Trevor Bayliss | ಪಂಜಾಬ್ ಕಿಂಗ್ಸ್ ಗೆ ಹೆಡ್ ಕೋಚ್ ಆಗಿ ಟ್ರವರ್ ಬೆಲಿಸ್ ನೇಮಕ
ಐಪಿಎಲ್ ಫ್ರಾಂಚೈಸಿ ಪಂಜಾಬ್ ಕಿಂಗ್ಸ್ ಹೆಡ್ ಕೋಚ್ ಆಗಿ ಆಸ್ಟ್ರೇಲಿಯಾ ಮಾಜಿ ಫಸ್ಟ್ ಕ್ಲಾಸ್ ಆಟಗಾರ ಟ್ರವರ್ ಬೆಲಿಸ್ ಆಯ್ಕೆ ಆಗಿದ್ದಾರೆ.
ಈ ವಿಷಯವನ್ನು ಸೋಶಿಯಲ್ ಮೀಡಿಯಾದ ಮೂಲಕ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ತಿಳಿಸಿದೆ.
ನಮ್ಮ ಹೊಸ ಕೋಚ್ ಟ್ರವರ್ ಬೆಲಿಸ್ ಗೆ ಭವ್ಯ ಸ್ವಾಗತ. ಇನ್ನು ತಂಡವನ್ನು ಗೆಲುವಿನತ್ತ ನಡೆಸುತ್ತಾರೆ ಎಂದು ಭಾವಿಸುತ್ತೇವೆ ಎಂದಿದೆ.
ಇನ್ನು 2022ರ ಸೀಸನ್ ವರೆಗೂ ಕನ್ನಡಿಗ ಅನಿಲ್ ಕುಂಬ್ಳೆ ತನ್ನ ಕೋಚ್ ಹುದ್ದೆಯಿಂದ ಕೆಳಗಿಳಿದರು.
ಟ್ರವರ್ ಬೆಲಿಸ್ ಗೆ ಕೋಚ್ ಆಗಿ ಅಪಾರವಾದ ಅನುಭವವಿದೆ.
2019 ಏಕದಿನ ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡದ ಕೋಚ್ ಆಗಿ ಟ್ರವರ್ ವ್ಯವಹರಿಸಿದ್ದರು.
2015 ರಿಂದ 2019ರವರಗೆ ಇಂಗ್ಲೆಂಡ್ ತಂಡದ ಕೋಚ್ ಆಗಿದ್ದರು.
ಅದೇ ರೀತಿ 2012, 2014 ರ ಐಪಿಎಲ್ ಚಾಂಪಿಯನ್ಸ್ ಕೆಕೆಆರ್ ಗೆ ಸಪೋರ್ಟಿಂಗ್ ಸ್ಟಾಪ್ ಅಲ್ಲಿದ್ದರು.
2020, 2021 ಸೀಸನ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಗೆ ಹೆಡ್ ಕೋಚ್ ಆಗಿದ್ದರು.