VIRAT | ವಿರಾಟ್ ಮೇಲೆ ಮುಗಿಬೀಳುತ್ತಿದ್ದಾರೆ “ಡಿ ಬಾಸ್” ಫ್ಯಾನ್ಸ್
ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಮೇಲೆ ಧೋನಿ ಅಭಿಮಾನಿಗಳು ಯದ್ವಾತದ್ವಾ ಮುಗಿಬೀಳುತ್ತಿದ್ದಾರೆ. ನಿನ್ನ ಸ್ಥಾನ ಏನು..? ಎಂಬದನ್ನ ತಿಳಿದುಕೋ ಎಂಬಂತೆ ಏಕವಚನದಲ್ಲಿ ಟೀಕೆ ಮಾಡುತ್ತಿದ್ದಾರೆ.
ಹೌದು..!! ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು, ನಿಗದಿತ 20 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತ್ತು. ಆರ್ ಸಿಬಿ ಪರ ವಿರಾಟ್ ಕೊಹ್ಲಿ 33 ಎಸೆತಗಳನ್ನು ಎದುರಿಸಿ 30 ರನ್ ಗಳಿಸಿ ಮೊಯಿನ್ ಅಲಿ ಬೌಲಿಂಗ್ ನಲ್ಲಿ ಬೌಲ್ಡ್ ಆದರು.
ಇನ್ನು ಆರ್ ಸಿಬಿ ನೀಡಿದ 173 ರನ್ ಗಳ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್, ರುತುರಾಜ್ ಗಾಯಕ್ವಾಡ್ (28) ಮತ್ತು ಡೆವೊನ್ ಕಾನ್ವೆ (56) ಚೆನ್ನೈಗೆ ಉತ್ತಮ ಆರಂಭ ನೀಡಿದರು. ಉತ್ತಪ್ಪ (1) ಮತ್ತು ಅಂಬಟಿ ರಾಯುಡು (10) ರನ್ ಗಳಿಸಿ ಸಂಪೂರ್ಣ ನಿರಾಸೆ ಮೂಡಿಸಿದರು. ಮೊಯಿನ್ ಅಲಿ 34 ರನ್ ಗಳಿಸಿದರೆ, ಜಡೇಜಾ 3 ರನ್ ಗಳಿಸಿ ಔಟಾದರು. ಏಳನೇ ಕ್ರಮಾಂಕದಲ್ಲಿ ಬಂದ ಧೋನಿ 19ನೇ ಓವರ್ನ ಮೊದಲ ಎಸೆತದಲ್ಲಿ ಜೋಶ್ ಹ್ಯಾಜಲ್ವುಡ್ ಬೌಲಿಂಗ್ನಲ್ಲಿ ರಜತ್ ಪಟಿದಾರ್ ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು.
ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಮ್ಯಾಚ್ ಗೆದ್ದಂತೆ ಸಂಭ್ರಮಿಸಿದರು. ಇದು ಸದ್ಯ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಧೋನಿ ಇದ್ದರೇ ಎಲ್ಲವೂ ಸಾಧ್ಯ, ಎಂತಹ ಪಂದ್ಯವನ್ನಾದ್ರೂ ಧೋನಿ ತಮ್ಮ ಬ್ಯಾಟಿಂಗ್ ಮೂಲಕ ಪಂದ್ಯ ಗತಿಯನ್ನ ಬದಲಿಸುತ್ತಾರೆ. ಧೋನಿ ಕ್ರೀಸ್ ನಲ್ಲಿರುವವರೆಗೂ ಆರ್ ಸಿಬಿಗೆ ಸೋಲಿನ ಭೀತಿ ಇದ್ದೇ ಇತ್ತು. ಹೀಗಾಗಿ ಧೋನಿ ವಿಕೆಟ್ ಪಡೆಯುತ್ತಿದ್ದಂತೆ ವಿರಾಟ್ ತಮ್ಮದೇಯಾದ ರೀತಿಯಲ್ಲಿ ಸಂಭ್ರಮಿಸಿದರು. ಆದ್ರೆ ಇಲ್ಲಿ ವಿರಾಟ್ ಕೊಹ್ಲಿ ಆಕ್ಷೇಪಾರ್ಹ ಭಾಷೆ ಬಳಸಿದ್ದಾರಂತೆ ಎಂದು ಧೋನಿ ಅಭಿಮಾನಿಗಳು ಕ್ರೋಧಗೊಂಡಿದ್ದಾರೆ.
ನಿನ್ನ ಕ್ಯಾಪ್ಟನ್ ಗೆ ನೀನು ಕೊಡೋ ಗೌರವ ಇದಾ..? ಇಷ್ಟು ಕೆಳಮಟ್ಟದಲ್ಲಿ ಸಂಭ್ರಮಿಸುತ್ತೀಯಾ..? ಎಂದು ನೆಟ್ಟಿಗರು ಕೊಹ್ಲಿ ವಿರುದ್ಧ ಕಿಡಿಕಾರುತ್ತಿದ್ದಾರೆ. https://twitter.com/Iamrahul8787/status/1521932914182672385?ref_src=twsrc%5Etfw%7Ctwcamp%5Etweetembed%7Ctwterm%5E1521932914182672385%7Ctwgr%5E%7Ctwcon%5Es1_c10&ref_url=https%3A%2F%2Fwww.sakshi.com%2Ftelugu-news%2Fsports%2Fipl-2022-trolls-virat-kohli-aggressive-celebration-ms-dhoni-dismissal-1453885
trolls-virat-kohli-aggressive-celebration