ADVERTISEMENT
Saturday, June 13, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಸೂಪರ್ ಫಾಸ್ಟ್ ನಲ್ಲಿ ದಿನದ ಪ್ರಮುಖ ಸುದ್ದಿಗಳು..!

Namratha Rao by Namratha Rao
January 6, 2022
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಸೂಪರ್ ಫಾಸ್ಟ್ ನಲ್ಲಿ ದಿನದ ಪ್ರಮುಖ ಸುದ್ದಿಗಳು..!

ಊರಿನತ್ತ ಗುಳೆ ಹೊರಟ ರಾಜಧಾನಿ ಜನ

Related posts

What are the special features of the Adidas Trionda ball for the 2026 FIFA World Cup?

2026ರ ಫಿಫಾ ವಿಶ್ವಕಪ್‍ನ ಅಡಿಡಾಸ್ ಟ್ರಿಯೋಂಡಾ ಚೆಂಡಿನ ವಿಶೇಷತೆಗಳೇನು..?

June 13, 2026
Do you know the exciting story of the World Cup football?

ವಿಶ್ವಕಪ್ ಫುಟ್ಬಾಲ್ ಚೆಂಡಿನ ರೋಚಕ ಕಥೆ ಏನು ಗೊತ್ತಾ ?

June 13, 2026

ಬೆಂಗಳೂರು: ಒಮಿಕ್ರಾನ್ ಹೆಚ್ಚಳ ,ಕೋವಿಡ್ ಮೂರನೇ ಅಲೆಯಿಂದ ಆತಂಕಗೊಂಡಿರುವ ಜನ ಬೆಂಗಳೂರಿನಿಂದ ಮರಳಿ ಊರುಗಳತ್ತ ಗುಳೆ ಹೊರಟಿದ್ದಾರೆ.. ಈಗಾಗಲೇ ರಾಜ್ಯ ಸರಕಾರ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದೆ, ಮುಂದೆ ಲಾಕ್ ಡೌನ್ ಮಾಡಿದರು ಮಾಡಬಹುದು. ಎರಡನೇ ಅಲೆಯಲ್ಲಿಯು ಕೂಡಾ ಸರಕಾರ ಇದೇ ರೀತಿ ಮಾಡಿತ್ತು, ಆಗ ಎಷ್ಟೊ ಜನರಿಗೆ  ತಿಂಗಳುಗಟ್ಟಲೆ ಊಟ, ಬಟ್ಟೆಗು ಸಮಸ್ಯೆ  ಉಂಟಾಗಿತ್ತು. ಮತ್ತೆ ಇದೇ ರೀತಿ ಆದರೆ ಜನರಿಗೆ ಬದುಕಲು ಅಸಾಧ್ಯ ಎಂದು ಜನರು ಊರಿನತ್ತ ಮುಖ ಮಾಡಿದ್ದಾರೆ.

‘ಬಿಜೆಪಿಗರೆಗೆ ರೂಲ್ಸ್ ಅನ್ವಯಿಸೋದಿಲ್ವಾ’..?

ಬೆಂಗಳೂರು : ಇಂದು ವಿಧಾನಸೌಧದ ಬ್ಯಾಕ್ವೆಂಟ್ ಹಾಲ್ ನಲ್ಲಿ ನಡೆದ ನೂತನ ಸದಸ್ಯರ ಪರಿಷತ್ ಪ್ರಮಾಣ ವಚನ ಸಮಾರಂಭದಲ್ಲಿ ಸಿಎಂ ಬೊಮ್ಮಾಯಿ ಭಾಗಿಯಾಗಿದ್ದರು. ಈ  ಸಮಾರಂಭದಲ್ಲಿ ಸಾಮಜಿಕ ಅಂತರವಿಲ್ಲ, ಯಾರು ಕೂಡ ಮಾಸ್ಕ್ ಧರಿಸಿಲ್ಲ, ಕೋವಿಡ್ ರೂಲ್ಸ್ ನ್ನು ಗಾಳಿಗೆ ತೂರಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ಗುಡುಗಿದರು.

