ಶಶಿ ತರೂರ್ ಸೇರಿದಂತೆ 7 ಮಂದಿ ಪತ್ರಕರ್ತರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು..!
ಗಣರಾಜ್ಯೋತ್ಸವದಂದು ರಾಷ್ಟ್ರ ರಾಜಧಾನಿ ದೆಹಲಿ ರೈತರ ಪ್ರತಿಭಟನೆಯಿಂದಾಗಿ ಅಕ್ಷರಸಹ ರಣಾಂಗಣವಾಗಿ ಮಾರ್ಪಾಡಾಗಿತ್ತು. ಇದೀಗ ದೆಹಲಿಯಲ್ಲಿ ನಡೆದ ರೈತರ ಟ್ರ್ಯಾಕ್ಟರ್ ಪೆರೇಡ್ ಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ಶಶಿ ತರೂರ್ ಸೇರಿದಂತೆ ಆರು ಹಿರಿಯ ಪತ್ರಕರ್ತರ ವಿರುದ್ಧ ನೊಯ್ಡಾ ಪೊಲೀಸ್ ಠಾಣೆಯಲ್ಲಿ ದೇಶ ದ್ರೋಹದ ಪ್ರಕರಣ ದಾಖಲಾಗಿದೆ.
ನಮ್ಮಲ್ಲಿ ಭಾಷಾಭಿಮಾನ ಇಲ್ಲ : ದರ್ಶನ್
ಹೌದು ಕಾಂಗ್ರೆಸ್ ಸಂಸದ ಶಶಿ ತರೂರ್ ಸೇರಿದಂತೆ 7 ಮಂದಿ ಪತ್ರಕರ್ತರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ಗಳಾದ 124 ಎ (ದೇಶದ್ರೋಹ), 504 (ಉಲ್ಲಂಘನೆಯನ್ನು ಪ್ರಚೋದಿಸುವ ಉದ್ದೇಶಪೂರ್ವಕ ಅವಮಾನ), 295 ಎ (ಯಾವುದೇ ವರ್ಗದ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು), 506 (ಕ್ರಿಮಿನಲ್ ಬೆದರಿಕೆ), 34 ( ಆಯಕ್ಟ್ ಡನ್ ಬೈ ಸೆವೆರಲ್ ಫರ್ದರೆನ್ಸ್ ಆಫ್ ಕಾಮನ್ ಇನ್ ಟೆನ್ಶನ್ ), 120 ಬಿ (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ದೆಹಲಿ ಸಿಂಘು ಗಡಿಯಲ್ಲಿ ಸ್ಥಳೀಯರು ರೈತರ ನಡುವೆ ಪರಿಸ್ಥಿತಿ ಉದ್ವಿಘ್ನ : ಲಾಠಿ ಚಾರ್ಜ್ ಪ್ರಯೋಗ
ಜ.26ರಂದು ಗಣರಾಜ್ಯೋತ್ಸವ ಸಂದರ್ಭದಲ್ಲಿ ರೈತರ ಟ್ರ್ಯಾಕ್ಟರ್ ಪೆರೇಡ್ ದೆ ಸಂಸದ ಶಶಿ ತರೂರ್ ಸೇರಿದಂತೆ 7 ಮಂದಿ ಹಿರಿಯ ಪತ್ರಕರ್ತರ ವಿರುದ್ಧ ದೂರು ದಾಖಲಾಗಿದೆ. ಗಲಭೆಗೆ ಮೃಣಾಲ್ ಪಾಂಡೆ, ರಾಜದೀಪ್ ಸರ್ದೇಸಾಯಿ, ವಿನೋದ್ ಜೋಸ್, ಜಾಫರ್ ಅಘ, ಪರೇಶ್ ನಾಥ್ ಹಾಗೂ ಆನಂತ್ ನಾಥ್ ಸಾಮಾಜಿಕ ಮಾಧ್ಯಮಗಳಲ್ಲಿ, ಡಿಜಿಟಲ್ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದ್ದ ಪೋಸ್ಟ್ ಗಳು ಕಾರಣವೆಂದು ಸ್ಥಳೀಯರೊಬ್ಬರು ನೊಯ್ಡಾ ಪೆಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆ ದೂರು ದಾಖಲು ಮಾಡಿಕೊಳ್ಳಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







