ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ : ಕೋವಿಡ್ ಪೂರ್ವದಲ್ಲಿದ್ದಂತೆ ಟಿಕೆಟ್ ದರ ನಿಗದಿ
ನವದೆಹಲಿ : ಕೊರೊನಾ ಪಡುಗು ಕಾಣಿಸಿಕೊಂಡಿದ್ದ ನಂತರ ರೈಲು ಟಿಕೆಟ್ ದರವನ್ನ ದುಬಾರಿ ಮಾಡಲಾಗಿತ್ತು.. ಆದ್ರೀಗ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ.. ಎಕ್ಸ್ ಪ್ರೆಸ್ ಸೇರಿದಂತೆ ಎಲ್ಲ ರೈಲುಗಳ ಟಿಕೆಟ್ ದರಗಳನ್ನು ಕೋವಿಡ್–19 ಪಿಡುಗು ಕಾಣಿಸಿಕೊಳ್ಳುವುದಕ್ಕೂ ಮೊದಲು ಇದ್ದಂತೆಯೇ ನಿಗದಿ ಮಾಡಿ ಭಾರತೀಯ ರೈಲ್ವೆ ಶುಕ್ರವಾರ ಆದೇಶ ಹೊರಡಿಸಿದೆ.
ಹೌದು ಈ ದರಗಳು ತಕ್ಷಣದಿಂದ ಜಾರಿಗೆ ಬರಲಿವೆ ಎಂದು ರೈಲ್ವೆ ತಿಳಿಸಿದೆ. ಕೋವಿಡ್ ನಂತರ ಕೆಲವು ವರ್ಗಗಳ ವಿಶೇಷ ರೈಲುಗಳ ಟಿಕೆಟ್ಗೆ ಮಾಮೂಲಿ ದರಕ್ಕಿಂತ ಶೇ 30ರಷ್ಟು ಹೆಚ್ಚು ದರ ನಿಗದಿ ಮಾಡಲಾಗಿತ್ತು. ಟಿಕೆಟ್ ದರಗಳಲ್ಲಿನ ಈ ಬದಲಾವಣೆಗಳನ್ನು ತಕ್ಷಣ ಜಾರಿಗೊಳಿಸುವಂತೆ ರೈಲ್ವೆ ಸಚಿವಾಲಯ ಸೂಚನೆ ನೀಡಿದೆ. ಆದರೆ ಸಾಫ್ಟ್ ವೇರ್ ನಲ್ಲಿ ಬದಲಾವಣೆ ಮಾಡುವುದು ಸೇರಿ ತಾಂತ್ರಿಕ ಕಾರಣಗಳಿಂದಾಗಿ ಅನುಷ್ಠಾನ ಕೆಲ ದಿನಗಳ ಕಾಲ ವಿಳಂಬವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.