ಅಲ್ಲದೇ ಜನರಿಗೆ ಒಂದು ರೂಲ್ಸ್, ರಾಜಕಾರಣಿಗಳಿಗೆ ಒಂದು ರೂಲ್ಸ್ ಇದೆಯಾ ಕರ್ನಾಟಕದಲ್ಲಿ. ರಾಜ್ಯದ ಬಡಪಾಯಿಗಳಿಗೆ ಮಾತ್ರ ಈ ರೂಲ್ಸ್ ಅನ್ವಯಿಸಯತ್ತಾ, ಬಿಜೆಪಿ ಸರ್ಕಾರದವರೆಗೆ ರೂಲ್ಸ್ ಅನ್ವಯವಾಗೋದಿಲ್ವಾ, ಸಿಎಂ ಬೊಮ್ಮಾಯಿ ಇದ್ದ ಕಾರ್ಯಕ್ರಮದಲ್ಲಿ ರೂಲ್ಸ್ ಫಾಲೋ ಮಾಡುತ್ತಿಲ್ಲ ಯಾಕೆ ಎಂದು ಡಿಕೆಶಿ ಪ್ರಶ್ನಿಸಿದರು.

ಮದ್ಯಪ್ರಿಯರಿಗೆ ಶಾಕ್ ..!

ಮದ್ಯಪ್ರಿಯರಿಗೆ ರಾಜ್ಯ ಸರ್ಕಾರ ಶಾಕಿಂಗ್ ನ್ಯೂಸ್ ಕೊಟ್ಟಿದೆ. ವೀಕೆಂಡ್ ಕರ್ಫ್ಯೂ  ಮತ್ತು ನಿಷೇಧಾಜ್ಞೆ ಸಮಯದಲ್ಲಿ ಮದ್ಯ ಮಾರಟಕ್ಕೆ ಅವಕಾಶ ನೀಡದಿರಲು ಅಬಕಾರಿ ಇಲಾಖೆ ನಿರ್ಧರಿಸಿದೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ಲಭ್ಯಯವಾಗಿದೆ.

ಕೋವಿಡ್ 19 ಮತ್ತು ಒಮಿಕ್ರಾನ್ ಸೋಂಕುಗಳ ಹೆಚ್ಚಳ ಹಿನ್ನಲೆಯಲ್ಲಿ ಸರ್ಕಾರ ರಾಜ್ಯದ್ಯಾಂತ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿ ಆದೇಶಿಸಿದೆ. ತುರ್ತು  ಸೇವೆಗಳನ್ನ ಹೊರತುಪಡಿಸಿ ಇನ್ನೂಳಿದ ಎಲ್ಲಾ ಸೇವೆಗಳು ಬಂದ್ ಆಗಲಿವೆ.

ಮದ್ಯಪ್ರಿಯರು ಬಾರ್ ಓಪನ್ ಗಾಗಿ ಸೋಮವಾರದವರೆಗೂ ಕಾಯಬೇಕಾಗುತ್ತದೆ.

ಮೋದಿ ಭದ್ರತಾ ಲೋಪ –  ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ

ಪ್ರಧಾನಿ ನರೇಂದ್ರ ಮೋದಿಯವರ ಭದ್ರತೆ ಮತ್ತು ಚಲನವಲನಕ್ಕೆ ಸಂಬಂಧಿಸಿದಂತೆ ಪಂಜಾಬ್ ಸರ್ಕಾರದ ಕಡೆಯಿಂದ “ಗಂಭೀರ ಮತ್ತು ಉದ್ದೇಶಪೂರ್ವಕ ಲೋಪ” ಜರುಗಿದೆ ಎಂದು ಆರೋಪಿಸಿ ಸುಪ್ರಿಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದ್ದು, ಮೊಕದ್ದಮೆಯನ್ನು (ಪಿಐಎಲ್) ಶುಕ್ರವಾರ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.

ಪ್ರಧಾನಿ ನರೇಂದ್ರ ಮೋದಿ ಪಂಜಾಂಬ್ ನಲ್ಲಿ ಹಲವು ಯೋಜನೆಗಳನ್ನ ಉದ್ಘಾಟಿಸಲು ತೆರಳುತ್ತಿದ್ದಾಗ, ಫ್ಲೈಓವರ್ ಮೇಲೆ ಪ್ರತಿಭಟನಾಕಾರರಿಂದಾಗಿ  ರಸ್ತೆ ತಡೆಗೆ ಸಿಲುಕಿಕೊಂಡಿದ್ದರು. ಇದು ಪ್ರಧಾನಿ ಭದ್ರತೆ ಲೋಪದ ಕುರಿತಂತೆ ಪಂಜಾಬ್ ಸರ್ಕಾರದ ವಿರುದ್ದ ಸಾಕಷ್ಟು ಆಕ್ರೊಶ ವ್ಯಕ್ತವಾಗಿದೆ.

ವಿದ್ಯಾರ್ಥಿನಿಗೆ ಬಟ್ಟೆ ಬಿಚ್ಚಿಸಿ ರೂಮ್ ನಲ್ಲಿ ಲಾಕ್ ಮಾಡಿದ ಶಿಕ್ಷಕಿ

ಮಂಡ್ಯ : ಶಾಲೆಗೆ ಮೊಬೈಲ್ ತಂದ ಕಾರಣಕ್ಕೆ ಮುಖ್ಯ ಶಿಕ್ಷಕಿ ಸ್ನೇಹಲತಾ ಎಂಬಾಕೆ ವಿದ್ಯಾರ್ಥಿನಿಗೆ ಬಟ್ಟೆ ಬಿಚ್ಚಿಸಿ ಕೊಠಡಿಯಲ್ಲಿ ಕೂಡಿ ಹಾಕಿದ್ದ ಘಟನೆ ಮಂಡ್ಯದ  ಗಣಂಗೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದಿದೆ.

ಪ್ರಸ್ತುತ ವಿದ್ಯಾರ್ಥಿನಿಯು 8ನೇ ತರಗತಿಯಲ್ಲಿ ಓದುತ್ತಿದ್ದು, ಘಟನೆಯು ಕಳೆದ ಒಂದು ವಾರದ ಹಿಂದೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮೊಬೈಲ್ ತಂದಿರೋದನ್ನ ಗಮನಿಸಿದ ಮುಖ್ಯ ಶಿಕ್ಷಕಿ ವಿದ್ಯಾರ್ಥಿನಿಯನ್ನ ಬೇರೆ ಕೊಠಡಿಗೆ ಕರೆದುಕೊಂಡು ಹೋಗಿ ಕಿರುಕುಳ ನೀಡಿದ್ದಾರೆ ಎಂದು ವಿದ್ಯಾರ್ಥಿನಿಯು ಮುಖ್ಯ ಶಿಕ್ಷಕಿ ವಿರುದ್ಧ ಆರೋಪ ಮಾಡಿದ್ದು , ಶಿಕ್ಷಕಿಯ ವಿರುದ್ದ ದೂರು ನೀಡಲು ಪೋಷಕರು ಮುಂದಾಗಿದ್ದಾರೆ.

ದೇಶದಲ್ಲಿ ಕೊರೊನಾ  ಬ್ಲಾಸ್ಟ್..!

ನವದೆಹಲಿ : ದೇಶದಲ್ಲಿ ನಿನ್ನೆ 90 ,928 ಕೋವಿಡ್ ಕೇಸ್ ಗಳು ಪತ್ತೆಯಾಗಿದೆ.  ಇದೇ ಅವಧಿಯಲ್ಲೇ 325 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.. ಈ ಮೂಲಕ ಈವರೆಗಿನ ಒಟ್ಟು ಸಾವಿನ ಒಟ್ಟು ಸಂಖ್ಯೆ 4,82,876ಕ್ಕೆ ತಲುಪಿದೆ. ಸದ್ಯ ದೇಶದಲ್ಲಿ 2,85,401 ಸಕ್ರಿಯ ಪ್ರಕರಣಗಳಿದ್ದು, ಈ ವರೆಗೆ 3,43,41,009 ಮಂದಿ ಗುಣಮುಖರಾಗಿದ್ದಾರೆ.ಮತ್ತೊಂದೆಡೆ ಕೋವಿಡ್ 3ನೇ ಅಲೆ ಆತಂಕದ ನಡುವೆ ದೇಶದಲ್ಲಿ ಒಮಿಕ್ರಾನ್‌ ಆತಂಕವೂ ಹೆಚ್ಚಾಗಿದ್ದು , ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 2630ಕ್ಕೆ ಏರಿಕೆಯಾಗಿದೆ.

ಚೀನಾದ ಡ್ರ್ಯಾಗನ್ ಹಣ್ಣಿನಲ್ಲಿ ಕರೋನಾ…!!!

ಚೀನಾ ದೇಶವು ವಿಯೆಟ್ನಾಂನಿಂದ ಆಮದು ಮಾಡಿಕೊಂಡ ಹಣ್ಣುಗಳಲ್ಲಿ ಕೊರೊನಾ ವೈಸ್ ಬಂಡುಬಂದಿದೆ..  ಈ ಹಿನ್ನಲೆ ಚೀನಾದ ಅಧಿಕಾರಿಗಳು  ಸೂಪರ್ಮಾರ್ಕೆಟ್ಗಳನ್ನು ಬಂದ್ ಮಾಡಿಸಿದ್ದಾರೆ.

ಝೆಜಿಯಾಂಗ್ ಮತ್ತು ಜಿಯಾಂಗ್ಕ್ಸಿ ಪ್ರಾಂತ್ಯದ  ಕನಿಷ್ಠ ಒಂಬತ್ತು ನಗರಗಳಲ್ಲಿ  ವಿಯೆಟ್ನಾಂನಿಂದ ಆಮದು ಮಾಡಿಕೊಂಡ ಡ್ರ್ಯಾಗನ್ ಹಣ್ಣಿನಲ್ಲಿ ಕರೋನವೈರಸ್ ಮಾದರಿಗಳನ್ನು ಕಂಡುಬಂದಿದೆ  ಎಂದು ಚೀನಾದ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಅಧಿಕಾರಿಗಳು ಆಮದು ಮಾಡಿಕೊಂಡ ಆಹಾರ ಉತ್ಪನ್ನಗಳ ತುರ್ತು ತಪಾಸಣೆಯನ್ನು ಪ್ರಾರಂಭಿಸಿದ್ದಾರೆ ಮತ್ತು ಹಣ್ಣು ಖರೀದಿದಾರರು ಸ್ವಲ್ಪ ದಿನಗಳ ಕಾಲ ಕೊಂಡುಕೊಳ್ಳದೆ ಇರುವಂತೆ  ಆದೇಶಿಸಿದ್ದಾರೆ.

ತಮಿಳುನಾಡಿನ ವಿಧಾನಸಭೆಯಲ್ಲಿ ಅಪ್ಪುಗೆ ಗೌರವ ಸಮರ್ಪಣೆ

ತಮಿಳುನಾಡು ವಿಧಾನಸಭೆಯಲ್ಲಿ ಪುನೀತ್ ಸ್ಯಾಂಡಲ್ ವುಡ್ ನ ‘ಯುವರತ್ನ’ ರಾಜ್ ಕುಮಾರ್ ಅವರಿಗೆ ಗೌರವ ಸೂಚಿಸಲಾಗಿದೆ.. ಅಧಿವೇಶನ ಆರಂಭಕ್ಕೂ ಮುನ್ನ ಮೊದಲ ದಿನ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯ್ತು.. ಅಂತೆಯೇ ನಟ ಪುನೀತ್ ರಾಜ್ ಕುಮಾರ್ ಅವರಿಗೆ ವಿಧಾನಸಭೆಯಲ್ಲಿ ಗೌರವ ಸಲ್ಲಿಸಲಾಯಿತು.. ರಾಜ್ಯಪಾಲರ ಭಾಷಣಕ್ಕು ಮುನ್ನ ಅಪ್ಪು ಅವರಿಗೆ  ತಮಿಳುನಾಡಿನ ವಿಧಾನಸಭಾ ಸದಸ್ಯರು ಸಾಮೂಹಿಕವಾಗಿ ಗೌರವ ಸಮರ್ಪಿಸಿದರು..

ಅಮೇಜಾನ್ ನಲ್ಲಿ ಬರ್ತಿದ್ದಾನೆ ‘ಪುಷ್ಪರಾಜ್’..!

