ಬೆಂಗಳೂರಿನಲ್ಲಿ ಕೊರೊನಾ ಬ್ಲಾಸ್ಟ್, ದೇಶದಲ್ಲಿ ಹೊಸದಾಗಿ 2,47,417 ಕೇಸ್, ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ರದ್ದು : ದಿನದ ಟಾಪ್ 10 ಸುದ್ದಿಗಳು..!

1 min read
COVID19 wildfire

ಸೂಪರ್ ಫಾಸ್ಟ್ ನಲ್ಲಿ ದಿನದ ಟಾಪ್ ಸುದ್ದಿ..!

0.1 ಬೆಂಗಳೂರಿನಲ್ಲಿ ಕೊರೊನಾ ಬ್ಲಾಸ್ಟ್

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿನ ಅಬ್ಬರ ಮುಂದುವರೆದಿದ್ದು, ಇಂದು 18 ಸಾವಿರಕ್ಕೂ ಹೆಚ್ಚು ಕೊರೊನಾ ಕೇಸ್ ಗಳು ಪತ್ತೆಯಾಗಿವೆ. ಮಂಗಳವಾರ 10,800 ಕೋವಿಡ್ ಕೇಸ್, ಬುಧವಾರ 15,617 ಕೇಸ್, ಇಂದು 18,374 ಜನರಲ್ಲಿ ಕೋವಿಡ್ ದೃಢಪಟ್ಟಿದ್ದು, ಇದರಿಂದ ಸಿಲಿಕಾನ್ ಸಿಟಿ ಕೊರೊನಾ ಹಾಪ್ ಸ್ಪಾಟ್ ಆಗಿ ಪರಿಣಮಿಸಿದೆ.

Omicron cases Saaksha TV

0.2 ದೇಶದಲ್ಲಿ ಕೋವಿಡ್ ಮಹಾಸ್ಪೋಟ..!

ಭಾರತದಲ್ಲಿ ಕೊರೊನಾ ಸೋಂಕಿನ ರಣಕೇಕೆ ಮುಂದುವರೆದಿದ್ದು, ಇಂದು ದೇಶದಲ್ಲಿ ಹೊಸದಾಗಿ 2,47,417 ಮಂದಿಯಲ್ಲಿ ಕೋವಿಡ್ ಕಾಣಿಸಿಕೊಂಡಿದೆ. ಹಿಂದಿನ ದಿನಕ್ಕೆ ಹೋಲಿಸಿದರೆ ಸೋಂಕು ಪ್ರಮಾಣ ಶೇಕಡಾ 27ರಷ್ಟು ಹೆಚ್ಚಾಗಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ದೇಶದಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 11,17,531ಕ್ಕೆ ಏರಿಕೆಯಾಗಿದೆ. ದೇಶದಾದ್ಯಂತ  84,825 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.

 

0.3  ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ರದ್ದು….  

ಸರ್ಕಾರಕ್ಕೆ ಸೆಡ್ಡು ಹೊಡೆದು ಕಾಂಗ್ರೆಸ್ ಪಕ್ಷ  ಆರಂಭಿಸಿದ್ದ  ಮೇಕೆದಾಟು ಪಾದಯಾತ್ರೆಯನ್ನ  ಕಾಂಗ್ರೆಸ್ ಕೊನೆಗೂ ರದ್ದುಗೊಳಿಸಿದೆ.   ಹೈಕೋರ್ಟ್ ನೊಟೀಸ್ ನೀಡಿದ ಬೆನ್ನಲ್ಲೆ ಸರ್ಕಾರ ಮೇಕೆದಾಟ ಪಾದಯಾತ್ರೆಯನ್ನ ನಿಲ್ಲಿಸುವಂತೆ  ಆದೇಶ ಹೊರಡಿಸಿತತ್ತು.

Mekedatu Saaksha Tv

0.4 ವೀರಪ್ಪ. ಮೊಯ್ಲಿಗೆ ಕೊರೊನಾ

ರಾಜ್ಯದ ಮಾಜಿ ಸಿಎಂ ಡಾ. ಎಂ. ವೀರಪ್ಪ. ಮೊಯ್ಲಿಯವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಲಘು ರೋಗ ಲಕ್ಷಣಗಳು ಕಂಡು ಬಂದಿದ್ದರಿಂದ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದರು. ನಿನ್ನೆ ಸಂಜೆ ಪಾಸಿಟಿವ್ ವರದಿ ಬಂದಿದೆ. ಇವರು ಕೆಮ್ಮು ಮತ್ತು ಜ್ವರದ ಲಕ್ಷಣಗಳಿಂದ ಬಳಲುತ್ತಿದ್ದು, ವ್ಯಾಕ್ಸಿನ್ ಪಡೆದಿರುವುದರಿಂದ ಬಹಳಷ್ಟು ಪರಿಣಾಮ ಬೀರಿಲ್ಲ. ಸಧ್ಯ ಓಮ್ ಕ್ವಾರೆಂಟೈನ್ ಆಗಿದ್ದು ಇವರ ಸಂಪರ್ಕಕ್ಕೆ ಬಂದವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಟ್ವಿಟ್ ಮಾಡಿದ್ದಾರೆ.

0.5 ಎಲ್ಲಾ ರಾಜ್ಯಗಳ ಸಿಎಂಗಳ ಸಭೆ ಕರೆದ ಪ್ರಧಾನಿ

ನವದೆಹಲಿ:   ಕೊರೊನಾ 3ನೇ ಅಲೆ ನಿಯಂತ್ರಿಸುವ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು  ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದಿದ್ದಾರೆ. ಅಲ್ಲದೇ  ಸೋಂಕು ಹೆಚ್ಚುತ್ತಿರುವ ಹಿನ್ನಲೇ ಜನವರಿ 9 ರಂದು ಪ್ರಧಾನಿ ನರೇಂದ್ರ ಮೋದಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದರು. ಈ ಮಹತ್ವದ ಸಭೆಯಲ್ಲಿ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ, ಕೇಂದ್ರ ಆರೋಗ್ಯ ಸಚಿವ ಮುನ್ಸುಖ್ ಭಾಯ್ ಮಾಂಡೋವಿಯಾ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಖಾತೆ ಸಚಿವೆ ಭಾರತಿ ಪ್ರವೀಣ್ ಪವಾರ್ ಹಾಗೂ ಇನ್ನೀತರ ಅಧಿಕಾರಿಗಳು ಭಾಗಿಯಾಗಿದ್ದರು.

0.6 ತಿಮ್ಮಪ್ಪನಿಗೆ  2 ಕೊಟಿ ರೂ ಕಾಣಿಕೆ

ಕೋವ್ಯಾಕ್ಸಿನ್ ಕೋವಿಡ್ ಲಸಿಕೆ ತಯಾರಕರಾದ ಭಾರತ್ ಬಯೋಟೆಕ್ ಇಂಟರ್‌ನ್ಯಾಶನಲ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಳ್ಳಾ ಅವರು ಗುರುವಾರ ವೈಕುಂಠ ಏಕಾದಶಿ ಹಬ್ಬದ ನಿಮಿತ್ತ ತಿರುಮಲದಲ್ಲಿರುವ ವೆಂಕಟೇಶ್ವರನಿಗೆ  2 ಕೋಟಿ ರೂ.ಕಾಣಿಕೆ ನೀಡಿದ್ದಾರೆ.

0.7 ಇಸ್ರೋ ನೂತನ ಅಧ್ಯಕ್ಷರಾಗಿ ಎಸ್ ಸೋಮನಾಥ್ …

ಪ್ರಖ್ಯಾತ ಏರೋಸ್ಪೇಸ್ ಇಂಜಿನಿಯರ್ ಮತ್ತು ರಾಕೆಟ್ ವಿಜ್ಞಾನಿ ಡಾ ಎಸ್ ಸೋಮನಾಥ್ ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಹೊಸ ಅಧ್ಯಕ್ಷರಾಗಿ ಮತ್ತು ಮೂರು ವರ್ಷಗಳ ಜಂಟಿ ಅವಧಿಗೆ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.

0.8 ಜೆಇಎಂ ಭಯೋತ್ಪಾದಕನ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಪರಿವಾನ್ ಪ್ರದೇಶದಲ್ಲಿ ಬುಧವಾರ  ರಾತ್ರಿ ಪೊಲೀಸರು ಮತ್ತು ಯೋಧರು ಜಂಟಿಯಾಗಿ ನಡೆಸಿದ ಎನ್‌ಕೌಂಟರ್‌ನಲ್ಲಿ ಜೈಶ್-ಎ-ಮೊಹಮ್ಮದ್ (ಜೆಇಎಂ) ಭಯೋತ್ಪಾದಕನ್ನು ಹತ್ಯೆ ಮಾಡಿದ್ದಾರೆ.  ಈ ಪ್ರದೇಶದಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಲಾಗಿತ್ತು.

ಈ ಕಾರ್ಯಾಚರಣೆಯಲ್ಲಿ ಒಬ್ಬ ಪೊಲೀಸ್ ಹುತಾತ್ಮರಾಗಿದ್ದು, ಮೂವರು ಯೋಧರು ಸೇರಿದಂತೆ ಐವರು ಗಾಯಗೊಂಡಿದ್ದಾರೆ ಹಾಗೇ ಎನ್‌ಕೌಂಟರ್‌ನಲ್ಲಿ ಇಬ್ಬರು ನಾಗರಿಕರಿಗೂ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

0.9 ಮೊತ್ತೊಂದು ಮಗು ದತ್ತು ಪಡೆದ ಸುಷ್ಮಿತಾ..!

ಸುಷ್ಮಿತಾ ಬಾಯ್ ಫ್ರೆಂಡ್ ಜೊತೆಗೆ ಬ್ರೇಕ್ ಅಪ್ ಮಾಡಿಕೊಂಡ ನಂತರ ಮತ್ತೊಂದು ಗಂಡು ಮಗುವನ್ನ ದತ್ತು ಪಡೆದಿದ್ದಾರೆ.. ಈಗಾಗಲೇ ಸುಷ್ಮಿತಾ ಇಬ್ಬರು ಮಕ್ಕಳನ್ನು ದತ್ತು ಪಡೆದು ನೋಡಿಕೊಳ್ಳುತ್ತಾ ಇದ್ದಾರೆ. ಈಗ ಮೂರನೇ ಮಗುವನ್ನು ದತ್ತು ಪಡೆದಿದ್ದಾರೆ. ಸುಷ್ಮಿತಾಳ ಈ ನಿರ್ಧಾರಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

10. ಬಿಸಿಸಿಐ ಡೆಡ್ ಲೈನ್…

2022ರ ಐಪಿಎಲ್ ಗಾಗಿ ಕೊರೊನಾ ಸೋಂಕಿನ ಆರ್ಭಟದ ಮಧ್ಯೆಯೂ ತಯಾರಿ ಆರಂಭವಾಗಿದೆ.  ಮೆಗಾ ಹರಾಜಿಗೂ ಮುನ್ನ ಮೂವರು ಆಟಗಾರರನ್ನು ಆಯ್ಕೆ ಮಾಡುವ ವಿಚಾರದಲ್ಲಿ ಬಿಸಿಸಿಐ ಡೆಡ್ ಲೈನ್ ನೀಡಿದೆ. ಜನವರಿ 22 ರಂದು ಸಂಜೆ 5 ಗಂಟೆ ಒಳಗಾಗಿ, ಎರಡೂ ತಂಡಗಳು ತಲಾ ಮೂವರು ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd