ಭಾರತದ ಪ್ರಿಯ ಮಿತ್ರ ರಾಷ್ಟ್ರ, ಅತಿ ಹೆಚ್ಚು ಶ್ರೀಮಂತರು ಇರುವ ರಾಷ್ಟ್ರ, ನಿಗೂಢತೆಗಳಿಂದ ಕೂಡಿರುವ ಪ್ರಾಚೀನ ರಾಷ್ಟ್ರ ರಷ್ಯಾ.!
ಭಾರತದ ಪ್ರಿಯ ಮಿತ್ರ ರಾಷ್ಟ್ರ , ವಿಸ್ತ್ರೀರ್ಣದಲ್ಲಿ ವಿಶ್ವದ ಅತಿ ದೊಡ್ಡ ರಾಷ್ಟ್ರ, ಅತಿ ಹೆಚ್ಚು ಶ್ರೀಮಂತರು ಇರುವ ರಾಷ್ಟ್ರ, ನಿಗೂಢತೆಗಳಿಂದ ಕೂಡಿರುವ , ವಿಶ್ವದ ಪ್ರಾಚೀನ ರಾಷ್ಟ್ರಗಳಲ್ಲಿ ಒಂದು, ವಿಶ್ವದ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಒಂದು ರಷ್ಯಾ.. ರಷ್ಯಾದ ಕುತೂಹಲಕಾರಿ ಇಂಟರೆಸ್ಟಿಂಗ್ ವಿಚಾರಗಳ ಬಗ್ಗೆ ನಾವಿವತ್ತು ತಿಳಿಯೋಣ.
ರಷ್ಯಾ ವಿಸ್ತ್ರೀರ್ಣದಲ್ಲಿ ವಿಶ್ವದ ಅತಿ ದೊಡ್ಡ ರಾಷ್ಟ್ರ – ಒಟ್ಟಾರೆ 1 ಕೋಟಿ , 75 ಲಕ್ಷ 400 ಕಿ.ಮೀ ವಿಸ್ತೀರರ್ಣ.
ಈ ದೇಶದ ಜನಸಂಖ್ಯೆ ಸುಮಾರು 15 ಕೋಟಿ – ಪುರುಷರ ಪೈಕಿ ಮಹಿಳೆಯರೇ ಹೆಚ್ಚು
ರಾಜದಾನಿ – ಮಾಸ್ಕೋ
ರಷ್ಯಾದಲ್ಲಿ ಅನೇಕ ನಿಗೂಢತೆಗಳಿವೆ.. ಇದಕ್ಕೆ ಉದಾಹರಣೆ ಅಂದ್ರೆ ರಷ್ಯಾದಲ್ಲಿ ಸುಮಾರು 20 ನಗರಗಳು ನಿಗೂಢತೆಯಿಂದ ಕೂಡಿವೆ.. ಈ ನಗರಗಳ ಬಗ್ಗೆ ಖುದ್ದು ಆ ದೇಶದ ಜನರಿಗೂ ಕೂಡ ಯಾವುದೇ ಮಾಹಿತಿ ಇಲ್ಲ.
ಇನ್ನೂ ಗಾಡಿಗಳನ್ನ ರಸ್ತೆಗಿಳಿಯುವಮುನ್ನ ಅವುಗಳು ಸ್ವಚ್ಛವಾಗಿದ್ಯಾ ಅನ್ನೋದನ್ನ 100 ಬಾರಿ ಚೆಕ್ ಮಾಡಿದ್ರೆ ಒಳ್ಳೇದು.. ಕಾರಣ ಇಲ್ಲಿನ ಕಾನೂನಿನ ಪ್ರಕಾರ ಪ್ರತಿನಿತ್ಯ ಗಾಡಿಗಳನ್ನ ತೊಳೆದು ರಸ್ತೆಗಳಿಗೆ ಇಳಿಸಬೇಕು. ಇಲ್ಲದೇ ಹೋದಲ್ಲಿ ಶಿಕ್ಷೆಯೂ ಆಗಬಹುದು. ಸೀದಾ ಜೈಲಿಗೂ ಕಳುಹಿಸಬಹುದು.
ಇನ್ನೂ ರಷ್ಯಾದಲ್ಲಿ ಬಹುತೇಕರು 55 ವರ್ಷದೊಳಗೇ ಮೃತಪಡುತ್ತಾರೆಂದು ವರದಿಗಳು ತಿಳಿಸಿವೆ..
2011ರವರೆಗೂ ಈ ದೇಶದಲ್ಲಿ ಬಿಯರ್ ಅನ್ನು ಆಲ್ಕೊಹಾಲ್ ಲಿಸ್ಟ್ ಗೆ ಸೇರಿಸಲಾಗಿರಲಿಲ್ಲ. ಬದಲಾಗಿ ಇದನ್ನ ಸಾಫ್ಟ್ ಡ್ರಿಂಕ್ಸ್ ಎಂದೇ ಪರಿಗಣಿಸಲಾಗಿತ್ತು. ಅಲ್ಲದೇ ಸಾಮಾನ್ಯ ಕೋಲ್ಡ್ ಡ್ರಿಂಕ್ಸ್ ಗಳ ರೀತಿ ಯಾರು ಎಲ್ಲಿ ಬೇಕಿದ್ರೂ ಯಾವುದೇ ಅಡೆತಡೆಗಳಿಲ್ಲದೇ ಬಿಯರ್ ಕುಡಿಯಬಹುದಾಗಿತ್ತು. ಆದ್ರೆ 2011ರ ನಂತರ ಆಗಿನ ರಷ್ಯಾದ ಅಧ್ಯಕ್ಷರಾಗಿದ್ದ ಧಿಮಿತ್ರಿ ಮಡ್ವೆಡೇವ್ ಅವರ ಅಧಿಕಾರಾವಧಿಯಲ್ಲಿ ಬಿಯರ್ ಅನ್ನ ಆಲ್ಕೋಹಾಲ್ ಎಂದು ಗೋಷಣೆ ಮಾಡಲಾಯ್ತು. ಇದಾದ ಬಳಿಕ ಯಾರೂ ಎಲ್ಲಿ ಬೇಕಾದ್ರೂ ಅಲ್ಲಿ ಬಿಯರ್ ಗಳನ್ನ ಕುಡಿಯದಂತೆ ನಿಯಮಗಳನ್ನ ಹೇರಲಾಯ್ತು.
ಭಾರತ ಮತ್ತು ರಷ್ಯಾ ಮಿತ್ರದೇಶಗಳು.. ರಷ್ಯಾ ಜೊತೆಗೆ ಭಾರತದ ಸಂಬಂಧ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗಿನಿಂದ್ ಹಿಡಿದು ಇಲ್ಲಿಯವರೆಗೂ ಉತ್ತಮವಾಗಿದೆ.. ಅಲ್ಲದೇ ಬಾರತವು ರಷ್ಯಾದ ಸಹಾಯದಿಂದಲೇ ಪಾಕಿಸ್ತಾನದ ವಿರುದ್ಧ ಯುದ್ಧದಲ್ಲಿ ಜಯಗಳಿಸಿದ್ದ ವಿಚಾರವೂ ಎಲ್ರಿಗೂ ಗೊತ್ತೇ ಇದೆ.
ಗಡ್ಡದ ಮೇಲೆ ಟ್ಯಾಕ್ಸ್… ಇದೇನಪ್ಪ ಯಾರಾದ್ರೂ ಎಲ್ಲಾದ್ರೂ ದಾಡಿ ಬೆಳೆಸೋದಕ್ಕೆ ಟ್ಯಾಕ್ಸ್ ಪೇ ಮಾಡೋದು ಉಂಟಾ ಅಂತ ಆಶ್ಚರ್ಯ ಪಡಬೇಡಿ.. ರಷ್ಯಾದಲ್ಲಿ ಒಂದು ಸಮಯದಲ್ಲಿ ಈ ರೀತಿಯಾದ ನಿಯಮ ಆಗಿನ ರಾಜ ಪೀಟರ್ ದ ಗ್ರೇಟ್ ಶಾಸನದಲ್ಲಿ ಮಾಡಲಾಗಿತ್ತು. ಆಗಿನ ಸಂದರ್ಭದಲ್ಲಿ ಗಡ್ಡ ಬೆಳೆಸಿದ್ರೆ ಟ್ಯಾಕ್ಸ್ ಕಟ್ಟಬೇಕಾಗಿತ್ತು.
ಸಮಾನ್ಯವಾಗಿ ಸಾಕು ಪ್ರಾಣಿಗಳು ಅಂದ್ರೆ , ನಾಯಿ , ಬೆಕ್ಕು , ಮೊಲ , ಇಲಿ , ಅಬ್ಬಬ್ಬಾ ಅಂದ್ರೆ ಕೆಲವು ಕಡೆ ತೀರ ಕಟ್ಟುನಿಟ್ಟಿನ ಕ್ರಮಗಳ ನಂತರ ಆನೆಗಳನ್ನೂ ಸಹ ಸಾಕುವ ಅನುಮತಿ ಇದೆ.. ಆದ್ರೆ ರಷ್ಯಾದಲ್ಲಿ ನರಿಗಳನ್ನೂ ಸಾಕಬಹುದು.. ಹೌದು ಅಷ್ಟೇ ಅಲ್ಲ ಮನೆಗಳಲ್ಲೂ ನರಿಗಳನ್ನ ಸಾಕುವ ಅವಕಾಶವಿದೆ. ಆದ್ರೆ ಮನೆಯಿಮದ ಆಚೆ ಬಿಡುವಂತಿಲ್ಲ.
ಇಲ್ಲಿನ ಜನರು ಹೆಚ್ಚಾಗಿ ನಶೆಗೆ ( ಮದ್ಯಪಾನ) ಅಡಿಕ್ಟ್ ಆಗಿರುತ್ತಾರೆ.. ಆದ್ರೆ ಪ್ರತಿ ವರ್ಷ ಈ ದೇಶದಲ್ಲಿ ಮದ್ಯ ಸೇವನೆಯ ಕಾರಣದಿಂದಾಗಿ ಸುಮಾರು 5 ಲಕ್ಷಕ್ಕೂ ಅಧಿಕ ಮಂದಿ ಸಾವನಪ್ಪುತ್ತಾರೆ.
ಭಾರತ ಹಾಗೂ ಇಡೀ ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳಲ್ಲೂ ಯಾರನ್ನಾದ್ರೂ ಭೇಟಿಯಾದ ಸಂದರ್ಭದಲ್ಲಿ ಇಲ್ಲ ಪ್ರೇಮ ನಿವೇದನೆ ವೇಳೆ ಹೂಗಳನ್ನ ನೀಡಲಾಗುತ್ತದೆ.. ಆದ್ರೆ ರಷ್ಯಾದಲ್ಲಿ ಈ ರೀತಿ ಹೂಗಳನ್ನ ನೀಡುವಂತಿಲ್ಲ.
ಪ್ರವಾಸಿ ತಾಣಗಳು
ಮಾಸ್ಕೋ – ರಷ್ಯಾದ ಹೃದಯ ಮಾಸ್ಕೋ ಈ ದೇಶದ ರಾಜಧಾನಿಯೂ ಹೌದು. ಪ್ರವಾಸಿಗರ ಹಾಟ್ ಪೇವರೇಟ್ ತಾಣವೂ ಕೂಡ.
ಸೇಂಟ್ ಪೀಟ್ಸ್ ಬರ್ಗ್ – ರಷ್ಯಾದ ಸಾಹೀ ರಾಜಧಾನಿ ಎಂದು ಕರೆಸಿಕೊಳ್ಳುವ ಸುಂದರ ನಗರ. ಇಲ್ಲಿ ಅನೇಕ ಶಾಹೀ ಮೆಹಲ್ ಗಳು , ಮ್ಯೂಸಿಯಮ್ ಗಳು ಇಲ್ಲಿವೆ..
ನೋವೋಸಿಬಿರಿಕ್ , ಕಾಜನ್ , ಸಮಾರಾ, ಸೋಚಿ