ಪುಷ್ಪರಾಜ್ ಆಗಿ ಅಲ್ಲು ಡಿಫರೆಂಟ್ ಹಾಗೂ ಡಿ ಗ್ಲಾಮ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಪುಷ್ಪ ಸಿನಿಮಾ ಸೂಪರ್ ಹಿಟ್ ಆಗಿದೆ.. ಇನ್ನೂವರೆಗೂ ಸಕ್ಸಸ್ ಫುಲ್ ಪ್ರದರ್ಶನ ಕಾಣ್ತಿದೆ.,. ಈ ‘ಪುಷ್ಪರಾಜ್’ ಅಮೇಜಾನ್ ಪ್ರೈಮ್ ಗೆ ಎಂಟ್ರಿಕೊಡೋಕೆ ಸಜ್ಜಾಗಿದ್ದು , ಅಮೇಜಾನ್ ಅಧಿಕೃತವಾಗಿ ಈ ವಿಚಾರವನ್ನ ಬಹಿರಂಗಪಡಿಸಿದೆ..

ಜನವರಿ 7 ಬುಧವಾರ ಅಮೇಜಾನ್ ಪ್ರೈಮ್ ನಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ.. ತೆಲುಗು , ಕನ್ನಡ , ತಮಿಳು , ಮಲಯಾಳಂ , ಹಿಂದಿಯಲ್ಲಿ ರಿಲೀಸ್ ಆಗಿರುವ ಪ್ಯಾನ್ ಇಂಡಿಯಾ ಸಿನಿಮಾ ಒಟ್ಟಾರೆಯಾಗಿ ಬಾಕ್ಸ್ ಆಫೀಸ್ ನಲ್ಲಿ 306 ಕೋಟಿಗಿಂತಲೂ ಅಧಿಕ ಕಲೆಕ್ಷನ್ ಮಾಡಿದೆ..

ಐಸಿಸಿ ಮಹಿಳಾ ವಿಶ್ವಕಪ್ ನಿಂದ ಜೆಮಿಮಾ, ಶಿಖಾ ಔಟ್..!

ಮಾರ್ಚ್ನಲ್ಲಿ ನಡೆಯುವ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. 15 ಆಟಗಾರರ ಪಟ್ಟಿಯಲ್ಲಿ ಬ್ಯಾಟರ್ ಜೆಮಿಮಾ ರೋಡ್ರಿಗಸ್ ಮತ್ತು ಆಲ್ ರೌಂಡರ್ ಶಿಖಾ ಪಾಂಡೆ ಸ್ಥಾನ ಪಡೆಯದೇ ಇರುವುದು ಅಚ್ಚರಿ ಹುಟ್ಟಿಸಿದೆ.  ಮಿಥಾಲಿ ರಾಜ್ ತಂಡವನ್ನು ಮುನ್ನಡೆಸಲಿದ್ದು, ಹರ್ಮನ್ ಪ್ರಿತ್ ಕೌರ್ ಉಪನಾಯಕಿಯಾಗಿದ್ದಾರೆ. ನ್ಯೂಜಿಲೆಂಡ್ನಲ್ಲಿ ನಡೆಯುವ ಈ ಟೂರ್ನಿಗೆ ಕರ್ನಾಟಕದ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

 

 

Tags: #saakshatvCinemaCrimeinterenationalkannada newspoliticsSportstop news
ShareTweetSendShare
Join us on:

Related Posts

What are the special features of the Adidas Trionda ball for the 2026 FIFA World Cup?

2026ರ ಫಿಫಾ ವಿಶ್ವಕಪ್‍ನ ಅಡಿಡಾಸ್ ಟ್ರಿಯೋಂಡಾ ಚೆಂಡಿನ ವಿಶೇಷತೆಗಳೇನು..?

by admin
June 13, 2026
0

  2026ರ ಫಿಫಾ ವಿಶ್ವಕಪ್‍ನ ಅಡಿಡಾಸ್ ಟ್ರಿಯೋಂಡಾ ಚೆಂಡಿನ ವಿಶೇಷತೆಗಳೇನು..? ಫಿಫಾ ವಿಶ್ವಕಪ್.. ಇದು ಪ್ರತಿ ನಾಲ್ಕು ವರ್ಷಗಳಿಗೆ ಒಮ್ಮೆ ನಡೆಯುವ ಕಾಲ್ಚೆಂಡಿನ ಮಹಾಕುಂಭಮೇಳ. ವಿಶ್ವ ಕ್ರೀಡಾಲೋಕದಲ್ಲಿ...

Do you know the exciting story of the World Cup football?

