Train General Ticket: ರೈಲಿನ ಜನರಲ್ ಟಿಕೆಟ್ ಖರೀದಿಸುವುದು ಈಗ ಇನ್ನಷ್ಟು ಸುಲಭ…
ರೈಲು ನಿಲ್ದಾಣಗಳ ಜನರಲ್ ಟಿಕೆಟ್ ಕೌಂಟರ್ಗಳಲ್ಲಿ ಜನ ದಟ್ಟಣೆಯನ್ನು ಕಡಿಮೆ ಮಾಡಲು ರೈಲ್ವೆ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ.
UTSA (ಅನ್ ರಿಸರ್ವ್ಡ್ ಟಿಕೆಟ್ ಬುಕಿಂಗ್ ಸಿಸ್ಟಮ್) ಅಪ್ಲಿಕೇಶನ್ನಲ್ಲಿ ಹಲವು ಬದಲಾವಣೆಗಳನ್ನ ಮಾಡಿದ್ದು, ಪ್ರಯಾಣಿಕರು ಯಾವುದೇ ನಿಲ್ದಾಣದಿಂದ 20 ಕಿ.ಮೀ ದೂರದವರೆಗೆ ಜನರಲ್ ಟಿಕೆಟ್ ಅನ್ನು ಬುಕ್ ಮಾಡಬಹುದು.
ಅಂದರೆ, ಒಬ್ಬ ಪ್ರಯಾಣಿಕ ತಾನು ರೈಲು ಹತ್ತಲು ಬಯಸುವ ನಿಲ್ದಾಣದ 20 ಕಿಮೀ ವ್ಯಾಪ್ತಿಯೊಳಗಡೆ ಎಲ್ಲಿಂದಲಾದರೂ UTS ಮೂಲಕ ಜನರಲ್ ಟಿಕೆಟ್ ಖರೀದಿಸಬಹುದು.
ಮೊದಲು ಈ ವ್ಯಾಪ್ತಿಯು ಕೇವಲ ಐದು ಕಿ.ಮೀ. ಇದಲ್ಲದೆ, ಉಪ-ನಗರ (ಸ್ಥಳೀಯ ರೈಲುಗಳು) ಸೇವೆಗಳ ವ್ಯಾಪ್ತಿಯನ್ನು ಎರಡರಿಂದ ಐದು ಕಿಲೋಮೀಟರ್ಗಳಿಗೆ ಹೆಚ್ಚಿಸಲಾಗಿದೆ. ಈ ಸಂಬಂಧ ಈಗಾಗಲೇ ಎಲ್ಲಾ ರೈಲ್ವೆ ವಲಯಗಳಿಗೆ ಆದೇಶಗಳನ್ನು ಕಳುಹಿಸಲಾಗಿದೆ.
Train General Ticket : Buying a train general ticket is now even easier…








