ಸೂಪರ್ ಫಾಸ್ಟ್ ನಲ್ಲಿ ದಿನದ ಪ್ರಮುಖ ಸುದ್ದಿಗಳು..!
ಊರಿನತ್ತ ಗುಳೆ ಹೊರಟ ರಾಜಧಾನಿ ಜನ
ಬೆಂಗಳೂರು: ಒಮಿಕ್ರಾನ್ ಹೆಚ್ಚಳ ,ಕೋವಿಡ್ ಮೂರನೇ ಅಲೆಯಿಂದ ಆತಂಕಗೊಂಡಿರುವ ಜನ ಬೆಂಗಳೂರಿನಿಂದ ಮರಳಿ ಊರುಗಳತ್ತ ಗುಳೆ ಹೊರಟಿದ್ದಾರೆ.. ಈಗಾಗಲೇ ರಾಜ್ಯ ಸರಕಾರ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದೆ, ಮುಂದೆ ಲಾಕ್ ಡೌನ್ ಮಾಡಿದರು ಮಾಡಬಹುದು. ಎರಡನೇ ಅಲೆಯಲ್ಲಿಯು ಕೂಡಾ ಸರಕಾರ ಇದೇ ರೀತಿ ಮಾಡಿತ್ತು, ಆಗ ಎಷ್ಟೊ ಜನರಿಗೆ ತಿಂಗಳುಗಟ್ಟಲೆ ಊಟ, ಬಟ್ಟೆಗು ಸಮಸ್ಯೆ ಉಂಟಾಗಿತ್ತು. ಮತ್ತೆ ಇದೇ ರೀತಿ ಆದರೆ ಜನರಿಗೆ ಬದುಕಲು ಅಸಾಧ್ಯ ಎಂದು ಜನರು ಊರಿನತ್ತ ಮುಖ ಮಾಡಿದ್ದಾರೆ.
‘ಬಿಜೆಪಿಗರೆಗೆ ರೂಲ್ಸ್ ಅನ್ವಯಿಸೋದಿಲ್ವಾ’..?
ಬೆಂಗಳೂರು : ಇಂದು ವಿಧಾನಸೌಧದ ಬ್ಯಾಕ್ವೆಂಟ್ ಹಾಲ್ ನಲ್ಲಿ ನಡೆದ ನೂತನ ಸದಸ್ಯರ ಪರಿಷತ್ ಪ್ರಮಾಣ ವಚನ ಸಮಾರಂಭದಲ್ಲಿ ಸಿಎಂ ಬೊಮ್ಮಾಯಿ ಭಾಗಿಯಾಗಿದ್ದರು. ಈ ಸಮಾರಂಭದಲ್ಲಿ ಸಾಮಜಿಕ ಅಂತರವಿಲ್ಲ, ಯಾರು ಕೂಡ ಮಾಸ್ಕ್ ಧರಿಸಿಲ್ಲ, ಕೋವಿಡ್ ರೂಲ್ಸ್ ನ್ನು ಗಾಳಿಗೆ ತೂರಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ಗುಡುಗಿದರು.
ಅಲ್ಲದೇ ಜನರಿಗೆ ಒಂದು ರೂಲ್ಸ್, ರಾಜಕಾರಣಿಗಳಿಗೆ ಒಂದು ರೂಲ್ಸ್ ಇದೆಯಾ ಕರ್ನಾಟಕದಲ್ಲಿ. ರಾಜ್ಯದ ಬಡಪಾಯಿಗಳಿಗೆ ಮಾತ್ರ ಈ ರೂಲ್ಸ್ ಅನ್ವಯಿಸಯತ್ತಾ, ಬಿಜೆಪಿ ಸರ್ಕಾರದವರೆಗೆ ರೂಲ್ಸ್ ಅನ್ವಯವಾಗೋದಿಲ್ವಾ, ಸಿಎಂ ಬೊಮ್ಮಾಯಿ ಇದ್ದ ಕಾರ್ಯಕ್ರಮದಲ್ಲಿ ರೂಲ್ಸ್ ಫಾಲೋ ಮಾಡುತ್ತಿಲ್ಲ ಯಾಕೆ ಎಂದು ಡಿಕೆಶಿ ಪ್ರಶ್ನಿಸಿದರು.
ಮದ್ಯಪ್ರಿಯರಿಗೆ ಶಾಕ್ ..!
ಮದ್ಯಪ್ರಿಯರಿಗೆ ರಾಜ್ಯ ಸರ್ಕಾರ ಶಾಕಿಂಗ್ ನ್ಯೂಸ್ ಕೊಟ್ಟಿದೆ. ವೀಕೆಂಡ್ ಕರ್ಫ್ಯೂ ಮತ್ತು ನಿಷೇಧಾಜ್ಞೆ ಸಮಯದಲ್ಲಿ ಮದ್ಯ ಮಾರಟಕ್ಕೆ ಅವಕಾಶ ನೀಡದಿರಲು ಅಬಕಾರಿ ಇಲಾಖೆ ನಿರ್ಧರಿಸಿದೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ಲಭ್ಯಯವಾಗಿದೆ.
ಕೋವಿಡ್ 19 ಮತ್ತು ಒಮಿಕ್ರಾನ್ ಸೋಂಕುಗಳ ಹೆಚ್ಚಳ ಹಿನ್ನಲೆಯಲ್ಲಿ ಸರ್ಕಾರ ರಾಜ್ಯದ್ಯಾಂತ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿ ಆದೇಶಿಸಿದೆ. ತುರ್ತು ಸೇವೆಗಳನ್ನ ಹೊರತುಪಡಿಸಿ ಇನ್ನೂಳಿದ ಎಲ್ಲಾ ಸೇವೆಗಳು ಬಂದ್ ಆಗಲಿವೆ.
ಮದ್ಯಪ್ರಿಯರು ಬಾರ್ ಓಪನ್ ಗಾಗಿ ಸೋಮವಾರದವರೆಗೂ ಕಾಯಬೇಕಾಗುತ್ತದೆ.
ಮೋದಿ ಭದ್ರತಾ ಲೋಪ – ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ
ಪ್ರಧಾನಿ ನರೇಂದ್ರ ಮೋದಿಯವರ ಭದ್ರತೆ ಮತ್ತು ಚಲನವಲನಕ್ಕೆ ಸಂಬಂಧಿಸಿದಂತೆ ಪಂಜಾಬ್ ಸರ್ಕಾರದ ಕಡೆಯಿಂದ “ಗಂಭೀರ ಮತ್ತು ಉದ್ದೇಶಪೂರ್ವಕ ಲೋಪ” ಜರುಗಿದೆ ಎಂದು ಆರೋಪಿಸಿ ಸುಪ್ರಿಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದ್ದು, ಮೊಕದ್ದಮೆಯನ್ನು (ಪಿಐಎಲ್) ಶುಕ್ರವಾರ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಪಂಜಾಂಬ್ ನಲ್ಲಿ ಹಲವು ಯೋಜನೆಗಳನ್ನ ಉದ್ಘಾಟಿಸಲು ತೆರಳುತ್ತಿದ್ದಾಗ, ಫ್ಲೈಓವರ್ ಮೇಲೆ ಪ್ರತಿಭಟನಾಕಾರರಿಂದಾಗಿ ರಸ್ತೆ ತಡೆಗೆ ಸಿಲುಕಿಕೊಂಡಿದ್ದರು. ಇದು ಪ್ರಧಾನಿ ಭದ್ರತೆ ಲೋಪದ ಕುರಿತಂತೆ ಪಂಜಾಬ್ ಸರ್ಕಾರದ ವಿರುದ್ದ ಸಾಕಷ್ಟು ಆಕ್ರೊಶ ವ್ಯಕ್ತವಾಗಿದೆ.
ವಿದ್ಯಾರ್ಥಿನಿಗೆ ಬಟ್ಟೆ ಬಿಚ್ಚಿಸಿ ರೂಮ್ ನಲ್ಲಿ ಲಾಕ್ ಮಾಡಿದ ಶಿಕ್ಷಕಿ
ಮಂಡ್ಯ : ಶಾಲೆಗೆ ಮೊಬೈಲ್ ತಂದ ಕಾರಣಕ್ಕೆ ಮುಖ್ಯ ಶಿಕ್ಷಕಿ ಸ್ನೇಹಲತಾ ಎಂಬಾಕೆ ವಿದ್ಯಾರ್ಥಿನಿಗೆ ಬಟ್ಟೆ ಬಿಚ್ಚಿಸಿ ಕೊಠಡಿಯಲ್ಲಿ ಕೂಡಿ ಹಾಕಿದ್ದ ಘಟನೆ ಮಂಡ್ಯದ ಗಣಂಗೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದಿದೆ.
