ತರಬೇತಿ ನಿರತ IRB ಪೊಲೀಸ್ ಸಾವು
ವಿಜಯಪುರ: IRB (Indian Reserve Battalion) ತರಬೇತಿ ಪಡೆಯುತ್ತಿದ್ದ ವೇಳೆ ತರಬೇತಿ ನಿರತ ಐಆರ್ ಬಿ ಪೊಲೀಸ್ ಸಾವನ್ನಪ್ಪಿರುವ ಘಟನೆ ಜಾರ್ಖಾಂಡನಲ್ಲಿ ನಡೆದಿದೆ.
ರಾಜಕುಮಾರ ಗೋಟ್ಯಾಳ್ (42) ಮೃತ ಐಆರ್ಬಿ ಪೊಲೀಸ್. ಇವರು IRB ತರಬೇತಿ ಪಡೆಯುತ್ತಿದ್ದ ವೇಳೆ ಹೃದಯಾಘಾತದಿಂದ ಮೃತ ಪಟ್ಟಿದ್ದಾರೆ. ಇವರು ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಬರಡೋಲ ಗ್ರಾಮದ ನಿವಾಸಿಯಾಗಿದ್ದಾರೆ
ರಾಜಕುಮಾರ ಅವರು ಕಳೆದ ನಾಲ್ಕು ತಿಂಗಳ ಹಿಂದೆ ತರಬೇತಿಗಾಗಿ ಜಾರ್ಖಂಡ್ಗೆ ತೆರಳಿದ್ದರು. ತರಬೇತಿ ವೇಳೆ ಹೃದಯಾಘಾತದಿಂದ ಮೃತ ಪಟ್ಟಿದ್ದಾರೆ. ಇವರು ಪತ್ನಿ, ಓರ್ವ ಪುತ್ರ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇಂದು ರಾಜಕುಮಾರ ಪಾರ್ಥೀವ ಶರೀರ ಬರಡೋಲ ಗ್ರಾಮಕ್ಕೆ ಆಗಮಿಸಿತ್ತು. ಗ್ರಾಮದಲ್ಲಿ ರಾಜಕುಮಾರ ಪಾರ್ಥೀವ ಶರೀರದ ಮೆರವಣಿಗೆ ಮಾಡಿ ಸಾರ್ವಜನಿಕ ದರ್ಶನಕ್ಕೆ ಅನುವು ಮಾಡಿ ಕೊಡಲಾಯಿತು. ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಅಂತ್ಯಕ್ರಿಯೆ ನಡೆಸಲಾಯಿತು.