ಆರ್ಥಿಕ ಪರಿಸ್ಥಿತಿ ಇಳಿಮುಖವಾಗಿರುವಾಗ ಹೊಸ ಸಂಸತ್ ಯಾಕೆ : ಕಮಲ್ ಹಾಸನ್
ಚೆನ್ನೈ : ನೂತನ ಸಂಸತ್ ಭವನ ನಿರ್ಮಾಣ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಕ್ಕಳ್ ನೀದಿ ಮಯ್ಯಂ ಪಕ್ಷದ ಸಂಸ್ಥಾಪಕ, ನಟ ಕಮಲ್ ಹಾಸನ್ ಹರಿಹಾಯ್ದಿದ್ದಾರೆ.
ನರೇಂದ್ರ ಮೋದಿ ಅವರು ಡಿಸೆಂಬರ್ 10ರಂದು ದೆಹಲಿಯಲ್ಲಿ ನೂತನ ಸಂಸತ್ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ರು. ಸುಮಾರು 971 ಕೋಟಿ ವೆಚ್ಚದಲ್ಲಿ ಈ ನೂತನ ಭವನ ನಿರ್ಮಾಣವಾಗಲಿದೆ ಅಂತಾ ಅಂದಾಜು ಮಾಡಲಾಗಿದೆ.
ಈ ಕುರಿತು ಇದೀಗ ಟ್ವೀಟ್ ಮಾಡಿರುವ ಕಮಲ್ ಹಾಸನ್, ಕೊರೊನಾದಂತಹ ಸಾಂಕ್ರಾಮಿಕ ರೋಗದಿಂದ ಅರ್ಧ ಭಾರತ ಹಸಿವಿನಿಂದ ಇದೆ.
ಜನರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ 1000 ಕೋಟಿಯ ಹೊಸ ಸಂಸತ್ ಭವನ ಯಾಕೆ ಅಂತ ಪ್ರಶ್ನಿಸಿದ್ದಾರೆ.
ಚೀನಾದ ಮಹಾಗೋಡೆ ನಿರ್ಮಾಣ ಮಾಡುವಾಗ ಸಾವಿರಾರು ಮಂದಿ ಸಾವನ್ನಪ್ಪಿದ್ದರು, ಆಗ ಆಡಳಿತಗಾರರು ಇದನ್ನ ನಿರ್ಮಿಸುತ್ತಿರುವುದು ಜನರ ರಕ್ಷಣೆಗಾಗಿ ಎಂದಿದ್ರು.
ನೀವು ಯಾರನ್ನ ರಕ್ಷಣೆ ಮಾಡಲು 1000 ಕೋಟಿಯ ಸಂಸತ್ ನಿರ್ಮಿಸುತ್ತಿದ್ದೀರಿ..? ನನ್ನ ಗೌರವಾನ್ವಿತ ಚುನಾಯಿತ ಪ್ರಧಾನಮಂತ್ರಿಗಳೇ ದಯವಿಟ್ಟು ಉತ್ತರಿಸಿ ಎಂದು ಕಮಲ್ ಹಾಸನ್ ಪ್ರಶ್ನೆ ಮಾಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel