ಥಿಯೇಟರ್ ಗಳಲ್ಲಿ 50 % ಸೀಟಿಂಗ್ – ಕನ್ನಡದ ಯಾವೆಲ್ಲಾ ಸಿನಿಮಾಗಳಿಗೆ ಸಂಕಷ್ಟ..!

1 min read

ಥಿಯೇಟರ್ ಗಳಲ್ಲಿ 50 % ಸೀಟಿಂಗ್ –  ಕನ್ನಡದ ಯಾವೆಲ್ಲಾ ಸಿನಿಮಾಗಳಿಗೆ ಸಂಕಷ್ಟ..!

ಕೋವಿಡ್ 2ನೇ ಅಲೆ ಹಿನ್ನೆಲೆ ಸಿನಿಮಾರಂಗವನ್ನೇ ರಾಜ್ಯ ಸರ್ಕಾರ  ಮೊದಲಿಗೆ ಟಾರ್ಗೆಟ್ ಮಾಡಿದೆ. ಹೌದು  ಅನೇಕ ಜಿಲ್ಲೆಗಳ ಸಿನಿಮಾ ಮಂದಿರಗಳಲ್ಲಿ ಕೇವಲ 50 % ಸೀಟಿಂಗ್ ನಿರ್ಬಂಧ ಹೇರಿದೆ. ಮುಂದಿನ ದಿನಗಳಲ್ಲಿ ಇದು ಇಡೀ ರಾಜ್ಯಕ್ಕೆ ಅನ್ವಯವಾಗಬಹುದು.

ಆದ್ರೆ ಸಸರ್ಕಾರದ ಧಿಡೀರ್ ನಿರ್ಧಾರದಿಂದಾಗಿ ಯಾವೆಲ್ಲಾ ಕನ್ನಡ ಸಿನಿಮಾಗಳಿಗೆ ತೊಂದರೆಯಾಗಲಿದೆ.. ಸಿನಿಮಾಗಳು ಮುಂದೂಡಿಕೆ ಯಾಗುತ್ವಾ… ಸಿನಿಮಾರಂಗದವರ ಮುಂದಿನ ನಡೆ ಏನು..?

ಯವರತ್ನ

ಮೊದಲಿಗೆ ಕೇವಲ 2 ದಿನಗಳ ಹಿಂದಷ್ಟೇ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ  ಕಲೆಕ್ಷನ್ ಮಾಡುತ್ತಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ಯುವರತ್ನ’ ಸಿನಿಮಾ ಸದ್ಯ ಸಂಕಷ್ಟದ ಸುಳಿಯಲ್ಲಿ ಸಿಲುಕಿದೆ. ರಿಲೀಸ್ ಆದ ಮೊದಲನೇ ದಿನವೇ ಪೈರೆಸಿ ಸುಳಿಯಲ್ಲಿ ಸಿಲುಕಿದ್ದ ಸಿನಿಮಾಗೆ ಸರ್ಕಾರದ ಆದೇಶ ಶಾಕ್ ನೀಡಿದ್ದು, ಪುನೀತ್ ರಾಜ್ ಕುಮಾರ್ , ಸಿನಿಮಾ ಟೀಂ ,ಅಪ್ಪು ಫ್ಯಾನ್ಸ್ ಬೇಸರಗೊಂಡಿದ್ದಾರೆ.

ಈ ವಾರಾಂತ್ಯದಲ್ಲಿ ಒಳ್ಳೆಯ ಕಲೆಕ್ಷನ್ ಆಗಬಹುದು. ಫ್ಯಾಮಿಲಿ ಸಮೇತ ಜನರು ಥಿಯೇಟರ್ ಗಳಿಗೆ ಬಂದು ಸಿನಿಮಾ ಕಣ್ತುಂಬಿಕೊಳ್ಳಬಹುದು ಎಂದು ಕೊಂಡಿದ್ದ ಚಿತ್ರತಂಡದ ನೀರಿಕ್ಷಗೆ , ಯೋಜನೆಗೆ ಸರ್ಕಾರ ತಣ್ಣೀರೆರೆಚಿದೆ.

ಸಲಗ

ಇನ್ನೂ ಸ್ಯಾಂಡಲ್ ವುಡ್ ನ ಮತ್ತೊಂದು ಬಹುನಿರೀಕ್ಷೆಯ ಸಿನಿಮಾ ಅಂದ್ರೆ ಅದು ಸಲಗ. ದುನಿಯಾ ವಿಜಯ್ ಅವರೇ ನಟಿಸಿ ನಿರ್ದೇಶಿಸಿರುವ ಸಲಗ ಸಹ ಇದೇ ತಿಂಗಳೇ ಅಂದ್ರೆ ಏಪ್ರಿಲ್ 15 ಕ್ಕೆ ರಿಲೀಸ್ ಆಗಬೇಕಿತ್ತು. ಆದ್ರೆ ಸರ್ಕಾರದ ನೀಇಯಿಂದ ಸಿನಿಮಾ ತಂಡ ಗೊಂದಲಕ್ಕೆ ಸಿಲುಕಿದ್ದು, ರಿಲೀಸ್ ಡೇಟ್ ಪೋಸ್ಟ್ ಪೋನ್ ಮಾಡುವ ಸಾಧ್ಯತೆಯಿದೆ.

ಕೋಟಿಗೊಬ್ಬ 3

ಒನ್ ಆಫ್ ದ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ ಕೋಟಿಗೊಬ್ಬ 3 ಸಹ ಏಪ್ರಿಲ್ 29 ರಂದೇ ರಿಲೀಸ್ ಆಗಲಿದೆ ಎಂದು ಹೇಳಲಾಗ್ತಿತ್ತು. ಆದ್ರೆ ಈಗಿನ ಬೆಳವಣಿಗೆಗಳನ್ನ ಗಮನಿಸಿದ್ರೆ ಸಿನಿಮಾ ರಿಲೀಸ್ ಡೇಟ್ ಪೋಸ್ಟ್ ಪೋನ್ ಆಗೋದು ಕನ್ ಫರ್ಮ್ ಅನ್ನಿಸುತ್ತಿದೆ.  prajwal devaraj

‘ಅರ್ಜುನ್ ಗೌಡ’

ಇನ್ನೂ ಇತ್ತೀಚೆಗಷ್ಟೇ ಪ್ರಜ್ವಲ್ ದೇವರಾಜ್ ಅವರ ಅಭಿನಯದ ಇನ್ಸ್ ಪೆಕ್ಟರ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಈ ಸಿನಿಮಾದ ಸಕ್ಸಸ್ ಸಂತಸದಲ್ಲಿರುವ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ನಟನೆಯ ಮತ್ತೊಂದು ಸಿನಿಮಾ ‘ಅರ್ಜುನ್ ಗೌಡ’ ಸಹ ಇದೇ ತಿಂಗಳೇ ಅಂದ್ರೆ ಏ. 23ಕ್ಕೆ ರಿಲೀಸ್ ಆಗಬೇಕಾಗಿತ್ತು. ಆದ್ರೆ ಈ ಸಿನಿಮಾ ಕೂಡ ಮುಂದೂಡಿಕೆಯಾಗುವ ಚಾನ್ಸಸ್ ಇದೆ.

ಇನ್ನೂ ಕೇವಲ ಈ ತಿಂಗಳೇ ರಿಲೀಸ್ ಆಗೋ ಸಿನಿಮಾಗಳಿಗೆ ಮಾತ್ರ ಸರ್ಕಾರದ ನೀತಿಯಿಂದ ಸಂಕಷ್ಟ ಎದುರಾಗಬಹುದಾ ಅಥವಾ ಮುಂದಿನ 3 ತಿಂಗಳುಕಾಲ ಕಾಲ ಸರ್ಕಾರದ ಈ ನಿಯಮ ಅನ್ವಯ ಆಗಬಹುದಾ… ಹಾಗೆ ಆದ್ರೆ ಮೇ, ಜೂನ್ ಜುಲೈ ನಲ್ಲಿ ರಿಲೀಸ್ ಗೆ ನಿಂತಿರುವ ಸಿನಿಮಾಗಳಿಗೂ ತೊಂದರೆಯಾಗಲಿದ್ದು, ಸಿನಿಮಾ ರಿಲೀಸ್ ಡೇಟ್ ಮುಂದೆ ಹೋಗಬಹುದು.

ಪ್ರಮುಖವಾಗಿ  ರಾಕಿಂಗ್ ಸ್ಟಾರ್ ಯಶ್ ಅಭಿನಯದ ಹೈ ವೋಲ್ಟೇಜ್ ಸಿನಿಮಾ KGF ಚಾಪ್ಟರ್ 2 , ರೋರಿಂಗ್ ಸ್ಟಾರ್ ಅಭಿನಯದ ಮದಗಜ, ಭಜರಂಗಿ 2, ವಿಕ್ರಾಂತ್ ರೋಣ ಇನ್ನೂ ಹಲವು..

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd