ಕಾರುಗಳಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಳ್ಳುವುದು ಯಾಕೆ..?

1 min read
ACCIDENT

ಚಲಿಸುತ್ತಿರುವ ಕಾರುಗಳಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಳ್ಳುವುದು ಯಾಕೆ..?

ಬೆಂಗಳೂರು : ಬೇಸಿಗೆ ಕಾಲ ಬಂತಂದ್ರೆ ಸಾಕು ಅಗ್ನಿ ಅನಾಹುತಗಳ ಸಂಖ್ಯೆ ರಾಕೇಟ್ ವೇಗದಲ್ಲಿ ಹೆಚ್ಚಾಗುತ್ತವೆ. ಏಕಾಏಕಿ ಸಂಭವಿಸುವ ಅಗ್ನಿ ಅವಘಡಗಳಿಂದ ಕೆಲವೊಮ್ಮೆ ಪ್ರಾಣ ಹಾನಿ ಕೂಡ ಸಂಭವಿಸುತ್ತವೆ.

ಮುಖ್ಯವಾಗಿ ಚಲಿಸುತ್ತಿರುವ ಕಾರುಗಳಲ್ಲಿ ಬೆಂಕಿ ಕಾಣಿಸಿಕೊಳ್ಳೋದು ಬೇಸಿಗೆಯಲ್ಲಿ ಸರ್ವೇ ಸಾಮಾನ್ಯ. ನಡುರಸ್ತೆಯಲ್ಲಿ ಕಾರುಗಳು ಹೊತ್ತಿ ಉರಿಯೋದು ನಾವು ಕೇಳಿರುತ್ತೇವೆ, ನೋಡಿರುತ್ತೇವೆ. ಹಾಗಾದ್ರೆ ಈ ರೀತಿಯ ಘಟನೆಗಳಿಗೆ ಕಾರಣವೇನು..? ಮುಂದೆ ಓದಿ..

ಮೊದಲ ಕಾರಣ | ಸರಿಯಾಗಿ ಸರ್ವೀಸ್ ಮಾಡಿಸದೇ ಇರೋದು : ಕಾರುಗಳಲ್ಲಿ ಬೆಂಕಿ ಕಾಣಿಸಿಕೊಳ್ಳಲು ಪ್ರಮುಖ ಕಾರಣ ಕಾಲ ಕಾಲಕ್ಕೆ ಸರಿಯಾಗಿ ಸರ್ವೀಸ್ ಮಾಡಿಸದೇ ಇರುವುದು. ಸರ್ವೀಸ್ ಮಾಡಿಸದೇ ಯದ್ವಾ ತದ್ವಾ ಕಾರು ಓಡಿಸುವುದರಿಂದ ಅಗ್ನಿ ಅವಘಡಗಳಾಗುವ ಸಾಧ್ಯತೆಗಳಿವೆ.

ಎರಡನೇ ಕಾರಣ | ಕಾಲಕಾಲಕ್ಕೆ ಕಾರಿನ ಆಯಿಲ್ ಬದಲಾಯಿಸದೇ ಇರೋದು : ಕಾರಿನ ಆಯಿಲ್ ಬದಲಾಯಿಸದೇ ಕಾರು ಚಲಾವಣೆ ಮಾಡುವುದರಿಂದ ಇಂಜಿನ್ ಬಿಸಿ ಬರುವ ಸಾಧ್ಯತೆಗಳಿದ್ದು, ಇದರಿಂದ ಬೆಂಕಿ ಹೊತ್ತಿಕೊಳ್ಳಬಹುದು.

ACCIDENT

ಮೂರನೇ ಕಾರಣ | ಸಿಸ್ಟಮ್ಯಾಟಿಕ್ ಆಗಿ ವೈರಿಂಗ್ ಮಾಡದೇ ಇರುವುದು : ಕಾರು ಬೆಂಕಿ ಅವಘಡಗಳು ಸಂಭವಿಸಿದಾಗ ಹೆಚ್ಚಾಗಿ ಕೇಳಿ ಬರುವ ಕಾರಣ ಅಂದ್ರೆ ಅದು ಶಾರ್ಟ್ ಸಕ್ರ್ಯೂಟ್. ಎಷ್ಟೋ ಬಾರಿ ಕಾರುಗಳಲ್ಲಿ ಶಾರ್ಟ್ ಸಕ್ರ್ಯೂಟ್ ಆಗಿ ಕಾರುಗಳು ಸುಟ್ಟು ಭಸ್ಮವಾಗಿರುವ ಪ್ರಕರಣಗಳನ್ನ ನಾವು ನೋಡಿದ್ದೇವೆ. ಕಾರಿನಲ್ಲಿ ಸಿಸ್ಟಮ್ಯಾಟಿಕ್ ಆಗಿ ವೈರಿಂಗ್ ಮಾಡದೇ ಇರುವುದು ಕೂಡ ಅಗ್ನಿ ಅವಘಡಗಳಿಗೆ ಕಾರಣವಾಗಬಹುದು.

ನಾಲ್ಕನೇ ಕಾರಣ | ಕಾರಿನಲ್ಲಿ ಕನಿಷ್ಟ 1/4 ರಷ್ಟು ತೈಲ ( ಪೆಟ್ರೋಲ್ ಡಿಸೇಲ್) ಇಲ್ಲದಿರುವುದು : ಚಲಿಸುತ್ತಿರುವ ಕಾರುಗಳು / ವಾಹನಗಳಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಳ್ಳಲು ಇದು ಕೂಡ ಒಂದು ಕಾರಣ. ಕಾರಿನಲ್ಲಿ ಕನಿಷ್ಠ 1/4 ರಷ್ಟು ಪೆಟ್ರೋಲ್, ಡಿಸೇಲ್ ಇಲ್ಲದೇ ಕಾರನ್ನ ವೇಗವಾಗಿ ಓಡುಸುವುದರಿಂದ ಅಗ್ನಿ ಅವಘಡಗಳು ಸಂಭವಿಸುತ್ತವೆ.

ಐದನೇ ಕಾರಣ | ಅತೀ ವೇಗವಾಗಿ ದೀರ್ಘ ಸಮಯದವರೆಗೆ ಕಾರು ಚಲಾಯಿಸುವುದು : ಈ ಕಾರಣ ಎಲ್ಲರಿಗೂ ತಿಳಿದೇ ಇದೆ. ಸಾಕಷ್ಟು ಬಾರಿ ಕಾರಿನಲ್ಲಿ ಹೋಗುವಾಗ
ಹಿರಿಯರು ಈ ಬಗ್ಗೆ ಎಚ್ಚರಿಸುತ್ತಲೆ ಇರುತ್ತಾರೆ. ಒಂದೇ ಸಮನೇ ವಾಹನಗಳನ್ನ ವೇಗವಾಗಿ ಓಡಿಸುವುದರಿಂದ ಇಂಜಿನ್ ಬಿಸಿಯಾಗಿ ಬೆಂಕಿ ಹತ್ತಿಕೊಳ್ಳೋದನ್ನ ನಾವು ನೋಡಿರುತ್ತೇವೆ. ಇದೇ ಕಾರಣಕ್ಕೆ ಲಾಂಗ್ ಡ್ರೈವ್ ಹೋಗುವವರು ಅಲ್ಲಲ್ಲಿ ವಾಹನಗಳನ್ನ ನಿಲ್ಲಿಸಿ ಮುಂದೆ ಸಾಗುತ್ತಾರೆ.

parking
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd