ರಾಜಕೀಯ ಚಟುವಟಿಕೆಗಳು , ಪ್ರಚಾರಗಳಿಗೆ ಇಲ್ಲದ ನಿರ್ಬಂಧ ಸಿನಿಮಾ ಥಿಯೇಟರ್‌ಗೆ ಏಕೆ – ದುನಿಯಾ ವಿಜಿ ಗರಂ..!

1 min read

ರಾಜಕೀಯ ಚಟುವಟಿಕೆಗಳು , ಪ್ರಚಾರಗಳಿಗೆ ಇಲ್ಲದ ನಿರ್ಬಂಧ ಸಿನಿಮಾ ಥಿಯೇಟರ್‌ಗೆ ಏಕೆ – ದುನಿಯಾ ವಿಜಿ ಗರಂ..!

ದಾವಣಗೆರೆ: ಸರ್ಕಾರದ 50 % ಸೀಟಿಂಗ್ ನೀತಿ ಸಿನಿಮಾ ಮಂದಿಯನ್ನ ಕೆರಳಿಸಿದೆ. ಅದ್ರಲ್ಲೂ ಇದೇ ತಿಂಗಳೇ ರಿಲೀಸ್ ಗೆ ರೆಡಿಯಾಗಿದ್ದ ಸಲಗ ಸಿನಿಮಾಗೂ ಶಾಕ್ ಕೊಟ್ಟಿದೆ. ಈ ವಿಚಾರವಾಗಿ ದುನಿಯಾ ವಿಜಿ ದಾವಣಗೆರೆಯಲ್ಲಿ ಪ್ರತಿಕ್ರಿಯೆ ನೀಡಿದ್ದು, ಸರ್ಕಾರದ ವಿರುದ್ಧ ಾಕ್ರೋಶ ಹೊರಹಾಕಿದ್ದಾರೆ. ರಾಜಕೀಯ ಸಮಾವೇಶಗಳಲ್ಲಿ ಸಾವಿರಾರು ಜನ ಸೇರ್ತಾರೆ. ಅದಕ್ಕೆ ನಿರ್ಬಂಧ ಇಲ್ಲ. ಎಲ್ಲೂ ಇಲ್ಲದ ನಿಯಮಗಳು ಸಿನಿಮಾ ಥಿಯೇಟರ್ಗೆ ಏಕೆ ಎಂದು ವಿಜಯ್ ಪ್ರಶ್ನಿಸಿದ್ದಾರೆ.

ಇನ್ನೂ ಪುನೀತ್ ರಾಜಕುಮಾರ್ ಒಂದೊಳ್ಳೆ ಸಿನಿಮಾ ಮಾಡಿದ್ದಾರೆ. 2 ದಿನ ಮೊದಲು ಹೇಳಿದ್ದರೆ ಅವರು ಸಿನಿಮಾ ರಿಲೀಸ್ ಮಾಡುತ್ತಿರಲಿಲ್ಲ. ಬಿಗ್ ಬಜೆಟ್ ಗಳ ಸಿನಿಮಾಗಳಿಗೆ ಈ ರೀತಿ ಆದ್ರೆ ಸಿನಿಮಾ ಇಂಡಸ್ಟ್ರಿ ಉಳಿಯುವುದು ಹೇಗೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಪುನಿತ್ ಸಿನಿಮಾ ನೋಡಲು ಫ್ಯಾಮಿಲಿ ಗಳು ಬರ್ತಾ ಇದೆ. ದಯವಿಟ್ಟು ಟಫ್ ರೂಲ್ಸ್ಗಳನ್ನು ಸಡಿಲಿಸಿ ಎಂದು ವಿಜಿ ಸರ್ಕಾರಕ್ಕೆ ಮನವಿ ಮಾಡಿದರು. ಕೋವಿಡ್ ಸಂದರ್ಭದಲ್ಲಿ ಪುನೀತ್ ಅವರು ಸರ್ಕಾರಕ್ಕೆ ನಿಧಿ ನೀಡಿದರು. ಅದಕ್ಕೆ ಅಂತ ನಾವು ಕೇಳ್ತಾ ಇಲ್ಲ, ಕನ್ನಡ ಸಿನಿಮಾ ರಂಗ ಉಳಿಯಲು ಕೇಳುತ್ತಿದ್ದೇವೆ ಎಂದರು.

ಯುವತಿಯನ್ನ ಮೀಟ್ ಮಾಡಲು ಹೋದ ಯುವಕನಿಗೆ ಅದೆಂಥಾ ಗತಿ ತಂದಿಟ್ಟರು ಈ ಪಾಪಿಗಳು..!

ಥಿಯೇಟರ್ ಗಳಲ್ಲಿ ಶೇ. 50 % ಸೀಟಿಂಗ್ – ಸರ್ಕಾರದ ವಿರುದ್ಧ ತಿರುಗಿಬಿದ್ದ ‘ರಾಖಿ ಭಾಯ್’..!

‘ದಳಪತಿ’ಯ ‘ಮಾಸ್ಟರ್’ ಹಿಂದಿಗೆ ರೀಮೇಕ್ – ನಾಯಕ ಯಾರು ಗೊತ್ತಾ..?

ಮೊದಲ ದಿನವೇ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸದ ‘ಯುವರತ್ನ’..!

ಥಿಯೇಟರ್ ಗಳಲ್ಲಿ 50 % ಸೀಟಿಂಗ್ – ಕನ್ನಡದ ಯಾವೆಲ್ಲಾ ಸಿನಿಮಾಗಳಿಗೆ ಸಂಕಷ್ಟ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd