TOP 10 NEWS – ಈ ದಿನದ ಪ್ರಮುಖ ಸುದ್ದಿಗಳು…!!
ಹಿಜಾಬ್ – ಕೇಸರಿ ಶಾಲು ವಿವಾದದ ಬಗ್ಗೆ ಇಂದು ಮತ್ತೆ ವಿಚಾರಣೆ ನಡೆಸಿದ ಹೈ ಕೋರ್ಟ್ ಮುಂದಿನ ವಿಚಾರಣೆಯನ್ನ ನಾಳೆ ಮಧ್ಯಾಹ್ನ 2.30 ಕ್ಕೆ ಮುಂದೂಡಿಕೆ ಮಾಡಿದೆ…
ದೇಶದಲ್ಲಿ ಕೆಳೆದ 24 ಗಂಟೆಯಲ್ಲಿ 34,113 ಹೊಸದಾಗಿ ಕೊರೊನಾ ಪ್ರಕರಣಗಳು ವರದಿಯಾಗಿವೆ . ಸಕ್ರಿಯ ಪ್ರಕರಣಗಳು 4,78,882 ಲಕ್ಷ ಇದ್ದು, ಕಳೆದ 24 ಗಂಟೆಯಲ್ಲಿ 91,930 ಲಕ್ಷ ರೋಗಿಗಳು ಚೇತರಿಸಿಕೊಂಡಿದ್ದಾರೆ. ದೇಶದಲ್ಲಿ ಕಳೆದ 24 ಗಂಟೆಯಲ್ಲಿ 346 ಜನರು ಕೊರೊನಾದಿಂದ ಮೃತಪಟ್ಟಿದ್ದಾರೆ.
ವಿದ್ಯಾರ್ಥಿನಿಯರು ಎಕ್ಸಾಂಗಿಂತ ಹಿಜಾಬ್ ಮುಖ್ಯ ಅಂತ ಹೇಳಿ ಪರೀಕ್ಷೆ ಬರೆಯದೇ ಮನೆಗೆ ಹೋಗಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. ಇಂದು ಶಾಲೆಗಳು ಪುನರಾರಂಭವಾಗಿದ್ದು, ವಿದ್ಯಾರ್ಥನಿಯರು ಹಿಜಾಬ್ ಧರಿಸಿಕೊಂಡು ಶಾಲೆಗೆ ಬಂದಿದ್ದರು. ಈ ಮೂಲಕ ಹೈಕೋರ್ಟ್ ಆದೇಶವನ್ನು ಉಲ್ಲಂಘಸಿದ್ದರು.
ಹಿಜಾಬ್ ಇಲ್ಲದೇ ಇರೋದ್ರಿಂದ ಅತ್ಯಾಚಾರಗಳಾಗುತ್ತಿವೆ ಎನ್ನುವ ಜಮೀರ್ ಅಹಮ್ಮದ ಹೇಳಿಕೆ ನಿರ್ಲಜ್ಜದ ಹೇಳಿಕೆ… ಇಡೀ ಮಹಿಳೆಯರಿಗೆ ಅವಮಾನ ಮಾಡುವ ಸಂಗತಿಯಾಗಿದೆ… ಈ ದೇಶದಲ್ಲಿ ಹಿಂದೂ ಮಹಿಳೆಯರು ಹಿಜಾಬ್ ಇಲ್ಲದೇ ಜೀವನ ಮಾಡ್ತಾ ಇದ್ದಾರೆ… ಎಂದು ಜಮಖಂಡಿಯಲ್ಲಿ ಶ್ರೀರಾಮ ಸೇನಾ ಮುಖಂಡ ಪ್ರಮೋದ ಮುತಾಲಿಕ್ ಕಿಡಿಕಾರಿದ್ದಾರೆ.
ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಈ ರಾಕೇಟ್ ಉಡಾವಣೆ ಮಾಡಿದ್ದು, ಇದರಲ್ಲಿ ಭೂ ವೀಕ್ಷಣಾ ಉಪಗ್ರಹ INSPIREsat-1 ಮತ್ತು INS-2TD ಸೇರಿದಂತೆ ಒಟ್ಟು ಮೂರು ಸಣ್ಣ ಉಪಗ್ರಹಗಳಿವೆ ಎಂದು ತಿಳಿದುಬಂದಿದೆ. ಸೋಮವಾರ ಬೆಳಗ್ಗೆ 5.59ನಿಮಿಷಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಮೊದಲ ಉಡಾವಣಾ ಪ್ಯಾಡ್ನಿಂದ ಉಡಾವಣೆಯಾಗಿದೆ.
ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದು ನೀಡಿದೆ. ಅದು ಸ್ಮಾರ್ಟ್ ಪೋನ್ ಬಳಸಿ, ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದ್ರೇ ಸಾಕು, ರೈಲ್ವೆ ಟಿಕೆಟ್ ಪಡೆಯುವಂತೆ ವಿನೂತನ ಕ್ರಮವನ್ನು ಜಾರಿಗೆ ತರಲಾಗಿದೆ.
ಕನ್ನಡ ಚಿತ್ರರಂಗದ ಹಿರಿಯ ನಟ ಕಲಾ ತಪಸ್ವಿ ರಾಜೇಶ್ ಅವರನ್ನು ತೀವ್ರ ಅನಾರೋಗ್ಯ ಕಾರಣದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 82 ವರ್ಷ ವಯಸ್ಸಿನ ರಾಜೇಶ್ ಅವರಿಗೆ ವೆಂಟಿಲೇಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಡಾರ್ಲಿಂಗ್ ಪ್ರಭಾಸ್ ನಟನೆಯ ಅದ್ಭುತ ದೃಶ್ಯ ಕಾವ್ಯದ ಸಿನಿಮಾ ರಾಧೆ ಶ್ಯಾಮ್ ನ ಗ್ಲಿಂಪ್ಸ್ ಪ್ರೇಮಿಗಳ ದಿನದ ಪ್ರಯುಕ್ತ ರಿಲೀಸ್ ಆಗಿದೆ. ರಾಧಾಕೃಷ್ಣ ಕುಮಾರ್ ಎಂಬುವವರು ಈ ಚಿತ್ರವನ್ನ ನಿರ್ದೇಶಿಸಿದ್ದಾರೆ. ನಾಯಕಿಗೆ ಪ್ರೇಮ ನಿವೇದನೆ ಮಾಡುವ ಸಣ್ಣ ವೀಡಿಯೋ ತುಣುಕನನ್ನ ಚಿತ್ರತಂಡ ಹಂಚಿಕೊಂಡಿದೆ.
ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಸದ್ಯ ಫುಲ್ ಖುಷಿಯಲ್ಲಿದ್ದಾರೆ. ಜೋಡಿಗಳಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ 1 ವರ್ಷ ಕಳೆದಿವೆ. ಫೆಬ್ರವರಿ 14 ಕ್ಕೆ ಈ ಜೋಡಿ ಮದುವೆಯಾಗಿ ಮೊದಲ ವಿವಾಹ ವಾರ್ಷಿಕೋತ್ಸನ್ನ ಆಚರಿಸಿಕೊಳ್ಳುತ್ತಿದೆ.
15ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಭಾರೀ ಲೆಕ್ಕಚಾರ ಹಾಕೊಂಡು ತಂಡವನ್ನು ಕಟ್ಟಿದೆ. ಬಿಡ್ಡಿಂಗ್ ನಲ್ಲಿ 25 ಮಂದಿಯನ್ನು ಆಯ್ಕೆ ಮಾಡಿದೆ. ಇದರಲ್ಲಿ ಎಂಟು ಮಂದಿ ವಿದೇಶಿ ಆಟಗಾರರು ಮತ್ತು 17 ಮಂದಿ ಭಾರತದ ಆಟಗಾರರು ಇದ್ದಾರೆ.