ಕಾರಿಗೆ ಟ್ರ್ಯಾಕ್ಟರ್ ಡಿಕ್ಕಿ | 3 ಜನರ ಸಾವು Saaksha Tv
ಬಾಗಲಕೋಟೆ: ಕಾರಿಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ಕೊನೆಯುಸಿರೆಳೆದಿರುವ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಜಾಲಿಹಾಳ ಗ್ರಾಮದ ಬಳಿ ನಡೆದಿದೆ.
ಬಸನಗೌಡ ಪಾಟೀಲ್(60), ಮಂಜುನಾಥ ಮಾರನಬಸರಿ (38) ಸಂಗಮ್ಮ ಪಾಟಿಲ್(55) ಮೃತಪಟ್ಟವರು. ಕಾರಿನಲ್ಲಿ ಐದು ಜನರು ಬಾಗಲಕೋಟೆ ತಾಲ್ಲೂಕಿನ ಭಗವತಿ ಗ್ರಾಮಕ್ಕೆ ನಿನ್ನೆ ಸಂಬಂಧಿಕರೊಬ್ಬರ ಅಂತ್ಯಸಂಸ್ಕಾರಕ್ಕೆ ಹೋಗಿದ್ದರು. ಅಂತ್ಯಸಂಸ್ಕಾರ ಮುಗಿಸಿಕೊಂಡು ರಾತ್ರಿ ವಾಪಸ್ ಬರುವಾಗ ಗದಗ-ಬಾಗಲಕೋಟೆ ಮಾರ್ಗದ ರಸ್ತೆಯಲ್ಲಿ ದುರ್ಘಟನೆ ನಡೆದಿದೆ.
ಬಸನಗೌಡ ಪಾಟೀಲ್, ಮಂಜುನಾಥ ಮಾರನಬಸರಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸಂಗಮ್ಮ ಪಾಟಿಲ್ ಗದಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ನಿಧನ ಹೊಂದಿದ್ದಾರೆ. ಇಬ್ಬರಿಗೆ ಗಾಯಗಳಾಗಿದ್ದು, ಧಾರವಾಡ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತರು ಗದಗ ಜಿಲ್ಲೆ ಡಸ ಹಡಗಲಿ ಗ್ರಾಮದವರು ಎಂದು ಹೇಳಲಾಗುತ್ತಿದೆ. ಬಾದಾಮಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.








