ಬಾಗ್ಲು ತೆಗಿ ಮೇರಿ ಜಾನ್ – ತೋತಾಪುರಿ ಹಾಡು ಬಂತು..
ನೀರ್ ದೋಸೆ ಫೇಮ್ ನನವರಸ ನಾಯಕ ಜಗ್ಗೇಶ್ ಹಾಗೂ ವಿಜಯ ಪ್ರಸಾದ್ ಜೋಡಿ ಮತ್ತೊಂದು ಮತ್ತೊಂದು ಸೆನ್ಸೇಷನ್ ಹಿಟ್ ಕೊಡೋದಕ್ಕೆ ಸಜ್ಜಾಗಿದೆ. ನೀರ್ ದೋಸೆಯಲ್ಲಿ ಮಾಡಿದ್ದ ಮ್ಯಾಜಿಕ್ ನನ್ನ ಮತ್ತೊಮ್ಮೆ ರೀ ಕ್ರಿಯೇಟ್ ಮಾಡಲು ಚಿತ್ರತಂಡ ರೆಡಿಯಾಗಿದೆ. ಇದೀಗ ಸಿನಿಮಾ ಕೆಲಸ ಮುಗಿಸಿ ಪ್ರಚಾರ ಕಾರ್ಯ ಶುರು ಹಚ್ಚಿಕೊಂಡಿದೆ ತೋತಾಪುರಿ ಚಿತ್ರತಂಡ. ನಿರ್ದೇಶಕ ವಿಜಯ ಪ್ರಸಾದ್ ಚಿತ್ರದ ಬಹು ನಿರೀಕ್ಷಿತ ವೀಡಿಯೋ ಸಾಂಗ್ ಬಿಡುಗಡೆ ಮಾಡಿ ಸಿನಿರಸಿಕರನ್ನು ಸೆಳೆಯುತ್ತಿದ್ದಾರೆ.
ಮೊನ್ನೆ ಮೊನ್ನೆಯಷ್ಟೇ ಹಾಡಿನ ಟೀಸರ್ ಝಲಕ್ ತೋರಿಸಿ ಪ್ರೇಕ್ಷಕರಲ್ಲಿ ಕುತೂಹಲ ಬಿಲ್ಡ್ ಮಾಡಿತ್ತು. ಇದೀಗ ಪೂರ್ತಿ ವೀಡಿಯೋ ಹಾಡನ್ನೇ ಬಿಡುಗಡೆ ಮಾಡಿದೆ. ‘ಬಾಗ್ಲು ತೆಗಿ ಮೇರಿ ಜಾನ್’ ಎನ್ನುವ ಕ್ಯಾಚಿ ಲಿರಿಕ್ಸ್ ನ ಸಾಂಗ್, ಪ್ರೇಕ್ಷಕರನ್ನ ನೋಡಿಸಿಕೊಂಡು ಹೋಗುತ್ತಿದೆ. ಅದಿತಿ ಪ್ರಭುದೇವ ಮತ್ತು ಜಗ್ಗೇಶ್ ಕಾಂಬಿನೇಶನ್ ನೋಡುಗರಿಗೆ ಸಖತ್ ಥ್ರಿಲ್ ನೀಡುತ್ತಿದೆ.
ವಿಜಯ ಪ್ರಸಾದ್ ಸಾಹಿತ್ಯಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಮುರಳಿ ಮಾಸ್ಟರ್ ನೃತ್ಯ ಸಂಯೋಜನೆ ಹಾಡಿನ ಹೈಲೈಟ್ ಗಳಲ್ಲಿ ಒಂದು. ಜಗ್ಗೇಶ್ ಎಕ್ಸ್ ಪ್ರೆಶನ್, ಅದಿತಿ ಪ್ರಭುದೇವ ಕ್ಯೂಟ್ನೆಸ್ ಬಾಗ್ಲು ತೆಗಿ ಮೇರಿ ಜಾನ್ ಗೆ ಮತ್ತಷ್ಟು ಮೆರುಗು ತುಂಬಿದೆ.
ಸಿಂಗರ್ ಅನನ್ಯ ಭಟ್, ವ್ಯಾಸರಾಜ್ ಸೋಸಲೆ, ಸುಪ್ರಿಯ ರಾಮ್ ಈ ಹಾಡಿಗೆ ಧ್ವನಿಯಾಗಿದ್ದಾರೆ. ಸದ್ಯ ಹಾಡು ಸಖತ್ ರೆಸ್ಪಾನ್ಸ್ ಗಿಟ್ಟಿಸಿಕೊಂಡು ಯೂಟ್ಯೂಬ್ ಟ್ರೆಂಡಿಂಗ್ನಲ್ಲಿದೆ., ಬಿಡುಗಡೆಯಾದ 2 ದಿನಗಳಲ್ಲಿ ಗಂಟೆಗಳಲ್ಲಿ 20 ಲಕ್ಷಕ್ಕೂ ಹೆಚ್ಚು ವೀವ್ಸ್ ಕಂಡಿದೆ.
ಸುರೇಶ್ ಆರ್ಟ್ಸ್ ಬ್ಯಾನರ್ ನಡಿ ಕೆ.ಎ ಸುರೇಶ್ ಈ ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ. ಎರಡು ಸೀಕ್ವೆಲ್ ನಲ್ಲಿ ಬಿಡುಗಡೆಯಾಗುತ್ತಿರುವ ತೋತಾಪುರಿ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ನಿರಂಜನ್ ಬಾಬು ಕ್ಯಾಮೆರಾ ಕೈಚಳಕವಿದೆ. ದತ್ತಣ್ಣ, ಸುಮನ್ ರಂಗನಾಥ್, ಡಾಲಿ ಧನಂಜಯ, ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರೆ. ವೀಣಾ ಸುಂದರ್, ಹೇಮಾ ದತ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.