ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ನಲ್ಲಿ ಗರಿಷ್ಠ ರನ್ ದಾಖಲೆ ಯಾರ ಹೆಸರಿನಲ್ಲಿದೆ..?

1 min read

ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ನಲ್ಲಿ ಗರಿಷ್ಠ ರನ್ ದಾಖಲೆ ಯಾರ ಹೆಸರಿನಲ್ಲಿದೆ..?

ajinkya rahane team india saakshatvವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ನಲ್ಲಿ ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ಫೈನಲ್‍ಗೆ ಪ್ರವೇಶಿಸಿದೆ. ಜೂನ್ 18ರಿಂದ ಇಂಗ್ಲೆಂಡ್ ನ ಸೌತಾಂಪ್ಟನ್ ನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಈಗಾಗಲೇ ಟೀಮ್ ಇಂಡಿಯಾ ಇಂಗ್ಲೆಂಡ್ ನಲ್ಲಿ ಬೀಡುಬಿಟ್ಟಿದ್ದು, ಕೋವಿಡ್ ಮಾರ್ಗಸೂಚಿಯ ಪ್ರಕಾರ ಕ್ವಾರಂಟೈನ್ ನಲ್ಲಿದೆ. ಇನ್ನೊಂದೆಡೆ ನ್ಯೂಜಿಲೆಂಡ್ ತಂಡ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಮೊದಲ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ.
ಈ ನಡುವೆ, ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ನಲ್ಲಿ ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ಅಗ್ರ ಸ್ಥಾನ ಪಡೆದುಕೊಂಡಿದ್ರೂ ಆಟಗಾರರ ವೈಯಕ್ತಿಕ ದಾಖಲೆಗಳಲ್ಲಿ ಉಭಯ ತಂಡಗಳ ಆಟಗಾರರ ಹೆಸರು ಕೆಳ ಕ್ರಮಾಂಕದಲ್ಲಿ ಕಾಣಿಸುತ್ತಿದೆ.
ಹೌದು, ಬ್ಯಾಟಿಂಗ್ ನಲ್ಲಿ ನೋಡುವುದಾದ್ರೆ ಟಾಪ್ ಟೆನ್ ಲಿಸ್ಟ್ ನಲ್ಲಿ ಭಾರತದ ಇಬ್ಬರು ಆಟಗಾರರ ಹೆಸರು ಕಾಣಸಿಗುತ್ತದೆ. ಟೀಮ್ ಇಂಡಿಯಾದ ಅಜಿಂಕ್ಯಾ ರಹಾನೆ ಐದನೇ ಸ್ಥಾನದಲ್ಲಿದ್ರೆ, ರೋಹಿತ್ ಶರ್ಮಾ ಆರನೇ ಸ್ಥಾನದಲ್ಲಿದ್ದಾರೆ. ಇನ್ನು ಟೀಮ್ ಇಂಡಿಯಾ ನಾಯಕ ಟಾಪ್ ಟೆನ್ ಲಿಸ್ಟ್ ನಲ್ಲೂ ಇಲ್ಲ. ವಿರಾಟ್ ಕೊಹ್ಲಿ 11ನೇ ಸ್ಥಾನದಲ್ಲಿದ್ದಾರೆ.

rohith sharma saakshatv team indiaವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ನ ಬ್ಯಾಟಿಂಗ್ ವಿಭಾಗದಲ್ಲಿ ಆಸ್ಟ್ರೇಲಿಯಾದ ಮಾರ್ನಸ್ ಲಬುಸ್ಚೆಗ್ನೆ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ. ಮಾರ್ನಸ್ ಅವರು ಒಟ್ಟು 13 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅಲ್ಲದೆ 73ರ ಸರಾಸರಿಯಲ್ಲಿ 1675 ರನ್ ಗಳಿಸಿದ್ದಾರೆ. ಗರಿಷ್ಠ 215 ರನ್. ಒಟ್ಟು ಐದು ಶತಕ ಹಾಗೂ 9 ಅರ್ಧಶತಗಳನ್ನು ದಾಖಲಿಸಿದ್ದಾರೆ.
ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜಾಯ್ ರೂಟ್ ಅವರು ಎರಡನೇ ಸ್ಥಾನದಲ್ಲಿದ್ದಾರೆ. ಜಾಯ್ ರೂಟ್ 20 ಪಂದ್ಯಗಳಲ್ಲಿ 47ರ ಸರಾಸರಿಯಲ್ಲಿ 1660 ರನ್ ಗಳಿಸಿದ್ದು, ಮೂರು ಶತಕ ಹಾಗೂ ಎಂಟು ಅರ್ಧಶತಗಳನ್ನು ದಾಖಲಿಸಿದ್ದಾರೆ.
rishab pant saakshatv team indiaಹಾಗೇ ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ 13 ಟೆಸ್ಟ್ ಪಂದ್ಯಗಳಲ್ಲಿ 64 ರ ಸರಾಸರಿಯಲ್ಲಿ 1341 ರನ್ ಗಳಿಸಿದ್ದಾರೆ. ಇದ್ರಲ್ಲಿ ನಾಲ್ಕು ಶತಕ ಹಾಗೂ ಏಳು ಅರ್ಧಶತಕಗಳಿವೆ. ಸ್ಮಿತ್ ಮೂರನೇ ಸ್ಥಾನದಲ್ಲಿದ್ದಾರೆ.
ನಾಲ್ಕನೇ ಸ್ಥಾನದಲ್ಲಿ ಇಂಗ್ಲೆಂಡ್ ನ ಆಲ್ ರೌಂಡ್ ಬೆನ್ ಸ್ಟೋಕ್ಸ್ ಇದ್ದಾರೆ. ಬೆನ್ ಸ್ಟೋಕ್ಸ್ 17 ಪಂದ್ಯಗಳಲ್ಲಿ 46ರ ಸರಾಸರಿಯಲ್ಲಿ 1334 ರನ್ ಗಳಿಸಿದ್ದು, ನಾಲ್ಕು ಶತಕ ಹಾಗೂ ಆರು ಅರ್ಧಶತಗಳನ್ನು ಸಿಡಿಸಿದ್ದಾರೆ.
ಐದನೇ ಸ್ಥಾನದಲ್ಲಿ ಭಾರತದ ಅಜಿಂಕ್ಯಾ ರಹಾನೆ ಇದ್ದಾರೆ. ರಹಾನೆ 17 ಪಂದ್ಯಗಳಲ್ಲಿ 44ರ ಸರಾಸರಿಯಲ್ಲಿ 1095 ರನ್ ದಾಖಲಿಸಿದ್ದಾರೆ. ಇದ್ರಲ್ಲಿ ಮೂರು ಶತಕ ಹಾಗೂ ಆರು ಅರ್ಧಶತಕಗಳಿವೆ.
ಆರನೇ ಸ್ಥಾನದಲ್ಲಿರುವ ರೋಹಿತ್ ಶರ್ಮಾ 11 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 64ರ ಸರಾಸರಿಯಲ್ಲಿ ರೋಹಿತ್ 1030 ರನ್ ಗಳಿಸಿದ್ದು, ನಾಲ್ಕು ಶತಕ ಹಾಗೂ ಎರಡು ಅರ್ಧಶತಕಗಳನ್ನು ಸಿಡಿಸಿದ್ದಾರೆ.
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 14 ಟೆಸ್ಟ್ ಪಂದ್ಯಗಳಲ್ಲಿ44ರ ಸರಾಸರಿಯಲ್ಲಿ 877 ರನ್ ಗಳಿಸಿದ್ದು,ಎರಡು ಶತಕ ಹಾಗೂ ಐದು ಅರ್ಧಶತಗಳನ್ನು ದಾಖಲಿಸಿದ್ದು 11ನೇ ಸ್ಥಾನದಲ್ಲಿದ್ದಾರೆ. ಚೇತೇಶ್ವರ ಪೂಜಾರ ರಿಷಬ್ ಪಂತ್, ರವೀಂದ್ರ ಜಡೇಜಾ ಕೂಡ ಟಾಫ್ ಫಿಫ್ಟಿನಲ್ಲಿ ಕಾಣಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd