ಯುವತಿಯನ್ನ ಮೀಟ್ ಮಾಡಲು ಹೋದ ಯುವಕನಿಗೆ ಅದೆಂಥಾ ಗತಿ ತಂದಿಟ್ಟರು ಈ ಪಾಪಿಗಳು..!
ಉತ್ತರಪ್ರದೇಶ : ಉತ್ತರಪ್ರದೇಶದಲ್ಲಿ ಮತ್ತೊಂದು ಹೇಯ ಕೃತ್ಯ ಬೆಳಕಿಗೆ ಬಂದಿದೆ. 22 ವರ್ಷದ ಯುವಕ ತನ್ನ ಗೆಳತಿಯನ್ನ ಮೀಟ್ ಮಾಡಲು ಹೋದ ಸಂದರ್ಭದಲ್ಲಿ ಆಕೆಯ ಕುಟುಂಬಸ್ಥರು ಆತನ ಮೇಲೆ ಮನಸ್ಸೋಯಿಚ್ಛೆ ಥಳಿಸಿ, ಹಿಂಸೆ ನೀಡಿದ್ದಾರೆ. ಲಾಠಿ ಬೆಲ್ಟ್ ಗಳಿಂದ ಥಳಿಸಿ ಗುದನಾಳಕ್ಕೆ ರಾಡ್ ಗಳನ್ನು ಹಾಕಿ ಅಮಾನವೀಯತೆ ಮೆರೆದಿರುವ ಘಟನೆ ಲಖಿಂಪುರ ಖೇರಿಯ ಟಿಕುನಿಯಾ ಪಟ್ಟಣದಲ್ಲಿ ನಡೆದಿದೆ.
ಈ ಘಟನೆಯಲ್ಲಿ ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ. ಸಂತ್ರಸ್ತ ಯುವತಿಯೊಬ್ಬಳ ಜೊತೆ ಸಂಬಂಧ ಹೊಂದಿದ್ದ. ಆದರೆ ಎರೆಡೂ ಕುಟುಂಬದ ನಡುವೆ ಮನಸ್ತಾಪವಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಆತ ಯುವತಿಯನ್ನು ಭೇಟಿ ಮಾಡಲು ಬಂದಾಗ ಯುವತಿ ಕುಟುಂಬಸ್ಥರು ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಥಿಯೇಟರ್ ಗಳಲ್ಲಿ ಶೇ. 50 % ಸೀಟಿಂಗ್ – ಸರ್ಕಾರದ ವಿರುದ್ಧ ತಿರುಗಿಬಿದ್ದ ‘ರಾಖಿ ಭಾಯ್’..!
ಕಾರುಗಳಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಳ್ಳುವುದು ಯಾಕೆ..?
ಹುಕ್ಕೇರಿ : ಬಸ್ಸಿನಿಂದ ಜಿಗಿದು ಮಾಜಿ ಸೈನಿಕ ಆತ್ಮಹತ್ಯೆ








