ನಮ್ಮಲ್ಲಿ ಭಾಷಾಭಿಮಾನ ಇಲ್ಲ : ದರ್ಶನ್
ನಮ್ಮಲ್ಲಿ ಭಾಷಾಭಿಮಾನ ಇಲ್ಲ, ನಾನು ಓಪನ್ ಆಗಿ ಹೇಳ್ತೀನಿ ಎಂದು ನಟ ದರ್ಶನ್ ಹೇಳಿದ್ದಾರೆ.
ಬೆಂಗಳೂರು : ಆಂಧ್ರ ಮತ್ತು ತೆಲಂಗಾಣದಲ್ಲಿ ರಾಬರ್ಟ್ ಸಿನಿಮಾ ರಿಲೀಸ್ ಗೆ ಅಡ್ಡಿ ಹಿನ್ನೆಲೆ ಇಂದು ನಟ ದರ್ಶನ್ ಕನ್ನಡ ಫಿಲಂ ಚೇಂಬರ್ ಗೆ ದೂರು ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಭಾಷಾಭಿಮಾನ ಇಲ್ಲ, ನಾನು ಓಪನ್ ಆಗಿ ಹೇಳ್ತೀನಿ.
ಬೇರೆ ಭಾಷಿಕರಿಗಿರುವ ಭಾಷಾಭಿಮಾನ ನಾವು ಬೆಳಸಿಕೊಳ್ಳಬೇಕು. ನಾವು ಅಲ್ಲಿಗೆ ಹೋದ್ರೆ ನಾವು ಅವರ ಭಾಷೆಯಲ್ಲಿ ಮಾತನಾಡಬೇಕು. ಅವರು ನಮ್ಮ ಭಾಷೆಯಲ್ಲಿ ಮಾತಾಡಲ್ಲ.
ಅವರು ಇಲ್ಲಿ ಬಂದ್ರೆ ಅವರ ಭಾಷೆಯಲ್ಲೇ ನಾವು ಮಾತನಾಡುತ್ತೇವೆ ಎಂದು ಬೇಸರ ಹೊರಹಾಕಿದರು.
ಅಲ್ಲದೆ ನಮ್ಮಲ್ಲಿ ಪರಭಾಷೆ ಬೆಂಬಲಿಸುವ ಕೆಲಸ ನಿಲ್ಲಬೇಕು. ಸಮಸ್ಯೆ ಬಂದಾಗ ನಾವು ನಿರ್ಮಾಕರ ಜೊತೆ ನಿಲ್ಲಬೇಕು ಎಂದು ಕರೆಕೊಟ್ಟರು.
ಇನ್ನು ಇದೇ ವೇಳೆ ಆಂಧ್ರದಲ್ಲಿ ರಾಬರ್ಟ್ ಸಿನಿಮಾ ರಿಲೀಸ್ ಗೆ ಅಡ್ಡಿ ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅವರಿಗೆ ನಾವು ಬಂದು ಮಾರ್ಕೆಟ್ ಕಬ್ಜ ಮಾಡ್ತೀವಿ ಅಂತ ಹೆದರಿಕೆ ಆಗುತ್ತಿದೆ.
ಅದಕ್ಕೆ ಈ ರೀತಿ ಮಾಡುತ್ತಿದ್ದಾರೆ. ನನ್ನ ಸಿನಿಮಾ ರಿಲೀಸ್ ಆಗುವ ಡೇಟ್ ನಲ್ಲೇ ಅಲ್ಲಿ ಕೆಲ ಸಿನಿಮಾಗಳು ರಿಲೀಸ್ ಆಗುತ್ತಿವೆ ಅಂತೆ.
ಇದೇ ಕಾರಣಕ್ಕೆ ನನ್ನ ಸಿನಿಮಾ ರಿಲೀಸ್ ಗೆ ಅಡ್ಡಿ ಮಾಡುತ್ತಿದ್ದಾರೆ. ಆದ್ರೆ ನಮ್ಮಲ್ಲಿ ಮಾತ್ರ ಈ ರೀತಿ ಆಗುತ್ತಿಲ್ಲ. ಅವರ ಸಿನಿಮಾಗಳನ್ನ ನಮಲ್ಲಿ ಗ್ರ್ಯಾಂಡ್ ಆಗಿ ರಿಲೀಸ್ ಮಾಡುತ್ತಿದ್ದೇವೆ.
ಮೊದಲು ಅದು ನಿಲ್ಲಬೇಕು ಎಂದು ಗರಂ ಆದರು. ನಾನು 50 ಸಿನಿಮಾಗಳನ್ನು ಮಾಡಿದ್ದೇನೆ. ನನ್ನ ವಿಚಾರ ಬಿಡಿ. ಮುಂದೆ ಬರೋ ಯುವ ನಟರಿಗೆ ತೊಂದರೆ ಆಗಬಾರದು ಎಂದರು.
ಇನ್ನು ಈ ಬಗ್ಗೆ ತೆಲುಗು ಫಿಲಂ ಚೇಂಬರ್ ಜೊತೆ ಚರ್ಚೆ ಮಾಡುತ್ತೇವೆ. ಸೌತ್ ಇಂಡಿಯಾ ಫಿಲಂ ಚೇಂಬರ್ ಜೊತೆ ಕೂಡ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸುವುದಾಗಿ ತಿಳಿದ್ದಾರೆ ಎಂದು ತಿಳಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel