ಟಾಪ್ 5 ಅಂತರಾಷ್ಟ್ರೀಯ ಸುದ್ದಿಗಳು : ಇತ್ತೀಚೆಗಿನ ಅಪ್ ಡೇಟ್ಸ್..!
ಪೂರ್ಣ ಸುದ್ದಿಗಳಿಗಾಗಿ ಲಿಂಕ್ ಗಳನ್ನ ಕ್ಲಿಕ್ ಮಾಡಿ
ಭಾರತೀಯ ಲಸಿಕೆ ಬಗ್ಗೆ ಯಾವುದೇ ಆಸಕ್ತಿ ತೋರಿಸದ ಪಾಕಿಸ್ತಾನ – ಏನಿದರ ಹಿಂದಿನ ಗುಟ್ಟು?
ಇಸ್ಲಾಮಾಬಾದ್ವಿ : ಶ್ವದ ಅತಿದೊಡ್ಡ ಕೊರೋನಾ ಲಸಿಕೆ ಅಭಿಯಾನದಲ್ಲಿ ಭಾಗಿಯಾಗಿರುವ ಭಾರತವು ತನ್ನ ನೆರೆಯ ರಾಷ್ಟ್ರಗಳು ಸೇರಿದಂತೆ ವಿಶ್ವದ ಹಲವು ದೇಶಗಳಿಗೆ ಕೋವಿಡ್ -19 ಲಸಿಕೆ ಕಳುಹಿಸಲು ಸಹಾಯ ಮಾಡಿದೆ. ಇದನ್ನು ಭಾರತದ ‘ಲಸಿಕೆ ರಾಜತಾಂತ್ರಿಕತೆ’ ಎಂದು ಬಣ್ಣಿಸಲಾಗುತ್ತಿದೆ.
ಚೀನೀ ಆ್ಯಪ್ ನಿಷೇಧಿಸುವ ಭಾರತ ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿದ ಚೀನಾ !
ಬೀಜಿಂಗ್, ಜನವರಿ28: 59 ಚೀನೀ ಆ್ಯಪ್‌ಗಳನ್ನು ನಿಷೇಧಿಸುವ ಭಾರತ ಸರ್ಕಾರದ ನಿರ್ಧಾರವು ವಿಶ್ವ ವಾಣಿಜ್ಯ ಸಂಸ್ಥೆಯ ನ್ಯಾಯಯುತ ವ್ಯವಹಾರ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಚೀನಾ ಬುಧವಾರ ಹೇಳಿದೆ. ಕಳೆದ ವರ್ಷ ಭಾರತ ಚೀನಾ ನಿಷೇಧಿತ ಗಡಿಯಲ್ಲಿ ರಾಜಕೀಯ ಉದ್ವಿಗ್ನತೆ ಉಂಟಾದ ಬಳಿಕ ಟಿಕ್‌ಟಾಕ್ ಮತ್ತು ಇತರ ಚೀನಿ ಆ್ಯಪ್‌ಗಳನ್ನು ನಿಷೇಧ ಮಾಡಲು ಭಾರತ ಸರ್ಕಾರ ನಿರ್ಧರಿಸಿದೆ. ಭಾರತದ ತಾರತಮ್ಯ ಕ್ರಮಗಳನ್ನು ತಕ್ಷಣ ಸರಿಪಡಿಸಿಕೊಳ್ಳುವಂತೆ ಮತ್ತು ದ್ವಿಪಕ್ಷೀಯ ಸಹಕಾರಕ್ಕೆ ಮತ್ತಷ್ಟು ಹಾನಿಯಾಗದಂತೆ ನಾವು ಒತ್ತಾಯಿಸುತ್ತೇವೆ ಎಂದು ಚೀನಾದ ರಾಯಭಾರ ಕಚೇರಿಯ ವಕ್ತಾರ ಜಿ ರೊಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665
ವಾಷಿಂಗ್ಟನ್ ನಲ್ಲಿ ಖಾಲಿಸ್ತಾನ್ ಸದಸ್ಯರಿಂದ ಭಾರತ ವಿರೋಧಿ ಘೋಷಣೆ
ಅಮೆರಿಕಾ: ಭಾರತದಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಖಾಲಿಸ್ತಾನ್ ಪ್ರತ್ಯೇಕವಾದಿಗಳು ಬೆಂಬಲ ಸೂಚಿಸಿದ್ದು, ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಹೊರಗಡೆ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ. ಭಾರತೀಯ ರಾಯಭಾರ ಕಚೇರಿ ಮುಂಭಾಗದಲ್ಲಿ ಭಿತ್ತಿಚಿತ್ರಗಳೊಂದಿಗೆ ಜಮಾಯಿಸಿದ ಖಾಲಿಸ್ತಾನ್ ಸದಸ್ಯರು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಡೊನಾಲ್ಡ್ ಟ್ರಂಪ್ ವಾಗ್ದಂಡನೆಯಿಂದ ಖುಲಾಸೆಗೊಳ್ಳುವ ಸಾಧ್ಯತೆ
ಅಮೆರಿಕಾ: ಅಮೆರಿಕದ ಸೆನೆಟ್ ನಲ್ಲಿ ರಿಪಬ್ಲಿಕನ್ ಪಕ್ಷದ ಸೆನಟರ್ ಗಳ ಬೆಂಬಲದ ಕೊರತೆಯ ಕಾರಣದಿಂದಾಗಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಾಗ್ದಂಡನೆಯಿಂದ ಖುಲಾಸೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ. ಹೌದು ಜೋ ಬೈಡೆನ್ ಪದಗ್ರಹಣಕ್ಕೂ ಕೆಲ ದಿನಗಳ ಮುಂಚೆ ಕ್ಯಾಪಿಟಲ್ಸ್ ಮೇಲೆ ನಡೆದ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಟ್ರಂಪ್ ಅವರನ್ನು ವಾಗ್ದಂಡನೆಗೆ ಒಳಪಡಿಸಲು ಡೆಮಾಕ್ರಟಿಕ್ ಪಕ್ಷ ಮುಂದಾಗಿದೆ.
ಭಾರತದ ಕೋವಿಡ್ ಲಸಿಕೆಯ ಯಶಸ್ಸನ್ನು ಸಹಿಸಿಕೊಳ್ಳಲಾಗದೆ ಒದ್ದಾಡುತ್ತಿರುವ ಚೀನಾ !
ಹೊಸದಿಲ್ಲಿ, ಜನವರಿ26: ಕೊರೋನಾ ವೈರಸ್ ವಿರುದ್ಧ ಭಾರತದ ಹೋರಾಟದ ಹಂತದಲ್ಲಿದೆ. ಜೊತೆಗೆ ಭಾರತವು ತನ್ನ ನೆರೆಹೊರೆ ದೇಶಗಳಿಗೆ ಸಹಾಯ ಹಸ್ತವನ್ನು ಚಾಚಿದೆ. ಭಾರತ ತನ್ನ 10 ನೆರೆಯ ರಾಷ್ಟ್ರಗಳಿಗೆ ಲಸಿಕೆ ಪೂರೈಸಲಿದೆ. ಈ ಪೈಕಿ ಲಸಿಕೆಗಳನ್ನು ಭೂತಾನ್, ಮಾಲ್ಡೀವ್ಸ್, ಬಾಂಗ್ಲಾದೇಶ, ನೇಪಾಳ, ಮ್ಯಾನ್ಮಾರ್ ಮತ್ತು ಸೀಶೆಲ್ಸ್ಗೆ ಕಳುಹಿಸಲಾಗುತ್ತಿದ್ದು, ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಮಾರಿಷಸ್ ದೇಶಗಳೊಂದಿಗೆ ಮಾತುಕತೆ ನಡೆಯುತ್ತಿದೆ. ಆದರೆ ಕೊರೋನಾ ವ್ಯಾಕ್ಸಿನೇಷನ್‌ನಲ್ಲಿ ಭಾರತದ ಈ ಯಶಸ್ಸನ್ನು ಜೀರ್ಣಿಸಿಕೊಳ್ಳಲು ಚೀನಾಕ್ಕೆ ಸಾಧ್ಯವಾಗುತ್ತಿಲ್ಲ. ಸೀರಮ್ ಇನ್ಸ್ಟಿಟ್ಯೂಟ್ ಅಗ್ನಿ ಅವಘಡದ ನಂತರ ಭಾರತದ ಲಸಿಕೆ ಉತ್ಪಾದನಾ ಸಾಮರ್ಥ್ಯವನ್ನು ಚೀನಾದ ಸರ್ಕಾರಿ ಪತ್ರಿಕೆ ಗ್ಲೋಬಲ್ ಟೈಮ್ಸ್ ಪ್ರಶ್ನಿಸಿತ್ತು. ಚೀನಾದಲ್ಲಿ ವಾಸಿಸುವ ಭಾರತೀಯರು ಚೀನಾದ ಲಸಿಕೆಗೆ ಆದ್ಯತೆ ನೀಡುತ್ತಿದ್ದಾರೆ ಎಂದು ಗ್ಲೋಬಲ್ ಟೈಮ್ಸ್ ಹೇಳಿತ್ತು.
ಪೂರ್ಣ ಸುದ್ದಿಗಳಿಗಾಗಿ ಲಿಂಕ್ ಗಳನ್ನ ಕ್ಲಿಕ್ ಮಾಡಿ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel