ನಮ್ಮ ಮೆಟ್ರೋ ಅ್ಯಪ್ ನಿಂದ ‘ಟಾಪ್ ಅಪ್ ಕಾರ್ಡ್’ ಪಡೆದು ನಮ್ಮ ಮೆಟ್ರೋ ಪ್ರಯಾಣಕ್ಕೆ ಸಿದ್ಧರಾಗಿ
ಬೆಂಗಳೂರು, ಸೆಪ್ಟೆಂಬರ್04: ಎಲ್ಲಾ ಸುರಕ್ಷತಾ ಮುನ್ನೆಚ್ಚರಿಕೆಗಳೊಂದಿಗೆ ಕೋವಿಡ್ -19 ಸಾಂಕ್ರಾಮಿಕದ ನೆರಳಿನಲ್ಲಿ ಕಾರ್ಯಾಚರಣೆಯನ್ನು ಪುನರಾರಂಭಿಸಲು ನಮ್ಮ ಮೆಟ್ರೋ 40 ನಿಲ್ದಾಣಗಳಲ್ಲಿ ತಯಾರಾಗಿದೆ.
ಮೆಟ್ರೋ ಟ್ರಾವೆಲ್ ಕಾರ್ಡ್ಗಳನ್ನು ಪಡೆಯಲು ಬೆಂಗಳೂರು ಮೆಟ್ರೋ ರೈಲು ನಿಗಮ ತನ್ನ ‘ನಮ್ಮ ಮೆಟ್ರೋ’ ಆ್ಯಪ್ ಅನ್ನು ನವೀಕರಿಸಿದೆ. ದಿನಕ್ಕೆ ಗರಿಷ್ಠ 80,000 ಪ್ರಯಾಣಿಕರನ್ನು ಮಾತ್ರ ನಿರೀಕ್ಷಿಸುತ್ತಿರುವುದರಿಂದ ಪ್ರಕ್ರಿಯೆಯು ಸುಗಮವಾಗಿರುತ್ತದೆ ಎಂಬ ವಿಶ್ವಾಸವಿದೆ ಎಂದು ಕಾರ್ಯಾಚರಣೆ ಮತ್ತು ನಿರ್ವಹಣೆಯ ಕಾರ್ಯನಿರ್ವಾಹಕ ನಿರ್ದೇಶಕ ಎ.ಎಸ್.ಶಂಕರ್ ತಿಳಿಸಿದ್ದಾರೆ.
ಟಾಪ್-ಅಪ್ ಕಾರ್ಡ್/ಸ್ಮಾರ್ಟ್ ಕಾರ್ಡ್ ಅನ್ನು ಆ್ಯಪ್ ಮೂಲಕ, ನಮ್ಮ ವೆಬ್ಸೈಟ್ನಲ್ಲಿ ಅಥವಾ ಪ್ರತಿ ನಿಲ್ದಾಣದ ಪಾಯಿಂಟ್ ಆಫ್ ಸೇಲ್ ಯಂತ್ರಗಳಲ್ಲಿ ಪಡೆಯಬಹುದು. ಪೋಸ್ ಯಂತ್ರಗಳು ಟ್ರಾವೆಲ್ ಕಾರ್ಡ್ ಅನ್ನು ಟಾಪ್ ಅಪ್ ಮಾಡಲು ಸ್ಕ್ಯಾನ್ ಮಾಡಬಹುದಾದ ಕ್ಯೂಆರ್ ಕೋಡ್ ಅನ್ನು ನೀಡುತ್ತದೆ ಎಂದು ಅವರು ಹೇಳಿದರು.
ಕೋವಿಡ್ -19 ಸಾಂಕ್ರಾಮಿಕದಿಂದಾಗಿ ವ್ಯಕ್ತಿಗಳ ನಡುವೆ ಸಾಮಾಜಿಕ ಅಂತರ ಕಾಯ್ದುಗೊಳ್ಳಲು ಇದನ್ನು ಮಾಡಲಾಗಿದೆ ಎಂದು ಅವರು ಹೇಳಿದರು. ಬೈಯಾಪನ್ನ ಹಳ್ಳಿ ಮತ್ತು ಮೈಸೂರು ರಸ್ತೆ ನಿಲ್ದಾಣಗಳಿಂದ ಸೋಮವಾರ ಬೆಳಿಗ್ಗೆ 8 ಗಂಟೆಗೆ, 168 ದಿನಗಳ ಅಂತರದ ನಂತರ ಮೊದಲ ಮೆಟ್ರೋ ರೈಲುಗಳು ಓಡಲಿವೆ.
ಸೆಪ್ಟೆಂಬರ್ 7 ರಿಂದ 91 ಟ್ರಿಪ್ಗಳನ್ನು ಪರ್ಪಲ್ ಲೈನ್ನಲ್ಲಿ ಮತ್ತು ಸೆಪ್ಟೆಂಬರ್ 9 ರಿಂದ 97 ಟ್ರಿಪ್ಗಳನ್ನು ಗ್ರೀನ್ ಲೈನ್ನಲ್ಲಿ ನಡೆಸಲಾಗುವುದು ಎಂದು ಶಂಕರ್ ಹೇಳಿದರು. ಸೆಪ್ಟೆಂಬರ್ 11 ರವರೆಗೆ ದಿನಕ್ಕೆ ನಾವು ಆರು ಗಂಟೆಗಳ ಕಾಲ ಮಾತ್ರ ಓಡಿಸುತ್ತೇವೆ ಎಂದು ಅವರು ಹೇಳಿದರು. ನಗರದಾದ್ಯಂತ ಕೋವಿಡ್ -19 ಕರ್ತವ್ಯಕ್ಕೆ ನಿಯೋಜಿಸಲಾದ ಮೆಟ್ರೋ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳಲಾಗಿದ್ದು, ಶುಕ್ರವಾರ ಹೋಮ್ ಗಾರ್ಡ್ಗಳನ್ನು ತರಬೇತಿ ಕಾರ್ಯಕ್ರಮಕ್ಕೆ ಕರೆಸಲಾಗಿದೆ ಎಂದು ಮೆಟ್ರೋ ಮೂಲವೊಂದು ತಿಳಿಸಿದೆ.