ಮುಷ್ಕರದ ಎಚ್ಚರಿಕೆ ಕೊಟ್ಟ ಸಾರಿಗೆ ನೌಕರರು Transport employees saaksha tv
ಬೆಂಗಳೂರು : ಮೂರು ತಿಂಗಳ ಬಳಿಕ ರಾಜ್ಯ ಸಾರಿಗೆ ನೌಕರರು ಮತ್ತೆ ಮುಷ್ಕರದ ಎಚ್ಚರಿಕೆ ನೀಡಿದ್ದಾರೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೆಪ್ಟೆಂಬರ್ 20 ರಂದು ಅಂದರೇ ಸೋಮವಾರ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಷನ್ ನೇತೃತ್ವದಲ್ಲಿ ಫ್ರೀಡಂ ಪಾರ್ಕ್‍ನಲ್ಲಿ ಸಾರಿಗೆ ನೌಕರರು ಧರಣಿ ನಡೆಸಲಿದ್ದಾರೆ.
ಈ ಧರಣಿಯಲ್ಲಿ ಬಿಎಂಟಿಸಿ, ಕೆಎಸ್ ಆರ್‍ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ನೌಕರರು ಭಾಗಿಯಾಗಲಿದ್ದಾರೆ.
ಹೀಗಾಗಿ ಸೋಮವಾರ ಬಸ್ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ದಟ್ಟವಾಗಿದೆ.
ಅಂದಹಾಗೆ ಈ ಹಿಂದೆ ಆರನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ಸಾರಿಗೆ ನೌಕರರು ದೀರ್ಘಾವಧಿ ಮುಷ್ಕರ ನಡೆಸಿದ್ದರು.
ಸರ್ಕಾರದ ಮಾತಿಗೂ ಜಗ್ಗದ ನೌಕರರು ಕಡೆಗೆ ಕೋರ್ಟ್ ಮಧ್ಯಪ್ರವೇಶಕ್ಕೆ ಬಗ್ಗಿ ಕೆಲಸದಲ್ಲಿ ತೊಡಗಿದ್ದರು.









