ಹಿಜಬ್ VS ಕೇಸರಿ ಸಂಘರ್ಷ
ರಾಜ್ಯದಲ್ಲಿ ಹಿಜಬ್ – ಕೇಸರಿ ಸಂಘರ್ಷ ತಾರಕಕ್ಕೇರಿದೆ.. ಪ್ರಕರಣ ಹೈಕೋರ್ಟ್ ಅಂಗಳ ತಲುಪಿದ್ದು ಈ ಸಂಪಬಂಧಿತ ವಿಚಾರಣೆಯನ್ನ ನಾಳೆಗೆ ಮುಂದೂಡಲಾಗಿದೆ…
ಹಿಜಬ್ – ಕೇಸರಿ ಸಂಘರ್ಷ ತಾರಕಕ್ಕೇರಿದೆ.. ಬಾಗಲಕೋಟೆ , ರಾಯಚೂರು , ಶಿವಮೊಗ್ಗ , ಕುಂದಾಪುರ , ಮಂಡ್ಯ ಸೇರಿದಂತೆ ಹಲವೆಡೆ ಹಿಜಬ್ – ಕೇಸರಿ ಸಂಘರ್ಷ ಬುಗಿಲೆದ್ದಿದ್ದು , ಕೆಲವೆಡೆ ಕಲ್ಲು ತೂರಾಟ , ;ಪೊಲೀಸರಿಂದ ಲಾಠಿ ಪ್ರಹಾರವು ಆಗಿರುವುದು ಕಂಡು ಬಂದಿದೆ..
ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ತೀವ್ರ ಸ್ವರೂಪ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ನಾಳೆಯಿಂದ ಮೂರು ದಿನ ರಾಜ್ಯದ ಎಲ್ಲಾ ಶಾಲಾ -ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮುನ್ನೆಚ್ಚರಿಕಾ ಕ್ರಮವಾಗಿ ಮೂರು ದಿನ ರಜೆ ಘೋಷಣೆಮಾಡಲಾಗಿದೆ.
ರಾಜ್ಯದಲ್ಲಿ 6,151 ಕೇಸ್ ಗಳು ಪತ್ತೆ…
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗಿದ್ದು, ಸೋಮವಾರ 6,151 ಹೊಸ ಪ್ರಕರಣಗಳು ದೃಢಪಟ್ಟಿದೆ. 24 ಗಂಟೆಯಲ್ಲಿ 49 ಜನರು ಸಾವನ್ನಪ್ಪಿದ್ದು, ಇದೇ ಅವಧಿಯಲ್ಲಿ 16,802 ಜನರ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ 87,080 ಸಕ್ರಿಯ ಪ್ರಕರಣಗಳಿವೆ..
ದೇಶದಲ್ಲಿ 67,597 ಕೇಸ್ ಗಳು
ನವದೆಹಲಿ : ದೇಶದಲ್ಲಿ ಕೊರೊನಾ ಅಲೆ ಇಳಿಮುಖವಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 67,597 ಹೊಸ ಪ್ರಕರಣಗಳು ಪತ್ತೆಯಾಗಿವೆ. ಸಕ್ರಿಯ ಪ್ರಕರಣಗಳು 9,94,891 ಇದ್ದು, ಕಳೆದ 24 ಗಂಟೆಯಲ್ಲಿ 1,80,456 ಲಕ್ಷ ಜನರು ಚೇತರಿಸಿಕೊಂಡಿದ್ದಾರೆ. ಕಳೆದ 24 ಗಂಟೆಯಲ್ಲಿ 1,188 ಜನರು ಸಾವನ್ನಪ್ಪಿದ್ದಾರೆ.
ಅಹಮದಾಬಾದ್ ಸರಣಿ ಸ್ಫೋಟ – 49 ಜನರಿಗೆ ಶಿಕ್ಷೆ
2008ರಲ್ಲಿ ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 77 ಆರೋಪಿಗಳ ಪೈಕಿ 10 ಮಂದಿಯನ್ನು ಗುಜರಾತ್ ನ್ಯಾಯಾಲಯ ಖುಲಾಸೆಗೊಳಿಸಿದೆ. ಡಿಸೆಂಬರ್ 2009 ರಿಂದ ಶುರುವಾದ ವಿಚಾರಣೆಯ ತೀರ್ಪು 14 ವರ್ಷಗಳ ಬಳಿಕ ಹೊರಬಂದಿದೆ. 1,100 ಸಾಕ್ಷಿಗಳನ್ನ ವಿಚಾರಿಸಿದ ನಂತರ ಒಟ್ಟು 49 ಆರೋಪಿಗಳಿಗೆ ಶಿಕ್ಷೆಯಾಗಿದೆ.
