ಟ್ರಂಪ್ ರನ್ನ ಜೈಲಲ್ಲಿ ಹಾಕಿ ಅತ್ಯಾಚಾರ ಮಾಡಬೇಕು: ನಟಿ ಹೀಗೆ ಟ್ವೀಟ್ ಮಾಡಿದ್ದೇಕೆ..!
ಅಮೆರಿಕಾ ಅಮೆರಿಕಾದ ನಿರ್ಗಮಿತ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರ ಮೇಲೆ ನಟಿ ಡೆಬ್ರಾ ಮೆಸ್ಸಿಂಗ್ ಮತ್ತೊಮ್ಮೆ ಎರಗಿ ಬಿದ್ದಿದ್ದಾರೆ. ಟ್ವೀಟ್ ನಲ್ಲಿ ಡೆಬ್ರಾ ನೀಡಿರೋ ಹೇಳಿಕೆ ಸಿಕ್ಕಾಪಟ್ಟೆ ಟ್ರೋಲ್ ಆಗ್ತಾಯಿದೆ.
ಟ್ವೀಟ್ ನಲ್ಲಿ ಏನಿದೆ..!
ಡೆಬ್ರಾ ಟ್ವೀಟ್ ಮಾಡಿ ‘ಡೊನಾಲ್ಡ್ ಟ್ರಂಪ್ ಅಧಿಕಾರಾವಧಿ ಮುಕ್ತಾಯಗೊಂಡು ಶ್ವೇತಭವನದಿಂದ ಅವರು ನಿರ್ಗಮಿಸುತ್ತಿದ್ದಂತೆಯೇ ಅವರನ್ನು ಜೈಲಿನಲ್ಲಿ ಇರಿಸಬೇಕು. ಅಲ್ಲಿ ಎಲ್ಲ ಖೈದಿಗಳಿಗೆ ಇವರು ಬಾಯ್ಫ್ರೆಂಡ್ ಆಗಬೇಕು. ಎಲ್ಲರೂ ಸೇರಿ ಟ್ರಂಪ್ ರನ್ನು ರೇಪ್ ಮಾಡಬೇಕು’ ಎಂದು ಕಿಡಿಕಾರಿದ್ದಾರೆ.
‘ಹಳ್ಳಿ ಹಕ್ಕಿ’ಗೆ ಗಾಳ ಹಾಕಿತೇ ‘ಬಿಗ್ ಬಾಸ್’ : ದೊಡ್ಮನೆಗೆ ಎಂಟ್ರಿಯಾಗ್ತಾರಾ..!
ಇಷ್ಟಕ್ಕೆ ಸುಮ್ಮನಾಗದ ಡೆಬ್ರಾ ಈ ತಮ್ಮ ಟ್ವೀಟ್ ಅನ್ನು ಟ್ರಂಪ್ ಅವರಿಗೂ ಟ್ಯಾಗ್ ಮಾಡಿದ್ದಾರೆ. ನೀವು ದುರ್ಬಲ, ಪ್ರತೀಕಾರಕ್ಕೆ ಬಯಸುವ ವ್ಯಕ್ತಿ, ಕ್ರಿಮಿನಲ್, ಅಸಮರ್ಥ, ಅವಿವೇಕಿ ಮಾತ್ರವಲ್ಲದೇ ಭಯಭೀತಗೊಂಡಿರುವ ವ್ಯಕ್ತಿ ಎಂದು ನಿಂದಿಸಿ ತಮ್ಮ ಟ್ವೀಟ್ ಗೆ ಅಡಿಬರಹವನ್ನೂ ಕೊಟ್ಟಿದ್ದಾರೆ.
ಈ ಟ್ವೀಟ್ ಸಿಕ್ಕಾಪಟ್ಟೆ ಟೀಕೆಗೆ ಆಕ್ರೋಶಕ್ಕೆ ಗುರಿಯಾದ ನಂತರ ಇದನ್ನ ಡಿಲೀಟ್ ಮಾಡಲಾಗಿದೆ. ಸದ್ಯ ಡಿಲೀಟ್ ಆಗೋಕು ಮುಂಚೆ ತೆಗೆದಿಟ್ಟಿರೋ ಕೆಲ ಸ್ಕ್ರೀನ್ ಶಾಟ್ ಗಳು ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಅಂದ್ಹಾಗೆ ಡೆಬ್ರಾ ಇದೇ ಮೊದಲ ಬಾರಿಗೆ ಟ್ರಂಪ್ ವಿರುದ್ಧ ಗುಡುಗಿಲ್ಲ. ಆಗಾಗ ಟ್ರಂಪ್ ವಿರುದ್ಧ ವಾಗ್ದಾಳಿಯನ್ನ ನಡೆಸುತ್ತಲೇ ಇರುತ್ತಾರೆ. ಇದೀಗ ಶೀಘ್ರವೇ ಟ್ರಂಪ್ ಅಧಿಕಾರಾವಧಿ ಮುಕ್ತಾಯವಾಗಲಿದ್ದು, ಜೋ ಬಿಡೆನ್ ಅಧಿಕಾರಕ್ಕೇರಲಿದ್ದಾರೆ. ಇದರ ಬೆನ್ನಲ್ಲೇ ಈ ರೀತಿಯಾದ ಟ್ವೀಟ್ ಮಾಡಿ ಅನೇಕರಿಂದ ಟೀಕೆಗೆ ಗುರಿಯಾಗಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








