ಪ್ರಮುಖ ಹೈ ಫೈ ರಾಜಕೀಯ ಸುದ್ದಿಗಳು : ಇತ್ತೀಚೆಗಿನ ಅಪ್ ಡೇಟ್ಸ್..!
ಸಿದ್ದರಾಮಯ್ಯ ಅಹಿಂದ ಹೋರಾಟ ಮಾಡಿದ್ರೆ ನಾನು ಹೋಗ್ತೀನಿ : ರಮೇಶ್ ಜಾರಕಿಹೊಳಿ
ಬೆಳಗಾವಿ : ಮಾಜಿ ಸಿಎಂ ಸಿದ್ದರಾಮಯ್ಯ 2023ರ ಚುನಾವಣೆಯನ್ನು ಟಾರ್ಗೆಟ್ ಮಾಡಿಕೊಂಡು ಹಿಂದ ಹೋರಾಟ ರೂಪಿಸಲಿದ್ದಾರೆ ಅನ್ನೋ ಸುದ್ದಿ ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ಬಗ್ಗೆ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿ, ಸಿದ್ದರಾಮಯ್ಯ ಪಕ್ಷಾತೀತವಾಗಿ ಅಹಿಂದ ಹೋರಾಟ ಮಾಡಿದ್ರೆ ನಾವು ಹೋಗುತ್ತೇವೆ ಅಂತ ಹೇಳಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಹಿಂದ ಹೋರಾಟ ಮಾಡುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಸಿದ್ದರಾಮಯ್ಯ ಪಕ್ಷಾತೀತವಾಗಿ ಅಹಿಂದ ಹೋರಾಟ ಮಾಡಿದ್ರೆ ನಾವು ಹೋಗುತ್ತೇವೆ. ಅವರು ನಡೆಸುತ್ತಿರುವುದು ಕಾಂಗ್ರೆಸ್ಅಹಿಂದವೋ ಅಥವಾ ಆಲ್ ಪಾರ್ಟಿ ಅಹಿಂದವೋ ಅಂತ ಕೇಳಿ. ನಂತರ ಉತ್ತರಿಸುವೆ ಎಂದರು.
`ಯತ್ನಾಳ್ ಗೆ ಬಂದಿರೋದು ನೋಟಿಸ್ ಅಲ್ಲ, ಲವ್ ಲೆಟರ್’
ಬೆಳಗಾವಿ : ಪಕ್ಷದಿಂದ ಬಸನಗೌಡ ಪಾಟೀಲ್ ಯತ್ನಾಳ್ ಗೆ ಬಂದಿರೋದು ನೋಟಿಸ್ ಅಲ್ಲ, ಲವ್ ಲೆಟರ್. ಅದು ಬೇಡ ಅಂದ್ರೂ ಬರುತ್ತಿರುತ್ತದೆ, ಯತ್ನಾಳ್ ಯಾವುದೇ ಪಕ್ಷ ವಿರೋಧಿ ಕೆಲಸ ಮಾಡುತ್ತಿಲ್ಲ ಎಂದು ಯತ್ನಾಳ್ ರನ್ನ ಸಚಿವ ಉಮೇಶ್ ಕತ್ತಿ ಹಾಗೂ ರಮೇಶ್ ಜಾರಕಿಹೊಳಿ ಸಮರ್ಥಿಸಿಕೊಂಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾನತಾಡುತ್ತಾ, ಯತ್ನಾಳ್ ಅವರಿಗೆ ಶೋಕಾಸ್ ನೋಟಿಸ್ ಬಂದಿರುವ ಬಗ್ಗೆ ಪ್ರತಿಕ್ರಿಯಿಸಿ, ಯತ್ನಾಳ್ ಪಕ್ಷ ವಿರೋಧಿ ಚಟುವಟಿಕೆ ಮಾಡ್ತಿಲ್ಲ. ಅವರು ನನ್ನ ಸ್ನೇಹಿತರು, ನಾನು ತಿಳಿಸಿ ಹೇಳುತ್ತೇವೆ. ಸಮಾಜದ ಬಗ್ಗೆ ಮಾತನಾಡೋದು ತಪ್ಪಲ್ಲ, ಇತಿಮಿತಿಯಲ್ಲಿ ಮಾತನಾಡಿ ಅಂತ ಅವರಿಗೆ ಮನವಿ ಮಾಡ್ತೀವಿ. ಯತ್ನಾಳ್ ಒಳ್ಳೆಯ ಮಿತ್ರ, ಅವರಿಗೆ ಮುಂದೆ ಒಳ್ಳೆಯ ಭವಿಷ್ಯ ಇದೆ. ಸಮಾಜಕ್ಕಾಗಿ ಹೋರಾಟ ಮಾಡಲಿ ತಪ್ಪೇನು ಎಂದು ರಮೇಶ್ ಜಾರಕಿಹೊಳಿ ಸಮರ್ಥಿಸಿಕೊಂಡರು.
ನಾನು ಅಪ್ಪಟ ಕಾಂಗ್ರೆಸ್ಸಿಗ, ಪಕ್ಷ ಕಟ್ಟುವ ಅವಶ್ಯಕತೆ ಇಲ್ಲ : ಸಿದ್ದರಾಮಯ್ಯ
ಮಂಡ್ಯ : ಸಿದ್ದರಾಮಯ್ಯನವರು ಸ್ವತಂತ್ರ ಪಕ್ಷ ಕಟ್ಟಿ, ತಾವೂ ಸೇರಿದಂತೆ 5 ಸ್ಥಾನಗಳನ್ನು ಗೆದ್ದು ತೋರಿಸಿಲಿ ಎಂಬ ಹೆಚ್ ಡಿ ಕುಮಾರಸ್ವಾಮಿ ಸವಾಲಿಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು,ನಾನು ಈಗಾಗಲೇ ಪಕ್ಷ ಕಟ್ಟಿದ್ದೇನೆ, ಈಗ ಪಕ್ಷ ಕಟ್ಟುವ ಅವಶ್ಯಕತೆ ನನಗಿಲ್ಲ ಎಂದು ಟಾಂಗ್ ನೀಡಿದ್ದಾರೆ.
ನಿನ್ನೆ ಟ್ವಿಟ್ಟರ್ ನಲ್ಲಿ “ಸಿದ್ದರಾಮಯ್ಯನವರು ಸ್ವತಂತ್ರ ಪಕ್ಷ ಕಟ್ಟಿ, ತಾವೂ ಸೇರಿದಂತೆ 5 ಸ್ಥಾನಗಳನ್ನು ಗೆದ್ದು ತೋರಿಸಿ ಆಮೇಲೆ ಜೆಡಿಎಸ್ ಬಗ್ಗೆ, ಜೆಡಿಎಸ್ ನಾಯಕತ್ವದ ಬಗ್ಗೆ ಮಾತಾಡಬೇಕು ಎಂದು ಸವಾಲು ಹಾಕುತ್ತಲೇ ಬಂದಿದ್ದೇನೆ.
ಸವಾಲು ಸ್ವೀಕರಿಸಲಾಗದ ಸಿದ್ದರಾಮಯ್ಯ, ಜೆಡಿಎಸ್ ಅನ್ನು ಟೀಕಿಸುವುದರಲ್ಲೇ ತಮ್ಮ ಶಕ್ತಿಯ ಪರೀಕ್ಷೆ ಮಾಡಿಕೊಳ್ಳುತ್ತಿರುವಂತಿದೆ” ಎಂದು ಕುಮಾರಸ್ವಾಮಿ ಬರೆದುಕೊಂಡಿದ್ದರು.
ಕರ್ನಾಟಕ ಜನತೆಗೆ ರಾಮುಲು ಏನು ಅನ್ನೋದು ಗೊತ್ತಿದೆ – ಶ್ರೀರಾಮುಲು
ಕರ್ನಾಟಕ ಜನತೆಗೆ ರಾಮುಲು ಏನು ಅನ್ನೋದು ಗೊತ್ತಿದೆ – ಶ್ರೀರಾಮುಲು
ಬಾಗಲಕೋಟೆ : ಬಳ್ಳಾರಿ ವಿಭಜನೆಯಲ್ಲಿ ಶ್ರೀರಾಮುಲು ಮಂಕಾದ್ರು ಅನ್ನೋ ಪ್ರಶ್ನೆ ಇಲ್ಲ. ರಾಮುಲು ಹೋರಾಟದ ಹಿನ್ನೆಲೆ ಇಂದ ಬಂದಂತವ್ರು. ಬಳ್ಳಾರಿ ಜಿಲ್ಲೆ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಬಳ್ಳಾರಿಯಲ್ಲಿ ಶ್ರೀರಾಮುಲು ಅಂತಹ ವ್ಯಕ್ತಿ ಕಾಂಗ್ರೆಸ್ ನೆಲಸಮ ಮಾಡಿದ್ದಾರೆ ಅದು ಬಿಜೆಪಿ ಶಕ್ತಿ. ರಾಮುಲು ಅನ್ನುವ ವ್ಯಕ್ತಿಯನ್ನು ಯಾರೂ ಕುಗ್ಗಿಸೋಕೆ ಆಗೋಲ್ಲ ಎಂದು ಸಚಿವ ಶ್ರೀರಾಮುಲು ಅವರು ಬಾಗಲಕೋಟೆಯಲ್ಲಿ ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel