ಪ್ರಮುಖ ಹೈ ಫೈ ರಾಜಕೀಯ ಸುದ್ದಿಗಳು : ಇತ್ತೀಚೆಗಿನ ಅಪ್ ಡೇಟ್ಸ್..!
ಯಾರು ರಾಜಾಹುಲಿ ಆಗ್ತಾರೋ.. ಯಾರು ಇಲಿ ಆಗುತ್ತಾರೋ : ಯತ್ನಾಳ್ ವಾರ್ನಿಂಗ್
ತುಮಕೂರು : ಪಂಚಮಸಾಲಿ ಮೀಸಲಾತಿ ಹೋರಾಟವನ್ನ ವಿಫಲಗೊಳಿಸುವ ಪ್ರಯತ್ನ ನಡೆದಿದೆ. ವೀರಶೈವ ಲಿಂಗಾಯತ ಸಮುದಾಯವನ್ನು ಹೈಜಾಕ್ ಮಾಡಿ..ಪಂಚಮಸಾಲಿ ಸಮುದಾಯದ ವಿರುದ್ದ ಎತ್ತಿಕಟ್ಟುವ ಪ್ರಯತ್ನ ನಡೆಯುತ್ತಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯದ ಸಮಾವೇಶದ ಸ್ಥಳ, ದಿನಾಂಕ ನಿಗದಿಯಾಗಿದೆ. ರಾಜ್ಯದ ಮೂಲೆ ಮೂಲೆಯಿಂದ ಲಕ್ಷಾಂತರ ಜನರು ಸಮಾವೇಶಕ್ಕೆ ಸೇರಲಿದ್ದಾರೆ. ಈ ಹೋರಾಟವನ್ನು ವಿಫಲಗೊಳಿಸುವ ಪ್ರಯತ್ನ ನಡೆದಿದೆ. ವೀರಶೈವ ಲಿಂಗಾಯತ ಸಮುದಾಯವನ್ನು ಹೈಜಾಕ್ ಮಾಡಿ.. ಪಂಚಮಸಾಲಿ ಸಮುದಾಯದ ವಿರುದ್ದ ಎತ್ತಿಕಟ್ಟುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಅವಕಾಶ ನೀಡಲ್ಲ. ಹೀಗಾಗಿ ನಮಗೆ ಎಲ್ಲಾ ಶ್ರೀಗಳು ಬೆಂಬಲ ನೀಡಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಕಿಡಿಕಾರಿದ ಅವರು, ಕೇವಲ ಮಗನ ಭವಿಷ್ಯಕ್ಕಾಗಿ, ರಾಜಕೀಯಕ್ಕಾಗಿ ಇದನ್ನು ಬಳಸಿಕೊಳ್ಳಲಾಗುತ್ತದೆ. ಕೇಂದ್ರದಲ್ಲಿ ಲಿಂಗಾಯತ ಸಮುದಾಯ ನಮ್ಮ ಜೊತೆಗಿದೆ ಎಂದು ಬಿಂಬಿಸಿಕೊಳ್ಳಲಾಗಿದೆ. ಬಹಳ ಕುತಂತ್ರ ನಡೆದಿದೆ. ಯಾವ ಬೆದರಿಕೆಗೂ ಅಂಜುವುದಿಲ್ಲ. ನೋಟೀಸ್ ಕೊಟ್ಟಿದ್ದಾರೆ ಎನ್ನಲಾಗಿದೆ. ಭಯಹುಟ್ಟಿಸುವ ಪ್ರಯತ್ನ ನಡೆದಿದೆ. ಈವರೆಗೂ ಯಾವುದೇ ನೋಟಿಸ್ ಬಂದಿಲ್ಲ. ವಿಜಯೇಂದ್ರಗೆ ಹೇಗೆ ಗೊತ್ತಾಯ್ತು ನನಗೆ ನೋಟಿಸ್ ಬಂದಿದೆ ಅಂತಾ..? ಎಂದು ಪ್ರಶ್ನಿಸಿದರು.
ಶ್ರೀ ಕಟೀಲು ದುರ್ಗಾಪರಮೇಶ್ವರೀ ಕ್ಷೇತ್ರ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ವಿಜಯಾನಂದ ಕಾಶಪ್ಪನವರ್ ವಿರುದ್ಧ ಸಿಎಂ ಪುತ್ರ ಏಕವಚನ ಪ್ರಯೋಗ
ಮೈಸೂರು : ಕಾಶಪ್ಪನವರ್ ಅಂದ್ರೆ ಯಾರು..? ಮಾಜಿ ಶಾಸಕನಾ ಅಥವಾ ಬಾರಲ್ಲಿ ಕುಳಿತು ಗಲಾಟೆ ಮಾಡಿಕೊಂಡನಲ್ಲ ಅವನಾ..? ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ವಿರುದ್ಧ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಪುತ್ರ ವಿಜಯೇಂದ್ರ 300 ಕ್ಕೂ ಹೆಚ್ಚು ಪೂಜ್ಯರನ್ನು ಸೇರಿಸಿ ನಮ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ಸ್ವಾಮೀಜಿಗಳ ಮೂಲಕ ಪಂಚಮಸಾಲಿಗೆ ಮೀಸಲಾತಿ ಕೊಡಬಾರದೆಂದು ಒತ್ತಡ ಹೇರುವ ಕೆಲಸ ನಡೆಯುತ್ತಿದೆ ಎಂಬ ಕಾಶಪ್ಪನವರ್ ಆರೋಪಕ್ಕೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ಕಾಶಪ್ಪನವರ್ ಅಂದ್ರೆ ಯಾರು.. ಮಾಜಿ ಶಾಸಕನಾ ಅಥವಾ ಬಾರಲ್ಲಿ ಕುಳಿತು ಗಲಾಟೆ ಮಾಡಿಕೊಂಡನಲ್ಲ ಅವನಾ ಎಂದು ಕುಟುಕಿದರು.
ಟೀಕೆ ಮಾಡುವವರಿಗೆ ಬಜೆಟ್ ನಲ್ಲಿ ಉತ್ತರ : ಬಿ.ಎಸ್.ಯಡಿಯೂರಪ್ಪ
ಮೈಸೂರು : ಟೀಕೆ ಮಾಡುವವರಿಗೆ ಬಜೆಟ್ ಉತ್ತರ ಆಗಲಿದೆ. ರಾಜ್ಯದಲ್ಲಿ ಯಾವುದೇ ಕೆಲಸಗಳು ನಿಂತಿಲ್ಲ. ವಿರೋಧ ಪಕ್ಷಗಳ ಟೀಕೆಗೆ ಉತ್ತರ ಕೊಡಲ್ಲ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಶನಿವಾರ ಸಿಎಂ ಬಿಎಸ್ ಯಡಿಯೂರಪ್ಪ ಮೈಸೂರಿಗೆ ಭೇಟಿ ನೀಡಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಬಜೆಟ್ ಸಿದ್ಧತಾ ಸಭೆಗಳು ನಡೆಯುತ್ತಿವೆ.
ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಸಭೆ ನಡೆಸಲಾಗಿದೆ.ಎರಡು ದಿನ ನಾನು ಊರಲ್ಲಿ ಇರಲ್ಲ. ಇನ್ನು ಎರಡು ದಿನಗಳಲ್ಲಿ ಪೂರ್ವಭಾವಿ ಸಭೆಗಳು ಮುಕ್ತಾಯ ಆಗಲಿವೆ.
ಹಣಕಾಸಿನ ಸ್ಥಿತಿ ನಡುವೆ ಮಂತ್ರಿ ಹಾಗೂ ಅಧಿಕಾರಿಗಳ ಜತೆ ಚರ್ಚಿಸಿ ಬಜೆಟ್ ಮಂಡಿಸುವೆ. ಬಜೆಟ್ ನಲ್ಲಿ ಮೈಸೂರು ಏರ್‌ಪೋರ್ಟ್ ಅಗಲೀಕರಣಕ್ಕೆ ಆದ್ಯತೆ ನೀಡುವ ಉದ್ದೇಶವಿದೆ. ಟೀಕೆ ಮಾಡುವವರಿಗೆ ಬಜೆಟ್ ಉತ್ತರ ಆಗಲಿದೆ.
ರಾಜ್ಯದಲ್ಲಿ ಯಾವುದೇ ಕೆಲಸಗಳು ನಿಂತಿಲ್ಲ. ವಿರೋಧ ಪಕ್ಷಗಳ ಟೀಕೆಗೆ ಉತ್ತರ ಕೊಡಲ್ಲ ಎಂದು ಹೇಳಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








