ಪ್ರಮುಖ ರಾಜ್ಯದ ರಾಜಕೀಯ ಸುದ್ದಿಗಳು..!
ಈಶ್ವರಪ್ಪ ಮೋದಿ ಹತ್ರ ಕುರುಬರಿಗೆ ST ಮೀಸಲಾತಿ ಮಾಡಿಸಲಿ: ಸಿದ್ದು ಗುದ್ದು
ಬಾಗಲಕೊಟೆ: ಕುರುಬ ಸಮುದಾಯಕ್ಕೆ ಎಸ್.ಟಿ ಮೀಸಲಾತಿ ನೀಡಬೇಕೆಂದು ನಡೆಯುತ್ತಿರುವ ಹೋರಾಟಕ್ಕೆ ನನ್ನ ವಿರೋಧ ಇಲ್ಲ, ಬದಲಾಗಿದೆ ಬೆಂಬಲ ಇದೆ. ಸಚಿವ ಈಶ್ವರಪ್ಪ ಮೋದಿಯನ್ನ ಹಿಡಿದು ಎಸ್‍ಟಿ ಮೀಸಲಾತಿ ಮಾಡಿಸಲಿ, ಬೇಡ ಅಂದವರ್ಯಾರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಬಾಗಲಕೋಟೆ ಜಿಲ್ಲೆ ಬದಾಮಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಈಶ್ವರಪ್ಪ ಬಿಜೆಪಿ ಸಕಾ9ರದಲ್ಲಿ ಒಬ್ಬ ಮಂತ್ರಿ, ಅವರು ಯಾಕೆ ಬೀದಿಗೆ ಬಂದು ಹೋರಾಟ ಮಾಡಬೇಕು. ಆಡಳಿತ ಇರುವಾಗಲೇ ಮಂತ್ರಿಯಾಗಿ ಹೋರಾಟ ಮಾಡಿದ್ದು ಈಶ್ವರಪ್ಪಗೆ ಮುಜಗರ ತಂದಿದೆ. ಹೋರಾಟ ಮಾಡುವ ಬದಲು ಪ್ರಧಾನಿ ಮೋದಿ ಬಳಿ ಹೋಗಿ ಎಸ್‍ಟಿ ಮೀಸಲಾತಿ ಮಾಡಿಸಿಕೊಂಡು ಬರಲಿ ಎಂದು ಸವಾಲು ಹಾಕಿದ್ದಾರೆ.
ಸವದಿ ಅವ್ರೆ `ಆ’ ಚಿತ್ರ ನೋಡಿದಷ್ಟು ಸುಲಭವಲ್ಲ ನೌಕರರ ಬಿಕ್ಕಟ್ಟು ನಿರ್ವಹಿಸೋದು
ಬೆಂಗಳೂರು : ಸಾರಿಗೆ ನೌಕರರ ಬಿಕ್ಕಟ್ಟು ನಿರ್ವಹಿಸುವುದು ಸದನದಲ್ಲಿ ರೋಮಾಂಚಕ ಚಿತ್ರ ನೋಡಿದಷ್ಟು ಸುಲಭವಲ್ಲ ಎಂದು ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ್ ಸವದಿಯನ್ನು ರಾಜ್ಯ ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ತಿವಿದಿದೆ.
ಕಾಂಗ್ರೆಸ್ ಟ್ವೀಟ್ ನಲ್ಲಿ ಸಾರಿಗೆ ನೌಕರರ ಪ್ರತಿಭಟನೆ ನಿರ್ವಹಿಸುವುದರಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಸೋತಿದೆ. ಪ್ರಯಾಣಿಕರ ಪರದಾಟ, ಅನಾನುಭವಿ ಖಾಸಗಿ ಚಾಲಕರ ಪೀಕಲಾಟ, ಸರ್ಕಾರದ ಮೊಂಡು ಹಠ, ಖಾಸಗಿ ಬಸ್ ಮಾಲೀಕರ ನಿರಾಕರಣೆ ಈ ಎಲ್ಲವುಗಳನ್ನು ಎದುರಿಸುವ ಸ್ಥಿತಿ ಎದುರಾಗಿದೆ. ಸಾರಿಗೆ ಸಚಿವ ಲಕ್ಷ್ಮಣ್? ಸವದಿ ಅವರೇ ಬಿಕ್ಕಟ್ಟುಗಳನ್ನು ನಿರ್ವಹಿಸುವುದೆಂದ್ರೆ ಸದನದಲ್ಲಿ ಕುಳಿತು ಮೊಬೈಲ್ ನಲ್ಲಿ ರೋಮಾಂಚನದ ಚಿತ್ರ ವೀಕ್ಷಿಸಿದಂತಲ್ಲ ಎಂದು ಹೇಳಿದೆ.
ಆರ್ಥಿಕ ಪರಿಸ್ಥಿತಿ ಇಳಿಮುಖವಾಗಿರುವಾಗ ಹೊಸ ಸಂಸತ್ ಯಾಕೆ : ಕಮಲ್ ಹಾಸನ್
ಆರ್ಥಿಕ ಪರಿಸ್ಥಿತಿ ಇಳಿಮುಖವಾಗಿರುವಾಗ ಹೊಸ ಸಂಸತ್ ಯಾಕೆ : ಕಮಲ್ ಹಾಸನ್
ಚೆನ್ನೈ : ನೂತನ ಸಂಸತ್ ಭವನ ನಿರ್ಮಾಣ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಕ್ಕಳ್ ನೀದಿ ಮಯ್ಯಂ ಪಕ್ಷದ ಸಂಸ್ಥಾಪಕ, ನಟ ಕಮಲ್ ಹಾಸನ್ ಹರಿಹಾಯ್ದಿದ್ದಾರೆ. ನರೇಂದ್ರ ಮೋದಿ ಅವರು ಡಿಸೆಂಬರ್ 10ರಂದು ದೆಹಲಿಯಲ್ಲಿ ನೂತನ ಸಂಸತ್ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ರು. ಸುಮಾರು 971 ಕೋಟಿ ವೆಚ್ಚದಲ್ಲಿ ಈ ನೂತನ ಭವನ ನಿರ್ಮಾಣವಾಗಲಿದೆ ಅಂತಾ ಅಂದಾಜು ಮಾಡಲಾಗಿದೆ. ಈ ಕುರಿತು ಇದೀಗ ಟ್ವೀಟ್ ಮಾಡಿರುವ ಕಮಲ್ ಹಾಸನ್, ಕೊರೊನಾದಂತಹ ಸಾಂಕ್ರಾಮಿಕ ರೋಗದಿಂದ ಅರ್ಧ ಭಾರತ ಹಸಿವಿನಿಂದ ಇದೆ. ಜನರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ 1000 ಕೋಟಿಯ ಹೊಸ ಸಂಸತ್ ಭವನ ಯಾಕೆ ಅಂತ ಪ್ರಶ್ನಿಸಿದ್ದಾರೆ.
ಬಿಜೆಪಿ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಕೊರೋನವೈರಸ್ ಧೃಡ
ಹೊಸದಿಲ್ಲಿ, ಡಿಸೆಂಬರ್13: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಕೊರೋನವೈರಸ್ ಧೃಡ ಪಟ್ಟಿದೆ. ಅವರು ಮನೆಯಲ್ಲಿ ಕ್ವಾರಂಟೈನ್ ಆಗಿರುವುದಾಗಿ ತಮ್ಮ ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ. ಕೊರೋನವೈರಸ್ ನ ಆರಂಭಿಕ ರೋಗಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ಸ್ವತಃ ಪರೀಕ್ಷೆಗೆ ಒಳಗಾದರು ಮತ್ತು ವರದಿಗಳು ಅವರಿಗೆ ಕೊರೋನವೈರಸ್ ಸೋಂಕು ತಗುಲಿರುವುದನ್ನು ಧೃಡ ಪಡಿಸಿದೆ ಎಂದು ನಡ್ಡಾ ಟ್ವೀಟ್ನಲ್ಲಿ ತಿಳಿಸಿದ್ದಾರೆ. ತಮ್ಮ ಆರೋಗ್ಯವು ಉತ್ತಮವಾಗಿದೆ ಎಂದು ನಡ್ಡಾ ತಿಳಿಸಿದ್ದು, ವೈದ್ಯರ ಸಲಹೆಯ ಮೇರೆಗೆ ಮನೆಯಲ್ಲಿ ಕ್ವಾರಂಟೈನ್ ಆಗಿದ್ದು ಎಲ್ಲ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದೇನೆ ಎಂದು ಹೇಳಿದರು. ಕಳೆದ ಕೆಲವು ದಿನಗಳಿಂದ ತನ್ನೊಂದಿಗೆ ಸಂಪರ್ಕಕ್ಕೆ ಬಂದವರು ಕ್ವಾರಂಟೈನ್ ನಲ್ಲಿದ್ದು ಪರೀಕ್ಷೆಗೆ ಒಳಗಾಗುವಂತೆ ಅವರು ವಿನಂತಿಸಿದರು.
ಲಾಲೂ ಪ್ರಸಾದ್ ಯಾದವ್ ಆರೋಗ್ಯ ಮತ್ತಷ್ಟು ಗಂಭೀರ
ಲಾಲೂ ಪ್ರಸಾದ್ ಯಾದವ್ ಆರೋಗ್ಯ ಮತ್ತಷ್ಟು ಗಂಭೀರ
ಪಟ್ನಾ : ಬಿಹಾರ್ ಮಾಜಿ ಸಿಎಂ, ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಆರೋಗ್ಯ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ರಾಂಚಿಯಲ್ಲಿನ ರಾಜೇಂದ್ರ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಾಲೂ ಆರೋಗ್ಯ ಪರಿಸ್ಥಿತಿ ಮತ್ತಷ್ಟು ಕ್ಷೀಣಿಸುತ್ತಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಡಾಕ್ಟರ್ ಉಮೇಶ್ ಪ್ರಸಾದ್ ಮಾತನಾಡುತ್ತಾ ಲಾಲು ಪ್ರಸಾದ್ ಯಾದವ್ ಕಿಡ್ನಿಗಳು ಪ್ರಸ್ತುತ 25 ರಷ್ಟು ಮಾತ್ರ ಕೆಲಸ ಮಾಡುತ್ತಿವೆ. ಅದು ಯಾವ ಸಂದರ್ಭದಲ್ಲಾದ್ರೂ ಪೂರ್ತಿಯಾಗಿ ಕೆಲಸ ಮಾಡದೇ ಇರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ವಿಚಾರವನ್ನು ಈಗಾಗಲೇ ಅಧಿಕಾರಿಗಳಿಗೆ ತಿಳಿಸಿರುವುದಾಗಿ ಹೇಳಿರುವ ವೈದ್ಯರು, ಲಾಲೂ ಪ್ರಸಾದ್ ಈಗಾಗಲೇ ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅವರಿಗೆ ಡಯಾಬಿಟಿಸ್, ರಕ್ತದ ಒತ್ತಡ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿವೆ. ಇದರಿಂದಾಗಿಯೇ ಅವರಿಗೆ ಈಗ ಕಿಡ್ನಿ ಸಮಸ್ಯೆ ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ. ಇನ್ನೊಂದೆಡೆ ಲಾಲೂ ಪ್ರಸಾದ್ ಯಾದವ್ ಅವರಿಗೆ ಬೇಲ್ ಮಂಜೂರ್ ಮಾಡಬೇಕೆಂದು ಅವರ ಪರ ವಕೀಲ ಸಲ್ಲಿಕೆ ಮಾಡಿದ್ದ ಅರ್ಜಿಯನ್ನ ಜಾರ್ಖಂಡ್ ಹೈ ಕೋರ್ಟ್ ಜನವರಿ 22ಕ್ಕೆ ಮುಂದೂಡಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel