ್ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಕಾಶಪ್ಪ ಕಲ್ಲೂರು ಪಂಕ್ಚರ್ ಆಗಿದ್ದ ಚಕ್ರವನ್ನು ಅವರೇ ಬದಲಿಸಿ ಆಂಬುಲೆನ್ಸ್ ಹೊರಡಲು ನೆರವಾಗಿದ್ದಾರೆ. ಇದರಿಂದ ರೋಗಿಯ ಜೀವ ಉಳಿದಿದೆ.
ವಿ.ಸೋಮಣ್ಣ ಅವರಿಗೆ ಕೊರೊನಾ ಪಾಸಿಟಿವ್…
ಬೆಂಗಳೂರು: ವಸತಿ ಸಚಿವ ವಿ.ಸೋಮಣ್ಣ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಹೋಮ್ ಕ್ವಾರಂಟೈನ್ ಆಗಿದ್ದೇನೆ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನನಗೆ ಕೋವಿಡ್- 19 ಸೋಂಕು ದೃಢಪಟ್ಟಿದೆ. ಸದ್ಯ ಹೋಮ್ ಕ್ವಾರಂಟೈನ್ ನಲ್ಲಿದ್ದು ಆರೋಗ್ಯವಾಗಿದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ದಯವಿಟ್ಟು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಮತ್ತು ಕೋವಿಡ್ ಸುರಕ್ಷತಾ ನಿಯಮಗಳನ್ನು ಪಾಲಿಸುವುದರ ಮೂಲಕ ಸುರಕ್ಷತೆಯಿಂದಿರಿ ಎಂದು ಹೇಳಿದ್ದಾರೆ.
ಸಂವಿಧಾನವನ್ನ ಪುನಃ ರಚಿಸುವ ಅವಶ್ಯಕತೆ ಇದೆ…
ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಭಾರತದಲ್ಲಿ ಸಂವಿಧಾನವನ್ನು ಪುನಃ ರಚಿಸುವ ಅಭಿಯಾನವನ್ನು ಪ್ರಾರಂಭಿಸಲಿದ್ದಾರೆ. ಇದಕ್ಕಾಗಿ ದೇಶದ ಹಲವು ನಾಯಕರನ್ನು ಭೇಟಿ ಮಾಡಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದೇನೆ ಎಂದು ಹೇಳಿದ್ದಾರೆ.
ಟಿಎಂಸಿ ಅಧ್ಯಕ್ಷರಾಗಿ ಮಮತಾ ಬ್ಯಾನರ್ಜಿ ಅವಿರೋಧ ಆಯ್ಕೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತೃಣಮೂಲ ಕಾಂಗ್ರೆಸ್ ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದಾರೆ. ಮಮತಾ ಬ್ಯಾನರ್ಜಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಬುಧವಾರ ತಿಳಿಸಿದ್ದಾರೆ.
ಹಿರಿಯ ನಟ ಅಶೋಕ್ ರಾವ್ ವಿಧಿವಶ…
ಬೆಂಗಳೂರು : ಸ್ಯಾಂಡಲ್ ವುಡ್ ನ ಹಿರಿಯ ನಟ ಅಶೋಕ್ ರಾವ್ ಅವರು ವಿಧಿವಶರಾಗಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ಅಶೋಕ್ ರಾವ್ ಅವರು ತಡರಾತ್ರಿ ಕೊನೆಯುಸಿರೆಳೆದಿದ್ದಾರೆ.. ಕಳೆದ 15 ದಿನಗಳಿಂದ ಅಶೋಕ್ ರಾವ್ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಪ್ರತಿ ದಿನ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ಕೂಡ ಚಿಕಿತ್ಸೆ ಪಡೆದ ನಂತರವೂ ಚೆನ್ನಾಗಿದ್ದರು. ಆದ್ರೆ ಮಧ್ಯರಾತ್ರಿ 12.30ಕ್ಕೆ ವಿದ್ಯಾರಣ್ಯಪುರದಲ್ಲಿರೋ ಮನೆಯಲ್ಲಿ ಕೊನೆಯುಸಿರೆಳೆದರು.
ಬಾಗ್ಲು ತೆಗಿ ಮೇರಿ ಜಾನ್ – ತೋತಾಪುರಿ ಹಾಡು ಬಂತು..