ಪ್ರಸ್ತುತ ವಿದ್ಯಾರ್ಥಿನಿಯು 8ನೇ ತರಗತಿಯಲ್ಲಿ ಓದುತ್ತಿದ್ದು, ಘಟನೆಯು ಕಳೆದ ಒಂದು ವಾರದ ಹಿಂದೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮೊಬೈಲ್ ತಂದಿರೋದನ್ನ ಗಮನಿಸಿದ ಮುಖ್ಯ ಶಿಕ್ಷಕಿ ವಿದ್ಯಾರ್ಥಿನಿಯನ್ನ ಬೇರೆ ಕೊಠಡಿಗೆ ಕರೆದುಕೊಂಡು ಹೋಗಿ ಕಿರುಕುಳ ನೀಡಿದ್ದಾರೆ ಎಂದು ವಿದ್ಯಾರ್ಥಿನಿಯು ಮುಖ್ಯ ಶಿಕ್ಷಕಿ ವಿರುದ್ಧ ಆರೋಪ ಮಾಡಿದ್ದು , ಶಿಕ್ಷಕಿಯ ವಿರುದ್ದ ದೂರು ನೀಡಲು ಪೋಷಕರು ಮುಂದಾಗಿದ್ದಾರೆ.
ದೇಶದಲ್ಲಿ ಕೊರೊನಾ ಬ್ಲಾಸ್ಟ್..!
ನವದೆಹಲಿ : ದೇಶದಲ್ಲಿ ನಿನ್ನೆ 90 ,928 ಕೋವಿಡ್ ಕೇಸ್ ಗಳು ಪತ್ತೆಯಾಗಿದೆ. ಇದೇ ಅವಧಿಯಲ್ಲೇ 325 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.. ಈ ಮೂಲಕ ಈವರೆಗಿನ ಒಟ್ಟು ಸಾವಿನ ಒಟ್ಟು ಸಂಖ್ಯೆ 4,82,876ಕ್ಕೆ ತಲುಪಿದೆ. ಸದ್ಯ ದೇಶದಲ್ಲಿ 2,85,401 ಸಕ್ರಿಯ ಪ್ರಕರಣಗಳಿದ್ದು, ಈ ವರೆಗೆ 3,43,41,009 ಮಂದಿ ಗುಣಮುಖರಾಗಿದ್ದಾರೆ.ಮತ್ತೊಂದೆಡೆ ಕೋವಿಡ್ 3ನೇ ಅಲೆ ಆತಂಕದ ನಡುವೆ ದೇಶದಲ್ಲಿ ಒಮಿಕ್ರಾನ್ ಆತಂಕವೂ ಹೆಚ್ಚಾಗಿದ್ದು , ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 2630ಕ್ಕೆ ಏರಿಕೆಯಾಗಿದೆ.
ಚೀನಾದ ಡ್ರ್ಯಾಗನ್ ಹಣ್ಣಿನಲ್ಲಿ ಕರೋನಾ…!!!
ಚೀನಾ ದೇಶವು ವಿಯೆಟ್ನಾಂನಿಂದ ಆಮದು ಮಾಡಿಕೊಂಡ ಹಣ್ಣುಗಳಲ್ಲಿ ಕೊರೊನಾ ವೈಸ್ ಬಂಡುಬಂದಿದೆ.. ಈ ಹಿನ್ನಲೆ ಚೀನಾದ ಅಧಿಕಾರಿಗಳು ಸೂಪರ್ಮಾರ್ಕೆಟ್ಗಳನ್ನು ಬಂದ್ ಮಾಡಿಸಿದ್ದಾರೆ.
ಝೆಜಿಯಾಂಗ್ ಮತ್ತು ಜಿಯಾಂಗ್ಕ್ಸಿ ಪ್ರಾಂತ್ಯದ ಕನಿಷ್ಠ ಒಂಬತ್ತು ನಗರಗಳಲ್ಲಿ ವಿಯೆಟ್ನಾಂನಿಂದ ಆಮದು ಮಾಡಿಕೊಂಡ ಡ್ರ್ಯಾಗನ್ ಹಣ್ಣಿನಲ್ಲಿ ಕರೋನವೈರಸ್ ಮಾದರಿಗಳನ್ನು ಕಂಡುಬಂದಿದೆ ಎಂದು ಚೀನಾದ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಅಧಿಕಾರಿಗಳು ಆಮದು ಮಾಡಿಕೊಂಡ ಆಹಾರ ಉತ್ಪನ್ನಗಳ ತುರ್ತು ತಪಾಸಣೆಯನ್ನು ಪ್ರಾರಂಭಿಸಿದ್ದಾರೆ ಮತ್ತು ಹಣ್ಣು ಖರೀದಿದಾರರು ಸ್ವಲ್ಪ ದಿನಗಳ ಕಾಲ ಕೊಂಡುಕೊಳ್ಳದೆ ಇರುವಂತೆ ಆದೇಶಿಸಿದ್ದಾರೆ.
ತಮಿಳುನಾಡಿನ ವಿಧಾನಸಭೆಯಲ್ಲಿ ಅಪ್ಪುಗೆ ಗೌರವ ಸಮರ್ಪಣೆ
ತಮಿಳುನಾಡು ವಿಧಾನಸಭೆಯಲ್ಲಿ ಪುನೀತ್ ಸ್ಯಾಂಡಲ್ ವುಡ್ ನ ‘ಯುವರತ್ನ’ ರಾಜ್ ಕುಮಾರ್ ಅವರಿಗೆ ಗೌರವ ಸೂಚಿಸಲಾಗಿದೆ.. ಅಧಿವೇಶನ ಆರಂಭಕ್ಕೂ ಮುನ್ನ ಮೊದಲ ದಿನ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯ್ತು.. ಅಂತೆಯೇ ನಟ ಪುನೀತ್ ರಾಜ್ ಕುಮಾರ್ ಅವರಿಗೆ ವಿಧಾನಸಭೆಯಲ್ಲಿ ಗೌರವ ಸಲ್ಲಿಸಲಾಯಿತು.. ರಾಜ್ಯಪಾಲರ ಭಾಷಣಕ್ಕು ಮುನ್ನ ಅಪ್ಪು ಅವರಿಗೆ ತಮಿಳುನಾಡಿನ ವಿಧಾನಸಭಾ ಸದಸ್ಯರು ಸಾಮೂಹಿಕವಾಗಿ ಗೌರವ ಸಮರ್ಪಿಸಿದರು..
ಅಮೇಜಾನ್ ನಲ್ಲಿ ಬರ್ತಿದ್ದಾನೆ ‘ಪುಷ್ಪರಾಜ್’..!
ಪುಷ್ಪರಾಜ್ ಆಗಿ ಅಲ್ಲು ಡಿಫರೆಂಟ್ ಹಾಗೂ ಡಿ ಗ್ಲಾಮ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಪುಷ್ಪ ಸಿನಿಮಾ ಸೂಪರ್ ಹಿಟ್ ಆಗಿದೆ.. ಇನ್ನೂವರೆಗೂ ಸಕ್ಸಸ್ ಫುಲ್ ಪ್ರದರ್ಶನ ಕಾಣ್ತಿದೆ.,. ಈ ‘ಪುಷ್ಪರಾಜ್’ ಅಮೇಜಾನ್ ಪ್ರೈಮ್ ಗೆ ಎಂಟ್ರಿಕೊಡೋಕೆ ಸಜ್ಜಾಗಿದ್ದು , ಅಮೇಜಾನ್ ಅಧಿಕೃತವಾಗಿ ಈ ವಿಚಾರವನ್ನ ಬಹಿರಂಗಪಡಿಸಿದೆ..
ಜನವರಿ 7 ಬುಧವಾರ ಅಮೇಜಾನ್ ಪ್ರೈಮ್ ನಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ.. ತೆಲುಗು , ಕನ್ನಡ , ತಮಿಳು , ಮಲಯಾಳಂ , ಹಿಂದಿಯಲ್ಲಿ ರಿಲೀಸ್ ಆಗಿರುವ ಪ್ಯಾನ್ ಇಂಡಿಯಾ ಸಿನಿಮಾ ಒಟ್ಟಾರೆಯಾಗಿ ಬಾಕ್ಸ್ ಆಫೀಸ್ ನಲ್ಲಿ 306 ಕೋಟಿಗಿಂತಲೂ ಅಧಿಕ ಕಲೆಕ್ಷನ್ ಮಾಡಿದೆ..
ಐಸಿಸಿ ಮಹಿಳಾ ವಿಶ್ವಕಪ್ ನಿಂದ ಜೆಮಿಮಾ, ಶಿಖಾ ಔಟ್..!
ಮಾರ್ಚ್ನಲ್ಲಿ ನಡೆಯುವ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. 15 ಆಟಗಾರರ ಪಟ್ಟಿಯಲ್ಲಿ ಬ್ಯಾಟರ್ ಜೆಮಿಮಾ ರೋಡ್ರಿಗಸ್ ಮತ್ತು ಆಲ್ ರೌಂಡರ್ ಶಿಖಾ ಪಾಂಡೆ ಸ್ಥಾನ ಪಡೆಯದೇ ಇರುವುದು ಅಚ್ಚರಿ ಹುಟ್ಟಿಸಿದೆ. ಮಿಥಾಲಿ ರಾಜ್ ತಂಡವನ್ನು ಮುನ್ನಡೆಸಲಿದ್ದು, ಹರ್ಮನ್ ಪ್ರಿತ್ ಕೌರ್ ಉಪನಾಯಕಿಯಾಗಿದ್ದಾರೆ. ನ್ಯೂಜಿಲೆಂಡ್ನಲ್ಲಿ ನಡೆಯುವ ಈ ಟೂರ್ನಿಗೆ ಕರ್ನಾಟಕದ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.








