ಕೋಲ್ಕೊತಾ: ಪಶ್ಚಿಮ ಬಂಗಾಳದಲ್ಲಿ ಮಾಹಾಮಾರಿ ಕೊರೊನಾ ಅಬ್ಬರ ತೀವ್ರಗೊಂಡಿದ್ದು, ತೃಣಮೂಲ ಕಾಂಗ್ರೆಸ್‌ನ(ಟಿಎಂಸಿ) ಶಾಸಕರೊಬ್ಬರು ಬಲಿಯಾಗಿದ್ದಾರೆ.
ಬಂಗಾಳದ ಫಾಲ್ತಾ ವಿಧಾನಸಭಾ ಕ್ಷೇತ್ರದ ಟಿಎಂಸಿ ಶಾಸಕ ತಮೋನಾಶ್ ಘೋಶ್(೬೦) ಕೊರೊನಾದಿಂದ ಮೃತಪಟ್ಟಿದ್ದಾರೆ. ಇದರೊಂದಿಗೆ ಪಶ್ಚಿಮ ಬಂಗಾಳದಲ್ಲಿ ಮೊದಲ ರಾಜಕಾರಣಿಯೊಬ್ಬರು ಕೊರೊನಾಗೆ ಬಲಿಯಾದಂತಾಗಿದೆ.
ದಕ್ಷಿಣ ೨೪ ಪರಗಣ ಜಿಲ್ಲೆಯ ಫಾಲ್ತಾ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿದ್ದ ತಮನಾಶ್ ಘೋಷ್, ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಕೊರೊನಾ ಪಾಸಿಟಿವ್ ಬಂದಿತ್ತು. ಮೊದಲೇ ಹೃದಯ ಹಾಗೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಘೋಷ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಘೋಷ್ ನಿಧನಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಘೋಷ್ ನನ್ನೊಂದಿಗೆ ೩೫ ವರ್ಷಗಳಿಂದ ರಾಜಕೀಯ ಒಡನಾಟ ಹೊಂದಿದ್ದರು. ಟಿಎಂಸಿಯ ಖಜಾಂಚಿಯಾಗಿಯೂ ಕೆಲಸ ಮಾಡುತ್ತಿದ್ದರು. ಪಕ್ಷದ ಕೆಲಸದ ಜತೆಗೆ ಸಾಮಾಜಿಕ ಸೇವೆಯಲ್ಲೂ ಘೋಷ್ ಮುಂದಿದ್ದರು. ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿರುವ ಘೋಷ್ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ದೇವರು ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.
ಬಿಜೆಪಿ ಪಾದಯಾತ್ರೆಗೆ ಸೊಪ್ಪು ಹಾಕಬೇಡಿ :ಸರ್ಕಾರದ ನೂರು ದಿನಗಳ ಪಥ ಸರಿಯಾಗಿದೆ ಸಿದ್ದರಾಮಯ್ಯರಿಂದ ಡಿಕೆಶಿ ತಂಡಕ್ಕೆ ಭರ್ಜರಿ ಬೆಂಬಲ
ರಾಜ್ಯ ರಾಜಕಾರಣದಲ್ಲಿ ಬಿಜೆಪಿಯ ಪಾದಯಾತ್ರೆ ಮತ್ತು ಕಾಂಗ್ರೆಸ್ ಸರ್ಕಾರದ ನೂರು ದಿನಗಳ ಸಂಭ್ರಮದ ನಡುವೆ ಹೊಸ ವಾಕ್ಸಮರ ಶುರುವಾಗಿದೆ. ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೇತೃತ್ವದ ಸರ್ಕಾರ...