ಮೊನ್ನೆ ಮೊನ್ನೆಯಷ್ಟೇ ತೋತಾಪುರಿ ಸಿನಿಮಾ ತಂಡ ಹಾಡಿನ ಟೀಸರ್ ಝಲಕ್ ತೋರಿಸಿ ಪ್ರೇಕ್ಷಕರಲ್ಲಿ ಕುತೂಹಲ ಬಿಲ್ಡ್ ಮಾಡಿತ್ತು. ಇದೀಗ ಪೂರ್ತಿ ವೀಡಿಯೋ ಹಾಡನ್ನೇ ಬಿಡುಗಡೆ ಮಾಡಿದೆ. ‘ಬಾಗ್ಲು ತೆಗಿ ಮೇರಿ ಜಾನ್’ ಎನ್ನುವ ಕ್ಯಾಚಿ ಲಿರಿಕ್ಸ್ ನ ಸಾಂಗ್, ಪ್ರೇಕ್ಷಕರನ್ನ ನೋಡಿಸಿಕೊಂಡು ಹೋಗುತ್ತಿದೆ. ಅದಿತಿ ಪ್ರಭುದೇವ ಮತ್ತು ಜಗ್ಗೇಶ್ ಕಾಂಬಿನೇಶನ್ ನೋಡುಗರಿಗೆ ಸಖತ್ ಥ್ರಿಲ್ ನೀಡುತ್ತಿದೆ. ವಿಜಯ ಪ್ರಸಾದ್ ಸಾಹಿತ್ಯಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಸಿಂಗರ್ ಅನನ್ಯ ಭಟ್, ವ್ಯಾಸರಾಜ್ ಸೋಸಲೆ, ಸುಪ್ರಿಯ ರಾಮ್ ಈ ಹಾಡಿಗೆ ಧ್ವನಿಯಾಗಿದ್ದಾರೆ. ಸದ್ಯ ಹಾಡು ಸಖತ್ ರೆಸ್ಪಾನ್ಸ್ ಗಿಟ್ಟಿಸಿಕೊಂಡು ಯೂಟ್ಯೂಬ್ ಟ್ರೆಂಡಿಂಗ್ನಲ್ಲಿದೆ., ಬಿಡುಗಡೆಯಾದ 2 ದಿನಗಳಲ್ಲಿ ಗಂಟೆಗಳಲ್ಲಿ 20 ಲಕ್ಷಕ್ಕೂ ಹೆಚ್ಚು ವೀವ್ಸ್ ಕಂಡಿದೆ.
ಕೊಹ್ಲಿ ಸೆಂಚೂರಿಗಾಗಿ ಪಾಕ್ ಆಟಗಾರರಿಂದ ಪ್ರಾರ್ಥನೆ…
ಟೀಂ ಇಂಡಿಯಾ ಮೆಷಿನ್ ಗನ್ ವಿರಾಟ್ ಕೊಹ್ಲಿ ಶತಕ ಸಿಡಿಸಿ ಸುಮಾರು ಮೂರು ವರ್ಷಗಳಾಗುತ್ತಿದೆ. ವಿರಾಟ್ ಕೊಹ್ಲಿ ಸೆಂಚೂರಿ ಸಿಡಿಸದೇ ಈ ರೀತಿ ವರ್ಷಗಳನ್ನು ಕಳೆಯುತ್ತಿರುವುದು ಇದೇ ಮೊದಲು. ವಿರಾಟ್ ಯಾವಾಗ ಶತಕ ಬಾರಿಸುತ್ತಾರೆ ಎಂದು ಸಾವಿರಾರು ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಇತ್ತೀಚೆಗೆ ಒಂದು ಕುತೂಹಲಕಾರಿ ಸಂಗತಿ ಹೊರಬಿದ್ದಿದೆ. ಪಾಕಿಸ್ತಾನ ಕ್ರಿಕೆಟಿಗರು ಸೇರಿದಂತೆ ಆ ದೇಶದ ಕ್ರಿಕೆಟ್ ಅಭಿಮಾನಿಗಳು ಕೂಡ ಕೊಹ್ಲಿಯ ಶತಕಕ್ಕೆ ಪ್ರಾರ್ಥನೆ ನಡೆಸುತ್ತಿದ್ದಾರಂತೆ. ಪಿಎಸ್ಎಲ್ (ಪಾಕಿಸ್ತಾನ ಪ್ರೀಮಿಯರ್ ಲೀಗ್) ನಲ್ಲಿ ಭಾಗವಹಿಸುತ್ತಿರುವ ಇಸ್ಲಾಮಾಬಾದ್ ಯುನೈಟೆಡ್ ಸ್ಟ್ರಾಟೆಜಿ ಮ್ಯಾನೇಜರ್ ಹಸನ್ ಚೀಮಾ ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.