ಮೋದಿ ಹೊಗಳಿದ್ದು ಟಾಲಿವುಡ್ , RGV ಎಳೆತಂದಿದ್ದು ಸ್ಯಾಂಡಲ್ ವುಡ್
ಮೋದಿ ತೆಲುಗು ಚಿತ್ರರಂಗವನ್ನ ಹೊಗಳಿದ್ದಕ್ಕೆ ರಾಮ್ ಗೋಪಾಲ್ ವರ್ಮಾ ವ್ಯತಿರಿಕ್ತವಾಗಿ ಟೀಕೆ ಮಾಡಿದ್ದಾರೆ. “ ಪ್ರಧಾನಿ ಮೋದಿ ಟಾಲಿವುಡ್ ಹೊಗಳಿದ್ದಕ್ಕೆ ಸಂತಸ ಪಡುವ ಅಗತ್ಯವಿಲ್ಲ. ಟಾಲಿವುಡ್, ಶಾಂಪೇನ್ ಜೊತೆ ಬ್ರೇಕ್ ಡ್ಯಾನ್ಸ್ ಮಾಡುವ ಅಗತ್ಯವಿಲ್ಲ. ಮೋದಿ ಕೇವಲ ಬಾಹುಬಲಿ ಮತ್ತು ಪುಷ್ಪ ಚಿತ್ರವನ್ನ ಮಾತ್ರ ಹೊಗಳಿದ್ದಾರೆ. ನಾವು ಪ್ರತಿ ವರ್ಷ ಮಾಡುವ 150 ಚಿತ್ರಗಳನ್ನಲ್ಲ. ರಾಜಮೌಳಿ ಮತ್ತು ಅಲ್ಲು ಅರ್ಜುನ್ ಕನ್ನಡಿಗರಾಗಿದ್ದರೆ ಮೋದಿ ಸ್ಯಾಂಡಲ್ವುಡ್ ನ ಹೊಗಳುತ್ತಿದ್ದರು ಎಂದಿದ್ದಾರೆ.
ಮಹಾಭಾರತದ ಭೀಮ ಪಾತ್ರಧಾರಿ ನಿಧನ
ಬಿ ಆರ್ ಚೋಪ್ರಾ ನಿರ್ಮಾಣದ ಮಹಾಭಾರತ ಧಾರವಾಹಿಯಲ್ಲಿ ಭೀಮನ ಪಾತ್ರವನ್ನ ನಿರ್ವಹಿಸಿದ್ದ ಪ್ರವೀಣ್ ಕುಮಾರ್ ಸೋಬ್ತೀ ಅವರು 74 ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಮಾಧ್ಯಮಗಳ ವರದಿಯ ಪ್ರಕಾರ ಬೆನ್ನೂ ಮೂಳೆ ಸಮಸ್ಯೆ ಯಿಂದ ಬಳಲುತ್ತಿದ್ದರು . ಆದರೆ ಸಾವಿಗೆ ಪ್ರಮುಖ ಕಾರಣ ತಿಳಿದು ಬಂದಿಲ್ಲ.
12 ಕೋಟಿಗೆ ಬೇಡಿಕೆ ಇಟ್ಟ ಬೋಯಪಾಟಿ…
ಎನರ್ಜಿಟಿಕ್ ಸ್ಟಾರ್ ರಾಮ್ ಪೋತಿನೇನಿ ಜೊತೆ ಸಿನಿಮಾ ಮಾಡಲು ಬೋಯಪಾಟಿ ಶ್ರೀನು ರೆಡಿಯಾಗಿದ್ದಾರೆ. ಇಲ್ಲಿ ಟ್ವಿಸ್ಟ್ ಏನೆಂದರೆ ಹೀರೋ ರಾಮ್ ಗಿಂತ ನಿರ್ದೇಶಕ ಬೋಯಪಾಟಿ ಶ್ರೀನು ಹೆಚ್ಚು ಹಣಕ್ಕೆ ಬೇಡಿಕೆ ಇಟ್ಟಿದ್ದಾರಂತೆ. ರಾಮ್ 9 ಕೋಟಿ ರೂಪಾಯಿ ಕೇಳಿದ್ರೆ ಅಖಂಡ ನಿರ್ದೇಶಕ ಬೋಯಪಾಟಿ 12 ಕೋಟಿಗೆ ಬೇಡಿಕೆ ಇಟ್ಟಿದ್ದಾರೆ.
ಇಂದು ಪೈರೇಟ್ಸ್ – ಮುಂಬಾ ನಡುವೆ ಫೈಟ್…!!
ಪ್ರೊ ಕಬಡ್ಡಿ 2022 ರ 103 ನೇ ಪಂದ್ಯವು ಇಂದು ನಡೆಯಲಿದೆ. ಪಾಟ್ನಾ ಪೈರೇಟ್ಸ್ ಮತ್ತು ಯು ಮುಂಬಾ ನಡುವೆ ನಡೆಯಲಿದೆ… ಈ ಹಿಂದೆ ತಮಿಳ್ ತಲೈವಾಸ್ ವಿರುದ್ಧ ಎರಡು ಅಂಕಗಳ ಗೆಲುವಿನ ಅಂತರದ ಗೆಲುವು ಸಾಧಿಸಿದ ನಂತರ ಯು ಮುಂಬಾ ಪಟ್ನಾ ಪೈರೇಟ್ಸ್ ಜೊತೆಗೆ ಆಡುತ್ತಿದೆ… ಯೂ ಮುಂಬಾ ಆಡಿರುವ 16 ಪಂದ್ಯಗಳಲ್ಲಿ 6 ಗೆದ್ದು , 5 ರಲ್ಲಿ ಸೋತು , 5 ಮ್ಯಾಚ್ ಗಳನ್ನ ಡ್ರಾ ಮಾಡಿಕೊಂಡು ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.. ಪಟ್ನಾ ಪೈರೇಟ್ಸ್ ಆಡಿರುವ 16 ಪಂದ್ಯಗಳಲ್ಲಿ 11 ರಲ್ಲಿ ಗೆದ್ದು , 4 ರಲ್ಲಿ ಸೋತು , 1 ರಲ್ಲಿ ಟೈ ಮಾಡಿಕೊಂಡಿದೆ…