ಅಂಡಮಾನ್‌ ದ್ವೀಪದಲ್ಲಿರುವ ಅರಣ್ಯ ಸಂರಕ್ಷಣಾ ಪ್ರವಾಸಿ ತಾಣಗಳು ಮತ್ತದರ ಅನನ್ಯ ವಿಶೇಷತೆಗಳು: 

1 min read
andanan saakshatv

ಅಂಡಮಾನ್‌ ದ್ವೀಪದಲ್ಲಿರುವ ಅರಣ್ಯ ಸಂರಕ್ಷಣಾ ಪ್ರವಾಸಿ ತಾಣಗಳು ಮತ್ತದರ ಅನನ್ಯ ವಿಶೇಷತೆಗಳು: 

andanan saakshatvಅಂಡಮಾನ್‌ನ ಪ್ರಮುಖ ಟೂರಿಸಂ ಹಾಟ್‌ಸ್ಪಾಟ್‌ಗಳಲ್ಲಿ ಇಂಟರ್‌ವ್ಯೂ ಐಲ್ಯಾಂಡ್‌ ಕೂಡಾ ಒಂದು. ಉತ್ತರ ಅಂಡಮಾನ್ ಮತ್ತು ಮಧ್ಯ ಅಂಡಮಾನ್ ದ್ವೀಪಗಳನ್ನು ಬೇರ್ಪಡಿಸುವ ಆಸ್ಟೆನ್ ಜಲಸಂಧಿಯ ಪಶ್ಚಿಮದಲ್ಲಿರುವ ಇದು, ಸುಮಾರು 101 ಕಿಮೀ (ಅಂದರೆ 39 ಚದರ ಮೈಲಿ) ವಿಸ್ತೀರ್ಣ ಹೊಂದಿದೆ. ದ್ವೀಪದ ಉತ್ತರ ತುದಿಯಲ್ಲಿ ಕಡಿಮೆಯಿದೆ, ಆದರೆ ಕ್ರಮೇಣ 113 ಮೀಟರ್ (371 ಅಡಿ) ಎತ್ತರಕ್ಕೆ ಏರುತ್ತದೆ. ದ್ವೀಪದ ಹೆಚ್ಚಿನ ಭಾಗವು ಕಾಡು ಪ್ರದೇಶವಾಗಿದ್ದು 7 ಮೀಟರ್ (23 ಅಡಿ) ಎತ್ತರದ ಕಲ್ಲಿನ ಶಿಖರವು ದ್ವೀಪದ ದಕ್ಷಿಣ ತುದಿಯಲ್ಲಿರುವ ಬಂಡೆಯಿಂದ ಮುಚ್ಚಿದೆ.

ಫೌಲ್ ಮೈದಾನವು ದ್ವೀಪದಿಂದ ಉತ್ತರ-ಈಶಾನ್ಯಕ್ಕೆ ಸುಮಾರು 2 ಮೈಲಿ (3.2 ಕಿಲೋಮೀಟರ್) ವಿಸ್ತರಿಸಿದೆ. ಈ ದ್ವೀಪದಲ್ಲಿ ಸುಮಾರು 80-90 ಕಾಡಾನೆಗಳಿವೆ. ಹಿಂದೆ ಅರಣ್ಯ ಕೆಲಸಕ್ಕಾಗಿ ತರಲಾಗಿದ್ದ ಈ ಆನೆಗಳು ಈಗಲೂ ದ್ವೀಪದಲ್ಲಿ ಉಳಿದುಕೊಂಡಿದೆ. ಇಂಟರ್‌ ವ್ಯೂ ಐಲ್ಯಾಂಡ್‌ ಮಾಯಬುಂದರ್ ತಾಲ್ಲೂಕಿಗೆ ಸೇರಿದ್ದು, 1997ರಿಂದ ಪ್ರವಾಸಿಗರಿಗೆ ವೀಕ್ಷಣೆಗೆ ಅವಕಾಶ ನೀಡಲಾಯಿತು. ಇಲ್ಲಿ ಬೇಟೆ ನಿಯಂತ್ರಣಕ್ಕಾಗಿ ಅರಣ್ಯ ಸಂರಕ್ಷಕರು, ಸ್ಥಳೀಯ ಪೊಲೀಸರು ಮತ್ತು ಕರಾವಳಿ ಕಾವಲುಗಾರರನ್ನು ನಿಯೋಜಿಸಲಾಗಿದೆ.

ಅಂಡಮಾನ್‌ನ ಇನ್ನೊಂದು ಪ್ರವಾಸಿ ಸ್ಥಳ ಮೌಂಟ್ ಹ್ಯಾರಿಯೆಟ್ ರಾಷ್ಟ್ರೀಯ ಉದ್ಯಾನವನ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ರಾಜಧಾನಿ ಪೋರ್ಟ್ ಬ್ಲೇರ್‌ಗೆ ಅತ್ಯಂತ ಹತ್ತಿರದ ಅರಣ್ಯ ಪ್ರದೇಶವಾಗಿದೆ. ಈ ಉದ್ಯಾನವನವು ಅಂಡಮಾನ್ ಸಮೂಹ ದ್ವೀಪಗಳಲ್ಲಿನ ಅತ್ಯುನ್ನತ ಶಿಖರಗಳನ್ನು ಹೊಂದಿದೆ ಮತ್ತು ಇದು ದಟ್ಟವಾದ ನಿತ್ಯಹರಿದ್ವರ್ಣ ಮತ್ತು ಅರೆ ನಿತ್ಯಹರಿದ್ವರ್ಣ ಕಾಡುಗಳಿಂದ ಆವೃತವಾಗಿದೆ. ಈ ರಾಷ್ಟ್ರೀಯ ಉದ್ಯಾನವನಕ್ಕೆ ಕರ್ನಲ್ ಆರ್.ಸಿ ಟೈಟ್ಲರ್, ಅವರ ಪತ್ನಿ ಹ್ಯಾರಿಯೆಟ್ ಅವರ ಹೆಸರನ್ನು ಇಡಲಾಗಿದೆ. ಕಾರಣ 1862ರಲ್ಲಿ ಕೆಲ ಸಮಯದವರೆಗೆ ಮುಖ್ಯ
ಆಯುಕ್ತರಾಗಿದ್ದಾಗ ಇಲ್ಲಿನ ಅಭಿವೃದ್ಧಿಗೆ ಶ್ರಮಿಸಿದ್ದರು.

andanan saakshatvಇಡೀ ರಾಷ್ಟ್ರೀಯ ಉದ್ಯಾನವನವು ದಕ್ಷಿಣ ಅಂಡಮಾನ್ ದ್ವೀಪಗಳ ಪೂರ್ವ ಭಾಗದಲ್ಲಿರುವ ಬೆಟ್ಟಗಳ ಒಂದು ದೊಡ್ಡ ಭಾಗವನ್ನು ರೂಪಿಸುತ್ತದೆ. ಕಡಿದಾದ ಪ್ರಪಾತದ ಇಳಿಜಾರುಗಳಿಂದ, ಶಾಂತವಾದ ಇಳಿಜಾರುಗಳವರೆಗೆ ಹೆಚ್ಚಿನ ಪ್ರದೇಶವು ಏರಿಳಿತವಿಲ್ಲದ ಭೂಪ್ರದೇಶವನ್ನು ಹೊಂದಿದೆ. ಇಲ್ಲಿನ ಕೆಲವು
ಶಿಖರಗಳಾದ ಮೌಂಟ್‌ ಕೋಯೋಬ್‌ (Mt. Koyob) 459 ಮೀಟರ್‌ ಎತ್ತರವಿದ್ದರೇ, ಮೌಂಟ್‌ ಹೆಕ್ಸ್ಟ್‌ (Mt.Hext) 425 ಮೀಟರ್‌, ಮೌಂಟ್‌ ಹ್ಯಾರಿಯೆಟ್‌ (Mt.Harriet) 422 ಮೀಟರ್, ಮೌಂಟ್‌ ಗುಡ್‌ರಿಜ್‌ (Mt Goodrig) 376 ಮೀಟರ್ ಮತ್ತು ಮೌಂಟ್‌ ಕಾರ್ಪೆಟರ್‌ (Mt.Carpeter) 346 ಮೀಟರ್‌ ಎತ್ತರವಿದೆ. ಈ ಉದ್ಯಾನವನ್ನು ನವೆಂಬರ್ 1996ರಿಂದ ಮೀಸಲು ಅರಣ್ಯ ಪ್ರದೇಶವೆಂದು ಸಂರಕ್ಷಿಸಲಾಗುತ್ತಾ ಬರಲಾಗಿದೆ. ಪ್ರಸ್ತುತ ಉದ್ಯಾನವನದ 46.62
ಚದರ ಕಿಮೀ ಮತ್ತು ಮೌಂಟ್ ಹ್ಯಾರಿಯೆಟ್ ಶಿಖರ ಮತ್ತು ಇತರ ಹತ್ತಿರದ ಪ್ರದೇಶಗಳನ್ನು ಒಳಗೊಂಡಂತೆ 25.55 ಚದರ ಕಿಮೀ ವಿಸ್ತರಿಸುವ ಪ್ರಸ್ತಾಪವಿದೆ. ಮೌಂಟ್ ಹ್ಯಾರಿಯೆಟ್‌ ರಾಷ್ಟ್ರೀಯ ಉದ್ಯಾನವು ಅದ್ಭುತವಾದ ಪ್ರಾಣಿ ಸಂಪತ್ತಿನಲ್ಲಿ ಸಮೃದ್ಧವಾಗಿದೆ.

ಬರ್ಡ್ ಲೈಫ್ ಇಂಟರ್‌ ನ್ಯಾಷನಲ್‌ ಅಂಡಮಾನಿನ ಪ್ರಮುಖ ಪಕ್ಷಿ ಸಂರಕ್ಷಣಾ ಕಾರ್ಯಕ್ರಮ. ಇದರ ಅಡಿಯಲ್ಲಿ ಉದ್ಯಾನವನವನ್ನು ಪ್ರಮುಖ ಪಕ್ಷಿಗಳ ಪ್ರದೇಶವೆಂದು ಗುರುತಿಸಲಾಗಿದೆ. ಇಲ್ಲಿ 27 ಸರೀಸೃಪಗಳು ಮತ್ತು ಉಭಯಚರಗಳು ವಾಸವಿರುವ ವರದಿಯಾಗಿವೆ, ಇದರಲ್ಲಿ 12 ಸ್ಥಳೀಯ ಪ್ರಭೇದಗಳು ಸೇರಿವೆ. ರಾಣಾ ಚಾರ್ಲ್ಸ್‌ ಡಾರ್ವಿನಿ ಎಂಬ ಹೊಸ ಜಾತಿಯ ಕಪ್ಪೆಯನ್ನು ಈ ಉದ್ಯಾನವನದಲ್ಲಿಯೇ ಕಂಡುಹಿಡಿಯಲಾಯಿತು. ಕಿಂಗ್ ಕೋಬ್ರಾ, ಅಂಡಮಾನ್ ಕೋಬ್ರಾ ಮತ್ತು ಎರಡು ಗೂಡುಕಟ್ಟುವ ಸಮುದ್ರ ಆಮೆಗಳು (ಹಸಿರು ಸಮುದ್ರ ಮತ್ತು ಆಲಿವ್ ರಿಡ್ಲೆ) ಇಲ್ಲಿಂದ ವರದಿಯಾದ ಪ್ರಮುಖ ಸರೀಸೃಪಗಳು. ಸ್ಥಳೀಯ ಅಂಡಮಾನ್ ಹಂದಿ, ಶ್ರೂ ಮತ್ತು ಬಾವಲಿಗಳು ಸೇರಿದಂತೆ 12 ಜಾತಿಯ ಸಸ್ತನಿಗಳು ಉದ್ಯಾನದಲ್ಲಿವೆ ಎನ್ನಲಾಗಿದೆ. ಅನೇಕ ಹೊಸ ಜಾತಿಗಳನ್ನು
ಸೇರಿದಂತೆ ಸುಮಾರು 120 ಜಾತಿಯ ಪತಂಗಗಳು ಇಲ್ಲಿವೆ.
ಅಂಡಮಾನ್‌ ದ್ವೀಪದಲ್ಲಿರುವ ಲೈಟ್ ಹೌಸ್ 2004ರ ಹಿಂದೂ ಮಹಾಸಾಗರದಾಳದ ಭೂಕಂಪನದಿಂದ ಉಂಟಾದ ಸುನಾಮಿಯ ಪರಿಣಾಮದಿಂದ ಸಂಪೂರ್ಣವಾಗಿ ನಾಶವಾಗಿತ್ತು. ಆದರೆ ನಂತರ ಅದನ್ನು ದುರಸ್ತಿ ಮಾಡಲಾಯಿತು. 2015ರವರೆಗೆ ಇಲ್ಲಿನ ಬಹುವಿಶಿಷ್ಟ ಪಕ್ಷಿಗಳನ್ನು ಮೇಲ್ವಿಚಾರಣೆ ಮಾಡಲು ಒಂದು ವನ್ಯಜೀವಿ ನಿಲ್ದಾಣವಿತ್ತು. ಇಲ್ಲಿನ ಮೂಲಕ ಶಾಶ್ವತ ನಿವಾಸಿಗಳು ಲೈಟ್ ಹೌಸ್ ಬಳಿ ಪಶ್ಚಿಮ ಕರಾವಳಿಯಲ್ಲಿ ನೆಲೆಸಿದ್ದರು. ನಿಲ್ದಾಣವು ಲೈಟ್‌ಹೌಸ್ ಕೀಪರ್‌ ಕಣ್ಗಾವಲಿನಲ್ಲಿತ್ತು. 2015ರ ಕೊನೆಯಲ್ಲಿ ಬಜೆಟ್ ಕಡಿತದ ಕಾರಣ ವ್ಯವಸ್ಥೆಯಲ್ಲಿ ಕೊಂಚ ಮಾರ್ಪಾಡುಗಳಾಯಿತು.

vibha 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd