ಬೆಂಗಳೂರು: ಪ್ಯಾಂಟ್ ಜಿಪ್ ಲೈನ್ ನಲ್ಲಿ ವ್ಯಕ್ತಿಯೊಬ್ಬ ಚಿನ್ನ ಸಾಗಾಟ ಮಾಡಲು ಹೋಗಿ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ.
ಈ ಘಟನೆ ಬೆಂಗಳೂರು ಏರ್ಪೋರ್ಟ್ನಲ್ಲಿ (Bengaluru Airport) ಬೆಳಕಿಗೆ ಬಂದಿದೆ. ಸದ್ಯ ಪ್ರಯಾಣಿಕನನ್ನು ಏರ್ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈ ವ್ಯಕ್ತಿ ಶಾರ್ಜಾದಿಂದ ಬಂದಿದ್ದ ಎನ್ನಲಾಗಿದೆ. ಈತ ಪೇಸ್ಟ್ ರೂಪದಲ್ಲಿ ಚಿನ್ನ ಕಳ್ಳಸಾಗಣೆ (Gold Smuggling) ಮಾಡುತ್ತಿದ್ದ. ಪ್ಯಾಂಟ್ ಜಿಪ್ನಲ್ಲಿ 18.57 ಲಕ್ಷ ರೂ. ಮೌಲ್ಯದ 284 ಗ್ರಾಂ ಚಿನ್ನವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ವ್ಯಕ್ತಿ ಚಿನ್ನದೊಂದಿಗೆ ಸಿಗರೇಟ್ ಸ್ಟಿಕ್ ಹಾಗೂ ಸೌಂದರ್ಯವರ್ಧಕ ಪಾಕೇಟ್ ಸಾಗಾಟ ಮಾಡುತ್ತಿದ್ದ ಎನ್ನಲಾಗಿದೆ.