ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದವರ ಹೆಸರುಗಳು ಸಾರಿಗೆ ಇಲಾಖೆ ವೆಬ್ ಸೈಟ್ ಗಳಲ್ಲಿ ಪ್ರಕಟ..!
ನವದೆಹಲಿ: ಟ್ರಾಫಿಕ್ ರೂಲ್ಸ್ ಫಾಲೋ ಮಾಡೋರಿಗೆ ಬಿಸಿ ಮುಟ್ಟಿಸಲು ಸರ್ಕಾರ ಮತ್ತಷ್ಟು ಕಠಿಣ ಕ್ರಮ ಕೈಗೊಂಡಿದೆ. ಹೌದು ಇನ್ಮುಂದೆ ಪದೇ ಪದೇ ಸಂಚಾರ ನಿಯಮ ಉಲ್ಲಂಘಿಸುವವರ ಹೆಸರುಗಳನ್ನು ಸಾರಿಗೆ ಇಲಾಖೆ ವೆಬ್ ಸೈಟ್ ಗಳಲ್ಲಿ ಪ್ರಕಟಿಸಲಾಗುವುದು ಎಂದು ಹೇಳಲಾಗಿದೆ.
ಕೇಂದ್ರ ಮೋಟಾರು ವಾಹನ ನಿಯಮದ ತಿದ್ದುಪಡಿಯ ಪ್ರಕಾರ, ರಾಜ್ಯ ಸಾರಿಗೆ ಇಲಾಖೆಗಳು ತಮ್ಮ ಪೋರ್ಟಲ್ ಗಳಲ್ಲಿ ಕುಡಿದು ವಾಹನ ಚಲಾಯಿಸುವುದು, ವೇಗದ ಡ್ರೈವಿಂಗ್, ರೇಸಿಂಗ್, ಅಪಾಯಕಾರಿ ಚಾಲನೆ ಮತ್ತು ಹೆಲ್ಮೆಟ್ ಧರಿಸದಂತಹ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು, ಪದೇಪದೇ ನಿಯಮ ಉಲ್ಲಂಘಿಸುವ ವ್ಯಕ್ತಿಗಳ ಪಟ್ಟಿಯನ್ನು ಸಾರ್ವಜನಿಕ ಮಾಹಿತಿಗೆ ಪ್ರಕಟಿಸಲಾಗುವುದು. ನೇಮ್ ಅಂಡ್ ಶೇಮ್ ವೆಬ್ ಸೈಟ್ ಗಳಲ್ಲಿ ಪದೇ ಪದೇ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವಂತವರ ಹೆಸರುಗಳನ್ನ ಪ್ರಕಟಿಸಲಾಗುವುದು.
ಫೇಸ್ ಬುಕ್ ನಿಜವಾಗ್ಲೂ ಎಷ್ಟು ಸೇಫ್..?
ವಿಜಯೇಂದ್ರ ದೇವಲೋಕದಿಂದ ಇಳಿದು ಬಂದಿದ್ದಾನಾ : ಸಿದ್ದರಾಮಯ್ಯ ಗುಡುಗು
ರಾಜಕೀಯ ಚಟುವಟಿಕೆಗಳು , ಪ್ರಚಾರಗಳಿಗೆ ಇಲ್ಲದ ನಿರ್ಬಂಧ ಸಿನಿಮಾ ಥಿಯೇಟರ್‌ಗೆ ಏಕೆ – ದುನಿಯಾ ವಿಜಿ ಗರಂ..!








