ಮಗುವಿಗೆ ಹಾಲು ಖರೀದಿಸಲು ಹಣ ಕೇಳಿದ್ದಕ್ಕೆ ಪತ್ನಿಗೆ ಫೋನ್ ನಲ್ಲೇ ತಲಾಖ್ ಕೊಟ್ಟ ನೀಚ..!
ಉತ್ತರಪ್ರದೇಶ : ತ್ರಿವಳಿ ತಲಾಕ್ ಅನ್ನೋ ಅನಿಷ್ಟ ಪದ್ಧತಿಯನ್ನ ಸರ್ಕಾರ ರದ್ದು ಮಾಡಿದ್ರೂ ಕೂಡ ಇಂತಹ ಪ್ರಕರಣಗಳು ಅಲ್ಲಲ್ಲಿ ಬೆಳಕಿಗೆ ಬರುತ್ತಲೇ ಇರೋದು ಬೇಸರದ ಸಂಗತಿಯಾಗಿದೆ. ಉತ್ತರಪ್ರದೇಶದದಲ್ಲಿ ಇಂತಹದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಮನೆ ಬಾಡಿಗೆ ಕಟ್ಟಲು, ಮಗುವಿಗೆ ಹಾಲು ಖರೀದಿಸಲು ಹಣ ಕೇಳಿದ ಹಿನ್ನೆಲೆ ಮಹಿಳೆಯೊಬ್ಬಳಿಗೆ ಆತನ ಪತಿ ಫೋನ್ ಮೂಲಕವೇ ತಲಾಖ್ ನೀಡಿರುವ ಘಟನೆ ಕಾನ್ಪುರದಲ್ಲಿ ನಡೆದಿದೆ. 2005 ರಲ್ಲಿ ಪ್ರಯಾಗರಾಜ್ ನ ಅಫ್ಸರ್ ಎಂಬಾತನನ್ನ ಶಬಾನಾ ಬೇಗಂ ಎಂಬಾಕೆ ವಿವಾಹವಾಗಿದ್ದರು. ಅಂದಿನಿಂದ ಅಫ್ಸರ್ಶಬಾನಾಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಚಿತ್ರಹಿಂಸೆ ನೀಡುತ್ತಿದ್ದಂತೆ. ಪ್ರತಿನಿತ್ಯ ಥಳಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದನಂತೆ. ಇತ್ತ ಮನೆ ನಡೆಸಲು ಬಾಡಿಗೆ ಕಟ್ಟಲು, ಮಕ್ಕಳ ಖರ್ಚಿಗೂ ಹಣ ನೀಡದೆ ಸತಾಯಿಸುತ್ತಿದ್ದನಂತೆ.
ಹುಲಿ ಹಾಗೂ ಮರಿಯ ಪ್ರೀತಿಗೆ ನೀವೇನಂತೀರಾ… ವಿಡಿಯೋ ನೋಡಿ..!
ಈ ಎಲ್ಲದ್ದರಿಂದ ಬೇಸತ್ತಿದ್ದ ಶಬಾನಾ, 2014 ರಲ್ಲಿ ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಬಳಿಕ ಅಫ್ಸರ್ ನಾನು ಅವಳೊಂದಿಗೆ ಸಂಸಾರ ಮಾಡುತ್ತೇನೆ ಎಂದು ಒಪ್ಪಿ ಪುನಃ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಆದರೆ, ಕಳೆದ ನವೆಂಬರ್ 4, 2020 ರಲ್ಲಿ ಫೋನ್ ಮಾಡಿ ಮಗುವಿಗೆ ಹಾಲು ತರಲು ಹಣ ಕೇಳಿದಾಗ, ಆತ ಫೋನ್ ನಲ್ಲಿಯೇ 3 ಬಾರಿ ತಲಾಕ್ ಎಂದು ಹೇಳೋ ಮೂಲಕ ತಲಾಖ್ ನೀಡಿದ್ದಾನೆ ಎಂದು ಶಬಾನಾ ಆರೋಪಿಸಿದ್ದಾರೆ.
ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗ್ತಿದೆ ಉಪ್ಮಾ : swiggy ವಿರುದ್ಧ ನೆಟ್ಟಿಗರು ಗರಂ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel