ದೇಶದಲ್ಲಿ ಕೋವಿಡ್ ಮಹಾಸ್ಪೋಟ – 1,68,063 ಕೇಸ್
ದೇಶದಲ್ಲಿ ಕೊರೊನಾ ಮೂರನೇ ಅಲೆಯ ಆಟ ಶುರುವಾಗಿದ್ದು, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 1,68,063 ಮಂದಿಗೆ ಸೋಂಕು ತಗುಲಿದೆ. ಇದೇ ಅವಧಿಯಲ್ಲಿ 277 ಮಂದಿ ಮಹಾಮಾರಿ ಸೋಂಕಿಗೆ ಪ್ರಾಣ ಕಳೆದುಕೊಂಡಿದ್ದಾರೆ. ದೇಶದಲ್ಲಿ ಸದ್ಯ ಪಾಸಿಟಿವ್ ದರ ಶೇ. 13.29 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
0.2 ‘ರಾಜ್ಯದಲ್ಲಿ ಶಾಲಾ – ಕಾಲೇಜು ಬಂದ್’…
ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇಕಡಾ 5 ಕ್ಕಿಂತ ಜಾಸ್ತಿಯಾದ್ರೆ ಶಾಲಾ – ಕಾಲೇಜು ಬಂದ್ ಮಾಡಲಾಗುವುದು ಎಂದು ಸಚಿವ ಎನ್. ನಾಗೇಶ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇಕಡಾ 5 ಕ್ಕಿಂತ ಜಾಸ್ತಿಯಾದ್ರೆ ಶಾಲಾ – ಕಾಲೇಜು ಬಂದ್ ಮಾಡಲಾಗುವುದು. ಬೆಂಗಳೂರಿನಲ್ಲಿ ಶಾಲಾ-ಕಾಲೇಜು ಬಂದ್ ಮುಂದುವರಿಕೆ ಕುರಿತು ಶೀಘ್ರದಲ್ಲಿ ನಿರ್ಧಾರ ಪ್ರಕಟ ಮಾಡುತ್ತೇವೆ ಎಂದು ತಿಳಿಸಿದರು.
0.3 ಚಿಕ್ಕಮಗಳೂರಲ್ಲಿ 55 ಮಕ್ಕಳಲ್ಲಿ ಕೊರೊನಾ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಸ್ಫೋಟವಾಗಿದ್ದು, 55 ಮಕ್ಕಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಚಿಕ್ಕಮಗಳೂರಿನ ಕಲ್ಯಾಣ ನಗರದಲ್ಲಿರುವ ಅಂಬೇಡ್ಕರ್ ವಸತಿ ಶಾಲೆಯ 17 ಮಕ್ಕಳು ಹಾಗೂ ಮೂಡಿಗೆರೆ ತಾಲೂಕಿನ ಬಿದರಹಳ್ಳಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 38 ಮಕ್ಕಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
0.4 ಶ್ರೀ ಸಿದ್ದೇಶ್ವರ ಸ್ವಾಮಿಜಿಗಳಿಗೆ ಗಂಭೀರ ಗಾಯ
ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಪ್ರವಚನಕ್ಕೆ ಆಗಮಿಸಿದ್ದ ವೇಳೆ ಕಾಲು ಜಾರಿ ಬಿದ್ದು ಗಂಭಿರವಾಗಿ ಗಾಯಗೊಂಡಿದ್ದಾರೆ. ಬೆಳಗಾಗಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕೇರೂರು ಗ್ರಾಮದಲ್ಲಿ ಪ್ರವಚನ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದ ಸಿದ್ದೇಶ್ವರ ಸ್ವಾಮೀಜಿಗಳು ಶೌಚಾಲಯಕ್ಕೆ ತೆರಳಿದ್ದಾಗ ಕಾಲುಜಾರಿ ಬಿದ್ದು ಗಾಯಗೊಂಡಿದ್ದಾರೆ. ಶ್ರೀಗಳಿಗೆ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆ ನಿಡಲಾಗುತ್ತಿದೆ.
0.5 ಮಾನವನಿಗೆ ಹಂದಿಯ ಹೃದಯ ಕಸಿ
ವೈದ್ಯಕೀಯ ರಂಗದಲ್ಲೇ ಪ್ರಪ್ರಥಮ ಭಾರಿಗೆ ವೈದ್ಯರು ಹಂದಿಯ ಹೃದಯವನ್ನು ಮಾನವ ರೋಗಿಗೆ ಕಸಿ ಮಾಡಿದ್ದಾರೆ. 57 ವರ್ಷದ ಡೇವಿಡ್ ಬೆನೆಟ್ ಗೆ ಜೀವ ಉಳಿಸುವ ಕೊನೆಯ ಪ್ರಯತ್ನದ ಸಲುವಾಗಿ ಈ ಆಪರೇಷನ್ ಮಾಡಿದ್ದಾರೆ. ಪ್ರಾಯೋಗಿಕ ಶಸ್ತ್ರಚಿಕಿತ್ಸೆಯ ಮೂರು ದಿನಗಳ ನಂತರವೂ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅಮೆರಿಕಾದ ಮೇರಿಲ್ಯಾಂಡ್ ಆಸ್ಪತ್ರೆ ವೈದ್ಯರು ಸೋಮವಾರ ಹೇಳಿದ್ದಾರೆ.
0.7 ಮಾಧುಸ್ವಾಮಿಗೆ ಕೊರೊನಾ
ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆನ್ನೆಲ್ಲೆಯಲ್ಲಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಸದ್ಯ ಸಚಿವರು ಹೋಮ್ ಐಸೋಲೇಟ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ ಇತ್ತೀಚೆಗೆ ತಮ್ಮ ಸಂಪರ್ಕದಲ್ಲಿದ್ದವರನ್ನು ಕೋವಿಡ್ ಟೆಸ್ಟ್ ಮಾಡಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.
0.7 ಲತಾ ಮಂಗೇಶ್ಕರ್ ಗೆ ಕರೋನಾ
ಭಾರತದ ನೈಟಿಂಗೇಲ್ ಎಂದೇ ಪ್ರಸಿದ್ದಿ ಪಡೆದಿರುವ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಕೋವಿಡ್ 19 ಸೋಂಕಿಗೆ ಒಳಗಾಗಿದ್ದಾರೆ.
COVID-19 ಟೆಸ್ಟ್ ನಲ್ಲಿ ಪಾಸಿಟೀವ್ ಪರೀಕ್ಷೆ ಬಂದ ನಂತರ, 92 ವರ್ಷದ ಲತ ಮಂಗೇಶ್ಕರ್ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿದೆ.
0.8 ಸ್ಯಾಂಡಲ್ ತಾರೆಯರ ವಿರುದ್ಧ ಕೇಸ್..!!!
ಮೇಕೆದಾಟು ಪಾದಯಾತ್ರೆಯಲ್ಲಿ ರಾಜಕಾರಣಿಗಳು , ಹೋರಾಟಗಾರರ ಜೊತೆಗೆ ಸ್ಯಾಂಡಲ್ ವುಡ್ ನಟನಟಿಯರು ಕೈ ಜೋಡಿಸಿದ್ದರು.. ಈ ಪೈಕಿ ದುನಿಯಾ ವಿಜಯ್ ,ಉಮಾಶ್ರೀ , ಸಾಧು ಕೋಕಿಲಾ , ಜಯಮಾಲಾ , ಸಾ.ರಾ ಗೋವಿಂದು ಕೂಡ ಇದ್ದರು.. ಆದ್ರೆ ಇವರೆಲ್ಲರೂ ಮೇಲೂ ಈಗ ದೂರು ದಾಖಲಾಗಿದೆ.. ಹೌದು.. ಸಾತನೂರು ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ಕೇಸ್ ದಾಖಲಾಗಿದೆ.. ಕಾಂಗ್ರೆಸ್ ನೇತೃತ್ವದ ಪಾದಯಾತ್ರೆಯ ಉದ್ಘಾಟನೆಯಲ್ಲಿ ಭಾಗಿಯಾಗಿದ್ದಾಗ ಇವರು ಕೋವಿಡ್ ನಿಯಮ ಉಲ್ಲಂಘನೆ ಮಾಡಿರೋ ಆರೋಪದ ಮೇಲೆ ಇವರ ವಿರುದ್ಧ ಕೇಸ್ ದಾಖಲಿಸಲಾಗಿದೆ.. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಒಟ್ಟು 31 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
0.9 ಮತ್ತೊಂದು ಕ್ರಿಕೆಟ್ ಟೂರ್ನಿ ಮುಂದೂಡಿಕೆ
ದೇಶಾದ್ಯಂತ ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಮತ್ತೊಂದು ಕ್ರಿಕೆಟ್ ಟೂರ್ನಿಯನ್ನು ಮುಂದೂಡಿದೆ. ಕೊರೊನಾ ಸೋಂಕಿನಿಂದಾಗಿ ಸದ್ಯ ರಣಜಿ ಟ್ರೋಫಿ ಮತ್ತು ಕರ್ನಲ್ ಸಿಕೆ ನಾಯುಡು ಟ್ರೋಫಿಗಳು ಮುಂದೂಡಲಾಗಿದೆ. ಇದೀಗ ಅಂಡರ್ -19 ಕೋಚ್ ಬೆಹರ್ ನಾಕೌಟ್ ಪಂದ್ಯಗಳನ್ನು ಮುಂದೂಡುವುದಾಗಿ ಬಿಸಿಸಿಐ ಘೋಷಿಸಿದೆ.
10. IPL ಟೈಟಲ್ ಸ್ಪಾನ್ಸರ್ ಟಾಟಾ ಗ್ರೂಪ್…
ಇಂಡಿಯನ್ ಪ್ರಿಮಿಯರ್ ಲೀಗ್ ನ ಟೈಟಲ್ ಸ್ಪಾನ್ಸರ್ ಆಗಿ ಭಾರತೀಯ ಹೆಮ್ಮೆಯ ಟಾಟಾ ಗ್ರೂಪ್ ಆಯ್ಕೆಗೊಂಡಿದೆ. ಮಿಲಿಯನ್ ಡಾಲರ್ ಟೂರ್ನಿಗೆ ಇಷ್ಟು ದಿನ ಚೀನಾದ ವೀವೋ ಟೈಟಲ್ ಸ್ಪಾನ್ಸರ್ ಆಗಿತ್ತು.ಇದಕ್ಕೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು. ಇದೀಗ ವೀವೋಗೆ ಗೇಟ್ ಪಾಸ್ ನೀಡಲಾಗಿದ್ದು, ಐಪಿಎಲ್ ಗೆ ಟೈಟಲ್ ಸ್ಪಾನ್ಸರ್ ಆಗಿ ಟಾಟಾ ಗ್ರೂಪ್ ಆಯ್ಕೆಗೊಂಡಿದೆ.