ವಿಶ್ವಕಪ್ ಫುಟ್ಬಾಲ್ ಚೆಂಡಿನ ರೋಚಕ ಕಥೆ ಏನು ಗೊತ್ತಾ ?

by admin
June 13, 2026
0

ವಿಶ್ವಕಪ್ ಫುಟ್‍ಬಾಲ್. ಆಟಗಾರನ ದೈಹಿಕ ಮತ್ತು ಮಾನಸಿಕ ಸಾಮಥ್ರ್ಯವನ್ನು ಅಳೆದು ತೂಗುವಂತಹ ಆಟ. ಕಾಲ್ಚೆಂಡಿನ ಕರಾಮತ್ತಿನ ಈ ಆಟದಲ್ಲಿ ಫುಟ್‍ಬಾಲ್ (ಚೆಂಡು) ಕೂಡ ಅμÉ್ಟೀ ಮಹತ್ವವನ್ನು ಪಡೆದುಕೊಂಡಿದೆ....

ಇಬ್ಬರು ಲೇಡಿ ಸಿಂಗಂಗಳಿಗೆ ಸುಪ್ರೀಂ ಕೋರ್ಟ್ ಶಾಕ್: ಕೆರಿಯರ್ ಹಾಳು ಮಾಡಿಕೊಳ್ಳಬೇಡಿ ಎಂದು ಖಡಕ್ ವಾರ್ನಿಂಗ್!

ಇಬ್ಬರು ಲೇಡಿ ಸಿಂಗಂಗಳಿಗೆ ಸುಪ್ರೀಂ ಕೋರ್ಟ್ ಶಾಕ್: ಕೆರಿಯರ್ ಹಾಳು ಮಾಡಿಕೊಳ್ಳಬೇಡಿ ಎಂದು ಖಡಕ್ ವಾರ್ನಿಂಗ್!

by Shwetha
June 13, 2026
0

ರಾಜ್ಯದ ಇಬ್ಬರು ಪ್ರಭಾವಿ ಮಹಿಳಾ ಅಧಿಕಾರಿಗಳಾದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ ರೂಪಾ ನಡುವಿನ ದೀರ್ಘಕಾಲದ ವಾಗ್ವಾದಕ್ಕೆ ಈಗ ಸುಪ್ರೀಂ ಕೋರ್ಟ್‌ನಿಂದ...

NEET ಮರುಪರೀಕ್ಷೆಗೆ ಮಹತ್ವದ ನಿರ್ಧಾರ; ವಿದ್ಯಾರ್ಥಿಗಳಿಗೆ ಹೆಚ್ಚುವರಿ 15 ನಿಮಿಷ

NEET ಮರುಪರೀಕ್ಷೆಗೆ ಮಹತ್ವದ ನಿರ್ಧಾರ; ವಿದ್ಯಾರ್ಥಿಗಳಿಗೆ ಹೆಚ್ಚುವರಿ 15 ನಿಮಿಷ

by Shwetha
June 13, 2026
0

ನೀಟ್ (NEET) ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಪರೀಕ್ಷಾ ವೇಳಾಪಟ್ಟಿ ಹಾಗೂ ಅವಧಿಗೆ ಸಂಬಂಧಿಸಿದಂತೆ...

ನಾವೇ ಅಸಲಿ TMC; ಸ್ಪೀಕರ್ ಭೇಟಿಗೆ ರೆಬೆಲ್ ಸಂಸದರ ನಿರ್ಧಾರ

ನಾವೇ ಅಸಲಿ TMC; ಸ್ಪೀಕರ್ ಭೇಟಿಗೆ ರೆಬೆಲ್ ಸಂಸದರ ನಿರ್ಧಾರ

by Shwetha
June 13, 2026
0

ತೃಣಮೂಲ ಕಾಂಗ್ರೆಸ್‌ ಪಕ್ಷದ ಬಂಡಾಯ ಸಂಸದರು ತಮ್ಮ ಬಣಕ್ಕೆ ಸಂಸತ್ತಿನಲ್ಲಿ ಅಧಿಕೃತ ಮಾನ್ಯತೆ ಪಡೆಯುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಈ ಕುರಿತು ಬಂಡಾಯ ಸಂಸದ ಜಗದೀಶ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram